ಸಿಂಗಾಪುರದ ಬೃಹತ್ ಸೈಬರ್ ಅಟ್ಯಾಕ್: 15 ಲಕ್ಷ ಆರೋಗ್ಯ ಡೇಟಾ ಕಳವು
Team Udayavani, Jul 20, 2018, 4:00 PM IST
ಸಿಂಗಾಪುರ : ಪ್ರದಾನಿ ಲೀ ಸೀನ್ ಲೂಂಗ್ ಸೇರಿದಂತೆ ಸುಮಾರು 15 ಲಕ್ಷ ಸಿಂಗಾಪುರ ಪ್ರಜೆಗಳ ಆರೋಗ್ಯ ದಾಖಲೆಗಳನ್ನು ಹ್ಯಾಕರ್ಗಳು ಕದ್ದಿದ್ದಾರೆ. ಇದೊಂದು ಅಭೂತಪೂರ್ವ ಹ್ಯಾಕಿಂಗ್ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಂಗಾಪುರದ ಇತಿಹಾಸದಲ್ಲೇ ನಡೆದಿರುವ ಅತೀ ದೊಡ್ಡ ಡೇಟಾ ಕಳವು ಇದಾಗಿದೆ ಮತ್ತು ಇದನ್ನು ಉದ್ದೇಶಪೂರ್ವಕವಾಗಿ, ಪೂರ್ವಯೋಜಿತವಾಗಿ ಮತ್ತು ಗುರಿ ಇರಿಸಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಮಾಹಿತಿ ಸಚಿವಾಲಯದ ಜಂಟಿ ಪ್ರಕಟನೆ ತಿಳಿಸಿದೆ.