3.30 ಲಕ್ಷ ಡಾಲರ್ ಬಾಕಿ : ಮಾಲ್ಟಾದಲ್ಲಿ ಮಲ್ಯ ನಾವೆ ಮುಟ್ಟುಗೋಲು
Team Udayavani, Mar 8, 2018, 5:06 PM IST
ಲಂಡನ್ : ಭಾರತೀಯ ಬ್ಯಾಂಕ್ಗಳಿಗೆ 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿ ಪ್ರಕೃತ ಲಂಡನ್ನಲ್ಲಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ಅತ್ಯಂತ ಐಶಾರಾಮಿ ಹಾಯಿ ದೋಣಿಯನ್ನು ಮಾಲ್ಟಾದಲ್ಲಿನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೆಲವು ಭಾರತೀಯರ ಸಹಿತ ಹಾಯಿ ದೋಣಿ ಸಿಬಂದಿಗೆ 10 ಲಕ್ಷ ಡಾಲರ್ ಸಂಬಳವನ್ನು ಮಲ್ಯ ಬಾಕಿ ಇರಿಸಿರುವ ಕಾರಣ ಅವರ ವಿಲಾಸೀ ಹಾಯಿ ದೋಣಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.
ನಾಟಿಲಸ್ ಇಂಟರ್ನ್ಯಾಶನಲ್ ಹೇಳಿರುವ ಪ್ರಕಾರ ವಿಜಯ್ ಮಲ್ಯ ಅವರಿಂದ ಬಾಕಿ ಇರುವ 3,30,000 ಡಾಲರ್ ವಸೂಲಿಗಾಗಿ ಅವರ ಒಡೆತನದ ‘Indian Empress’ ಎಂಬ ಹೆಸರಿನ 95 ಮೀಟರ್ ಉದ್ದದ ವಿಲಾಸೀ ನಾವೆಯನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿದು ಬಂದಿದೆ.
ಮಲ್ಯ ಅವರು ಪ್ರಕೃತ ಲಂಡನ್ನಲ್ಲಿ ಭಾರತಕ್ಕೆ ಗಡೀಪಾರಾಗುವ ಕೇಸಿನ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.