Hamas ದಾಳಿಯಿಂದ ವೃದ್ಧೆಯ ರಕ್ಷಿಸಿದ ಮೆಸ್ಸಿ ಅಭಿಮಾನ!
ಕೊಲ್ಲಲು ಬಂದಿದ್ದ ಉಗ್ರ ಕೂಡ ಫುಟ್ಬಾಲಿಗ ಮೆಸ್ಸಿ ಫ್ಯಾನ್
Team Udayavani, Mar 9, 2024, 6:52 AM IST
ಜೆರುಸಲೇಂ: ಕಳೆದ ವರ್ಷ ಅ.7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಸಮಯದಲ್ಲಿ ವೃದ್ಧೆ ತಾನು ಮೆಸ್ಸಿ ಊರಿನವಳು ಎಂದು ಹೇಳಿ ತಪ್ಪಿಸಿಕೊಂಡ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಸಮಯದಲ್ಲಿ ಅರ್ಜೆಂಟೀನಾದ ಮಹಿಳೆ ಎಸ್ತರ್ ಕ್ಯೂನೋ (90) ಅವರ ಮನೆಯಲ್ಲಿದ್ದ 8 ಮಂದಿಯನ್ನು ಅಪಹರಿಸಿದ್ದರು. ಉಗ್ರನಿಗೆ ತಾನು ಮೆಸ್ಸಿ ಊರಿನವಳು ಎಂದು ಹೇಳಿ ಎಸ್ತರ್ ಪಾರಾಗಿದ್ದರು. ಹಮಾಸ್ ಉಗ್ರ ಸಹ ಮೆಸ್ಸಿ ಅಭಿಮಾನಿಯಾಗಿದ್ದು, ಹೆಸರು ಕೇಳುತ್ತಲೇ ಫೋಟೋ ತೆಗೆಸಿಕೊಂಡಿದ್ದ. ಆಕೆಯನ್ನು ಸುರಕ್ಷಿತವಾಗಿ ಮನೆಯೊಳಗೆ ಇರುವಂತೆ ಹೇಳಿ ಹೋಗಿದ್ದ ಎಂದು ಎಸ್ತರ್ ಹೇಳಿಕೊಂಡಿದ್ದಾರೆ.
ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಆಕೆಯ ಕುಟುಂಬದವರು ಕದನ ವಿರಾಮ ಒಪ್ಪಂದದಿಂದಾಗಿ ಬಿಡುಗಡೆಗೊಂಡಿದ್ದಾರೆ. ಎಸ್ತರ್ ಮೊಬೈಲ್ನಲ್ಲಿದ್ದ ಉಗ್ರನ ಫೋಟೋ ನೋಡಿ ಮನೆಯವರು ಪ್ರಶ್ನಿಸಿದಾಗ ಈ ವಿಷಯವನ್ನು ಎಸ್ತರ್ ತಿಳಿಸಿದ್ದಾರೆ.