ಅಮೆರಿಕಕ್ಕೆ ಭಾರತೀಯ ಸಂಸದೆ?
Team Udayavani, Jun 26, 2018, 6:00 AM IST
ವಾಷಿಂಗ್ಟನ್: ಅನಿವಾಸಿ ಭಾರತೀಯ ಮಹಿಳೆಯೊಬ್ಬರು ಅಮೆರಿಕ ಸಂಸತ್ನ ಮೇಲ್ಮನೆ (ಹೌಸ್ ಆಫ್ ರೆಪ್ರಸೆಂ. ಟೇಟಿವ್ಸ್) ಪ್ರವೇಶಿಸಲು ತುದಿಗಾಲಿ ನಲ್ಲಿ ನಿಂತಿದ್ದಾರೆ. ಮೂಲತಃ ಹೈದರಾಬಾದ್ನವರಾದ ಸಿವಿಲ್ ಎಂಜಿನಿಯರ್ ಅರುಣಾ ಮಿಲ್ಲರ್ (53) ಡೆಮಾಕ್ರಾಟ್ ಬಾಹುಳ್ಯದ ಮೇರಿಲ್ಯಾಂಡ್ನಿಂದ ಸ್ಪರ್ಧೆಗಿಳಿ ದಿದ್ದು, ಮಂಗಳ ವಾರ ಪ್ರೈಮರಿ ಚುನಾವಣೆ ನಡೆಯ ಲಿದೆ. ಇಲ್ಲಿ ಇವರು ತಮ್ಮದೇ ಪಕ್ಷದ ಡೇವಿಡ್ ಟ್ರೋನ್ ಜತೆ ಸೆಣಸಲಿದ್ದಾರೆ. ಇವರು ಗೆದ್ದರೆ ನವೆಂಬರ್ನಲ್ಲಿ ನಡೆಯಲಿರುವ ಪ್ರಮುಖ ಚುನಾವಣೆ ಮೂಲಕ ಅಮೆರಿಕ ಸಂಸತ್ ಪ್ರವೇಶಿಸುವ ಸಾಧ್ಯತೆಯಿದೆ. ಆಗ ಅಮೆರಿಕ ಸಂಸತ್ ಪ್ರವೇಶಿಸಿದ 2ನೇ ಅನಿವಾಸಿ ಭಾರತೀಯ ಮಹಿಳೆ ಆಗಲಿ ದ್ದಾರೆ. ಇದಕ್ಕೂ ಮೊದಲು ವಾಷಿಂಗ್ಟನ್ನಿಂದ ಪ್ರಮಿಳಾ ಜಯಪಾಲ್ ಸಂಸತ್ಗೆ ಆಯ್ಕೆಯಾಗಿದ್ದಾರೆ.
1972ರಲ್ಲಿ 7 ವರ್ಷದವರಾಗಿದ್ದಾಗ ಮಿಲ್ಲರ್ ತಮ್ಮ ಪೋಷಕರೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಮಿಲ್ಲರ್ ವಿರುದ್ಧ ಸ್ಪರ್ಧಿಸುತ್ತಿರುವ ಡೇವಿಡ್ ಟ್ರೋನ್ ಚುನಾವಣೆಗಾಗಿ 70 ಕೋಟಿ ರೂ. ವ್ಯಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ