ಚಿಲಿಯಲ್ಲಿ ಪ್ರಬಲ ಭೂಕಂಪ : ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲು
Team Udayavani, Apr 25, 2017, 9:17 AM IST
ಸ್ಯಾಂಟಿಯಾಗೋ : ಚಿಲಿಯ ಕರಾವಳಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿರುವ ಬಗ್ಗೆ ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.
ರಾಜಧಾನಿ ಸ್ಯಾಂಟಿಯಾಗೋದಿಂದ 137 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಭೂಮಿಯಿಂದ 15.5 ಮೈಲಿಗಳ ಆಳದಲ್ಲಿ ಕಂಪನದ ಬಿಂದು ಹೊಂದಿತ್ತು ಎಂದು ತಜ್ಞರು ತಿಳಿಸಿದ್ದಾರೆ.ಯಾವುದೇ ಹಾನಿಯ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಚಿಲಿಯಲ್ಲಿ 2010 ರಲ್ಲಿ ಭೂಕಂಪನ ಸಂಭವಿಸಿ ತ್ಸುನಾಮಿ ಅಲೆಗಳು ಎದ್ದು ಕರಾವಳಿ ಪ್ರದೇಶದ 500ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. 2015 ರಲ್ಲೂ ಪ್ರಬಲ ಭೂಕಂಪ ಸಂಭವಿಸಿ ಹಲವರು ಸಾವನ್ನಪ್ಪಿದ್ದರು.