ಜಾಧವ್ ತಾಯಿಗೆ ವೀಸಾ ನೀಡಲು ಪಾಕ್ ಇಂಗಿತ?
Team Udayavani, Jul 14, 2017, 3:10 AM IST
ಇಸ್ಲಾಮಾಬಾದ್: ಪಾಕ್ ವಶದಲ್ಲಿರುವ ಭಾರತೀಯ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ತಾಯಿಗೆ ವೀಸಾ ನೀಡಬೇಕು ಎಂಬ ಭಾರತ ಸರಕಾರದ ಕೋರಿಕೆ ಪರಿಶೀಲಿಸಲು ಪಾಕಿಸ್ಥಾನ ನಿರ್ಧರಿಸಿದೆ. ಒಂದು ವೇಳೆ ನೆರೆಯ ರಾಷ್ಟ್ರ ಇದಕ್ಕೆ ಅನುಮತಿ ನೀಡಿದರೆ ಜಾಧವ್ ತಾಯಿ ಪಾಕ್ಗೆ ಪ್ರಯಾಣಿಸಲು ಅನುಕೂಲವಾಗುತ್ತದೆ. ವೀಸಾ ನೀಡುವಂತೆ ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್ಗೆ ವೈಯಕ್ತಿಕವಾಗಿ ಪತ್ರ ಬರೆದಿರುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. ಇದೇ ವೇಳೆ ವೈದ್ಯಕೀಯ ನೆರವಿಗಾಗಿ ತೆರಳುವ ತಮ್ಮ ದೇಶದ ನಾಗರಿಕರಿಗೆ ಭಾರತ ಇನ್ನಿಲ್ಲದ ಷರತ್ತುಗಳನ್ನು ಹೇರುತ್ತಿದೆ ಎಂದು ಪಾಕ್ ಆರೋಪಿಸಿದೆ.