ಭಾರತೀಯ ಮೂಲದ ಸಲಿಂಗಿ ವಾರಡ್ಕರ್ ಐರ್ಲೆಂಡ್ ಪ್ರಧಾನಿ ಪಟ್ಟಕ್ಕೆ!
Team Udayavani, Jun 3, 2017, 9:52 AM IST
ನವದೆಹಲಿ: ಭಾರತೀಯ ಮೂಲದ ಸಲಿಂಗಿ ಸಚಿವ ಲಿಯೋ ವಾರಡ್ಕರ್ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕ್ಯಾಥೊಲಿಕ್ ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿ ಎಂಬ ಖ್ಯಾತಿ ಗಳಿಸಿದ್ದಾರೆ.
ಸಾಮಾಜಿಕ ಭದ್ರತೆ ಖಾತೆ ನಿರ್ವಹಿಸುತ್ತಿದ್ದ 38 ಹರೆಯದ ವಾರಡ್ಕರ್ ಅವರು ಗೃಹ ಖಾತೆ ಸಚಿವ ಸಿಮನ್ ಕೊವೆನೇ ಅವರನ್ನು ಭಾರೀ ಅಂತರದಿಂದ ಸೋಲುವ ಮೂಲಕ ನೂತನ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ.
ವಾರಡ್ಕರ್ ಆಯ್ಕೆ ಐರ್ಲೆಂಡ್ನಲ್ಲಿ ಆದ ಸಾಮಾಜಿಕ ಬದಲಾವಣೆಯನ್ನು ಗುರುತಿಸುತ್ತದೆ. 2015 ರಲ್ಲಿ ಸಲಿಂಗಿಗಳ ವಿವಾಹ ಕಾಯಿದೆ ತರಲು ಮತ ಚಲಾಯಿಸಿದ್ದ ಅವರು ಸಲಿಂಗಕಾಮಿ ಚಟುವಟಿಕೆಯನ್ನು ಕಾನೂನು ಬದ್ಧ ಗೊಳಿಸುವಲ್ಲಿ ಧ್ವನಿಯೆತ್ತಿದ ಯುರೋಪಿಯನ್ ಒಕ್ಕೂಟದ ಸದಸ್ಯರಲ್ಲಿ ಒಬ್ಬರು.
ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ 6ವರ್ಷಗಳ ಅಧಿಕಾರವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಚುನಾವಣೆ ನಡೆದಿದ್ದು, ಪಕ್ಷದ 65% ಪ್ರತಿನಿಧಿಗಳು ವಾರಡ್ಕರ್ ಬೆಂಬಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ