ಚಾಟ್ಜಿಪಿಟಿ ದುರ್ಬಳಕೆ: ಮೊದಲ ಅರೆಸ್ಟ್
Team Udayavani, May 9, 2023, 6:10 AM IST
ಬೀಜಿಂಗ್: ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿಕೊಂಡು ನಕಲಿ ಸುದ್ದಿ ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ಚೀನ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಚಾಟ್ ಜಿಪಿಟಿ ದುರ್ಬಳಕೆಗಾಗಿ ಚೀನದಲ್ಲಿ ಬಂಧನವಾದ ಮೊದಲ ಪ್ರಕರಣ ಇದಾಗಿದೆ. ಹಾಂಗ್ ಎಂಬಾತ ಚಾಟ್ಜಿಪಿಟಿ ಬಳಸಿ, “ಸ್ಥಳೀಯ ರೈಲೊಂದು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ’ ಎಂಬ ನಕಲಿ ಸುದ್ದಿಯನ್ನು ಎಐ ತಂತ್ರಜ್ಞಾನದ ಸಹಾಯ ದಿಂದ ಸೃಷ್ಟಿಸಿದ್ದಾನೆ. ಇದನ್ನು ಬೈಜಿಯಾಹೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ಚೀನ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಗಮನಿಸುವ ವೇಳೆಗೆ, 20ಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, 15,000ಕ್ಕೂ ಹೆಚ್ಚು ವೀವ್ಗಳು ಪಡೆದಿತ್ತು. ಇದನ್ನು ಅನಂತರ ಡಿಲೀಟ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ