Indian army ಮರಳಲು ಮಾಲ್ದೀವ್ಸ್ ಅಧ್ಯಕ್ಷ ಗಡುವು
Team Udayavani, Feb 6, 2024, 6:10 AM IST
ಮಾಲೆ: “ಮಾ.10ರೊಳಗೆ ಮೊದಲ ಹಂತದ ಭಾರತದ ಸೇನಾ ಸಿಬ್ಬಂದಿಯನ್ನು ಮರಳಿ ಕಳಿಸಲಾಗು ವುದು. ಮೇ 10ರೊಳಗೆ ಉಳಿದ ಸೇನಾ ಸಿಬ್ಬಂದಿ ದೇಶ ತೊರೆಯಬೇಕು’ - ಹೀಗೆಂದು ಚೀನಾ ಕುಮ್ಮಕ್ಕಿ ನೊಂದಿಗೆ ಅಧಿಕಾರಕ್ಕೆ ಬಂದಿರುವ ಮಾಲ್ದೀವ್ಸ್ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಸವಾಲು ಹಾಕಿದ್ದಾರೆ. ತಮಾಷೆಯೆಂದರೆ ಒಟ್ಟು 81 ಮಂದಿ ಸಂಸದರು ಇರುವ ಸಂಸತ್ನಲ್ಲಿ ಅಧ್ಯಕ್ಷರ ಭಾಷಣ ಕೇಳಲು ಇದ್ದದ್ದು ಕೇವಲ 24 ಸದಸ್ಯರು ಮಾತ್ರ. ಉಳಿದ 56 ಮಂದಿ ಸದಸ್ಯರು ಬಹಿಷ್ಕರಿಸಿದ್ದರು.
ಕಳೆದ ವರ್ಷದ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮೊದಲ ಬಾರಿಗೆ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮುಯಿಜ್ಜು “ಮಾಲ್ಡೀವ್ಸ್ನ ಬಹುತೇಕರು ನನ್ನ ಆಡಳಿತವನ್ನು ಬೆಂಬಲಿಸುತ್ತಾರೆ. ವಿದೇಶಿ ಸೇನೆಯ ಉಪಸ್ಥಿತಿ ಕಿತ್ತೂಗೆಯುವ, ಹಿಂದೂ ಮಹಾ ಸಾಗರದಲ್ಲಿ ಕಳೆದು ಕೊಂಡಿರುವ ಮಾಲ್ದೀವ್ಸ್ಹಿಡಿತ ವನ್ನು ಮರುಸ್ಥಾಪಿಸುವ ಉದ್ದೇಶಕ್ಕೆ ಜನರ ಬೆಂಬಲ ಇದೆ’ ಎಂದು ಹೇಳಿ ಕೊಂಡಿದ್ದಾರೆ.
ಭಾರತದ ಸೇನಾ ಸಿಬ್ಬಂದಿ ಬಗ್ಗೆ ಮಾತನಾಡಿದ ಅವರು, ಮಾ.10ರಂದು ಮೊದಲ ಹಂತದಲ್ಲಿ ಒಂದಷ್ಟು ಸಿಬ್ಬಂದಿ, ಮೇ 10ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಪಸಾಗಬೇಕು ಎಂದಿದ್ದಾರೆ. ಈ ಬಗ್ಗೆ ಭಾರತ ಸರಕಾರದ ಜತೆಗೆ ಮಾತುಕತೆಯೂ ನಡೆದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ