ವಿದ್ಯಾರ್ಥಿಗಳ, ಅಧ್ಯಯನಕಾರರ ಸ್ವರ್ಗ… ಖಾರ್ಕಿವ್‌

Team Udayavani, Feb 28, 2022, 7:20 AM IST

ವಿದ್ಯಾರ್ಥಿಗಳ, ಅಧ್ಯಯನಕಾರರ ಸ್ವರ್ಗ… ಖಾರ್ಕಿವ್‌

ಖಾರ್ಕಿವ್‌, ಉಕ್ರೇನ್‌ನ ಅತ್ಯಂತ ಎರಡನೇ ಅತಿದೊಡ್ಡ ನಗರ. ಅಲ್ಲದೆ, ಉಕ್ರೇನ್‌ನ ಸಾಂಸ್ಕೃತಿಕ ರಾಜಧಾನಿ. ಇತ್ತೀಚಿನ ವರ್ಷಗಳಲ್ಲಿ ಇದು ವಿದ್ಯಾ ನಗರಿಯೂ ಆಗಿ ಮಾರ್ಪಟ್ಟಿದ್ದು ವಿದ್ಯಾರ್ಥಿಗಳ, ಸಂಶೋಧಕರ ಸ್ವರ್ಗವೆನಿಸಿದೆ. ಭಾರತೀಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿರುವ ಆ ನಗರದ ವೈಶಿಷ್ಟ್ಯವೇನು ಎಂಬುದರ ಮಾಹಿತಿ ಇಲ್ಲಿದೆ.

ಜೀವನದ ಲೆಕ್ಕಾಚಾರ
ಉಕ್ರೇನ್‌ನ ಕರೆನ್ಸಿಯನ್ನು ಹ್ರಿವ್ನಿಯಾ ಎಂದು ಕರೆಯುತ್ತಾರೆ. ಉಕ್ರೇನ್‌ನ ಒಂದು ಹ್ರಿವ್ನಿಯಾ, ನಮ್ಮ ದೇಶದ 2.66 ರೂ.ಗಳಿಗೆ ಸಮ. ಅಮೆರಿಕದ ಒಂದು ಡಾಲರ್‌ ಭಾರತದ 75.08 ರೂ.ಗಳಿಗೆ ಸಮ. ಹಾಗಾಗಿ, ಅಮೆರಿಕದಲ್ಲಿ ಓದಲು ಮಾಡಬೇಕಾದ ಖರ್ಚಿಗೆ ಹೋಲಿಸಿದರೆ, ಖಾರ್ಕಿವ್‌ನಲ್ಲಿ ಓದುವ ಖರ್ಚು ಶೇ. 67ರಿಂದ 74ರಷ್ಟು ಕಡಿಮೆಯಿದೆ.

ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಡಿಗ್ರಿ
ಖಾರ್ಕಿವ್‌ನಲ್ಲಿ, ಸರ್ಕಾರಿ ಹಾಗೂ ಖಾಸಗಿ ಸೇರಿ 20ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸೀಟುಗಳ ಸಂಖ್ಯೆಯೂ ಹೆಚ್ಚಾಗಿವೆ. ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಸಿಗದವರ ಮುಂದಿನ ಆಯ್ಕೆ ಖಾರ್ಕಿವ್‌. ಅಲ್ಲಿ ವರ್ಷವೊಂದಕ್ಕೆ ಎಂಬಿಬಿಎಸ್‌ ವ್ಯಾಸಂಗಕ್ಕಾಗಿ ಟ್ಯೂಷನ್‌ ಶುಲ್ಕ ಸೇರಿ ಅಂದಾಜು 4ರಿಂದ 4.5 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಹಾಗಾಗಿ, ಆರು ವರ್ಷಗಳ ವೈದ್ಯಕೀಯ ಕೋರ್ಸ್‌ ಮುಗಿಸಲು ಎಲ್ಲಾ ಖರ್ಚು ವೆಚ್ಚಗಳು ಸೇರಿ, 24ರಿಂದ 29 ಲಕ್ಷ ರೂ. ಆಗುತ್ತದೆ.

ಖಾರ್ಕಿವ್‌ನಲ್ಲಿ ಇರುವ ಬಹುತೇಕ ವೈದ್ಯ ಕಾಲೇಜುಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂ ಎಚ್‌ಒ) ಪ್ರಮಾಣೀಕೃತಗೊಂಡಿವೆ. ಹಾಗಾಗಿ, ಅಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಬಂದರೆ ಇಡೀ ವಿಶ್ವದಲ್ಲಿ ಎಲ್ಲೇ ಹೋದರೂ ಉದ್ಯೋಗ ಗ್ಯಾರಂಟಿ ಹಾಗೂ ಸಂಬಳವೂ ಹೆಚ್ಚು.

ಯಾವ ಡಿಗ್ರಿಗೆ ಎಷ್ಟು ಶುಲ್ಕ?
ವೈದ್ಯಕೀಯ ಮಾತ್ರವಲ್ಲದೆ, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಅನೇಕ ವಿದ್ಯಾರ್ಥಿಗಳು ಖಾರ್ಕಿವ್‌ಗೆ ಆಗಮಿಸುತ್ತಾರೆ. ಅವರಿಗೂ ಇಲ್ಲಿ ಖರ್ಚು ವೆಚ್ಚ ಕಡಿಮೆಯೇ ಇದೆ.
ಕೋರ್ಸ್‌                  ವಾರ್ಷಿಕ ಸರಾಸರಿ ಟ್ಯೂಷನ್‌ ಶುಲ್ಕ (ಲಕ್ಷ ರೂ.ಗಳಲ್ಲಿ)
ಇಂಜಿನಿಯರಿಂಗ್‌                 1.71
ಕಂಪ್ಯೂಟರ್‌ ಸೈನ್ಸ್‌             1.71
ಸೋಷಿಯಲ್‌ ಸೈನ್ಸಸ್‌        1.85
ವೈದ್ಯಕೀಯ                          3.12
ಬ್ಯುಸಿನೆಸ್‌- ಫೈನಾನ್ಸ್‌          1.48
ಸ್ನಾತಕೋತ್ತರ ಪದವಿ          2.22

ತಿಂಗಳ ಖರ್ಚಿಗೆ 30 ಸಾವಿರ ರೂ. ಸಾಕು!
ಖಾರ್ಕಿವ್‌ನಲ್ಲಿ ಒಂದೊಂದು ಪ್ರಾಂತ್ಯದಲ್ಲಿ ಜೀವನದ ಖರ್ಚು ಒಂದೊಂದು ರೀತಿಯಲ್ಲಿದೆ. ಒಬ್ಬ ವಿದ್ಯಾರ್ಥಿಗೆ, ಖಾಸಗಿ ವಸತಿ ಬಾಡಿಗೆ, ಆಹಾರ, ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳು, ವಿದ್ಯುತ್‌ ಹಾಗೂ ನೀರಿನ ಬಿಲ್‌ ಎಲ್ಲಾ ಸೇರಿ ಸರಾಸರಿ 24ರಿಂದ 30 ಸಾವಿರ ರೂ. ತಗಲುತ್ತದೆ. ಇದರಲ್ಲಿ ವಾರಾಂತ್ಯದಲ್ಲಿ ವಿದ್ಯಾರ್ಥಿಯು ಪಡೆಯುವ ಮನರಂಜನಾ ವೆಚ್ಚವೂ ಸೇರುತ್ತದೆ!

ಖಾರ್ಕಿವ್‌ ಜೀವನದ ಮಾಸಿಕ ಅಂದಾಜು ಖರ್ಚು (ರೂ.ಗಳಲ್ಲಿ)
ಆಹಾರ 10,000
ಬಾಡಿಗೆ 16,000
ವಿದ್ಯುತ್‌-ಎಲ್‌ಪಿಜಿ 1,200
ನೀರು 1,350
ಪುಸ್ತಕ 147
ಟಿವಿ ಕೇಬಲ್‌ 380
ಸಾರ್ವಜನಿಕ ಸಾರಿಗೆ 750

ಟಾಪ್ ನ್ಯೂಸ್

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.