ಶೂಟೌಟ್ ಕೇಸು: 17 ಮಂದಿಯನ್ನು ಬಂಧಿಸಿದ ಕ್ಯಾಲಿಪೋರ್ನಿಯಾದ ಪೊಲೀಸರು!
Team Udayavani, Apr 19, 2023, 6:35 AM IST
ವಾಷಿಂಗ್ಟನ್: ಅಮೆರಿಕದ ಸ್ಟಾಕ್ಟೋನ್ನಲ್ಲಿ ಇರುವ ಸಿಖ್ ಸಮುದಾಯದ ಧಾರ್ಮಿಕ ಕೇಂದ್ರ ಸೇರಿದಂತೆ ಹಲವು ಸ್ಥಳಗಳಲ್ಲಿ ಶೂಟೌಟ್ ನಡೆಸಿದ ಆರೋಪಗಳಿಗೆ ಸಂಬಂಧಿಸಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಸ್ಥಳೀಯ ಸಿಖ್ ಸಮುದಾಯದ ಯುವಕರೂ ಸೇರಿದ್ದಾರೆ ಎಂದು ಉತ್ತರ ಕ್ಯಾಲಿಪೋರ್ನಿಯಾದ ಪೊಲೀಸರು ತಿಳಿಸಿದ್ದಾರೆ.
ಅವರಿಂದ ಎಕೆ 47 ರೈಫಲ್, ಹ್ಯಾಂಡ್ಗನ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಒಟ್ಟು 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಮಾ.23ರಂದು ಸಾಕ್ರಮೆಂಟೋದಲ್ಲಿನ ಸಿಖ್ ಧಾರ್ಮಿಕ ಕೇಂದ್ರದಲ್ಲಿ ಶೂಟೌಟ್ ಸೇರಿ 11 ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ.