ಇಸ್ರೇಲ್-ಪ್ಯಾಲೆಸ್ತೀನ್ ಮಾತುಕತೆ
Team Udayavani, Aug 31, 2021, 7:10 AM IST
ಜೆರುಸಲೇಂ: ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಮಾತುಕತೆಗಳು ನಡೆದಿವೆ.
ಇಸ್ರೇಲ್ನ ರಕ್ಷಣ ಸಚಿವ ಬೆನ್ನೆ ಗಾಂಟ್ಜ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಟಾಸ್ ರವಿವಾರ ಕುಳಿತು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.
ಬೆಂಜಮಿನ್ ನೆತನ್ಯಾಹು ಪ್ರಧಾನಮಂತ್ರಿಯಾಗಿದ್ದ ವೇಳೆ ಎರಡೂ ರಾಷ್ಟ್ರಗಳ ನಡುವೆ ಆಗಾಗ ಸಂಘರ್ಷವೇ ನಡೆಯುತ್ತಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇಸ್ರೇಲ್ ಪ್ರಧಾನಿ ನೆಫ್ಜಾಲಿ ಬೆನ್ನೆಟ್ ನಡುವಿನ ಮಾತುಕತೆ ನಡೆದ ಬಳಿಕ ಈ ಭೇಟಿಯಾಗಿದೆ.