ಯು.ಕೆ.ಸಿರಿವಂತರ ಪಟ್ಟಿಯಲ್ಲಿ ಹಿಂದೂಜಾ ಸೋದರರೇ ಫಸ್ಟ್
Team Udayavani, May 8, 2017, 1:27 AM IST
ಲಂಡನ್: ಭಾರತೀಯ ಮೂಲದ ಶ್ರೀಚಂದ್ ಹಿಂದೂಜಾ ಮತ್ತು ಗೋಪಿಚಂದ್ ಹಿಂದೂಜಾ ಯುನೈಟೆಡ್ ಕಿಂಗ್ಡಮ್ನ ಹಾಲಿ ವರ್ಷದ ಸಿರಿವಂತರ ಪಟ್ಟಿಯಲ್ಲಿ ಮೊದಲ ಪಟ್ಟಿಯಲ್ಲಿದ್ದಾರೆ. ‘ದ ಸಂಡೇ ಟೈಮ್ಸ್ ರಿಚ್ ಲಿಸ್ಟ್’ ಈ ಪಟ್ಟಿ ಸಿದ್ಧಪಡಿಸಿದೆ. ಒಂದು ಸಾವಿರ ಮಂದಿಯ ಈ ಪಟ್ಟಿಯಲಿ ಭಾರತೀಯ ಮೂಲದ 40 ಮಂದಿ ಶ್ರೀಮಂತರು ಸ್ಥಾನ ಪಡೆದಿದ್ದಾರೆ. ಹಿಂದೂಜಾ ಸಹೋದರರ ಒಟ್ಟು ಸಂಪತ್ತು 1, 35,271 ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು 26,720 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಭಾರತೀಯ ಮೂಲದ ಉದ್ಯಮಿ ಲಕ್ಷ್ಮೀನಿವಾಸ್ ಮಿತ್ತಲ್ 4ನೇ ಸ್ಥಾನ(1,10,463 ಕೋಟಿ ರೂ)ಪಡೆದಿದ್ದಾರೆ.
ಮಜುಂದಾರ್ ಯಶಸ್ವಿ ಉದ್ಯಮಿ: ‘ದ ಸಂಡೇ ಟೈಮ್ಸ್’ ಬಿಡುಗಡೆ ಮಾಡಿದ ವಿಶ್ವದ ಅಗ್ರ 20 ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಒಡತಿ ಕಿರಣ್ ಮುಜುಂದಾರ್ ಶಾ ಅವರು 6ನೇ ಶ್ರೀಮಂತ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ 9.6 ಸಾವಿರ ಕೋಟಿ ಆಸ್ತಿ ಹೊಂದುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
London: ಭಾರತೀಯ ಮೂಲದ ಮಹಿಳೆಗೆ ಬಸ್ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ