ಅಮೆರಿಕಕ್ಕೆ ಈಗ ಮಂಕಿಪಾಕ್ಸ್ ಭೀತಿ: ಭಾರತದಲ್ಲಿ ಹೇಗಿದೆ ಪರಿಸ್ಥಿತಿ?
Team Udayavani, May 20, 2022, 7:10 AM IST
ಮಾಂಟ್ರಿಯಲ್: ಯುರೋಪ್ ಬಳಿಕ ಈಗ ಅಮೆರಿಕದಲ್ಲೂ ಮಂಕಿಪಾಕ್ಸ್ ಸುದ್ದಿ ಮಾಡುತ್ತಿದೆ. ಕೊರೊನಾ ಪ್ರಕರಣಗಳು ತಗ್ಗುತ್ತಿರುವಂತೆಯೇ ಸಿಡುಬು ಮಾದರಿಯ “ಮಂಕಿಪಾಕ್ಸ್’ ಸೋಂಕು ಪ್ರಕರಣ ಅಮೆರಿಕದ ಮಸ್ಸಾಚುಸೆಟ್ಸ್ ನಲ್ಲಿ ಪತ್ತೆಯಾಗಿದೆ. ಕೆನಡಾಗೆ ಹೋಗಿ ಬಂದಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈಗಾಗಲೇ ಕೆನಡಾ, ಯುಕೆ, ಸ್ಪೇನ್, ಪೋರ್ಚುಗಲ್‌ನಲ್ಲಿ ಹಲವು ಮಂದಿಗೆ ಈ ಸೋಂಕು ತಗುಲಿದೆ.
ಹೇಗೆ ಹರಡುತ್ತದೆ?: ಸೋಂಕಿತ ಪ್ರಾಣಿಯು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ದೇಹದ ದ್ರವ ಅಥವಾ ತುಪ್ಪಳವನ್ನು ಮುಟ್ಟುವುದರಿಂದಲೂ ಇದು ಹರಡುತ್ತದೆ. ಇಲಿ, ಅಳಿಲುಗಳಂಥ ಪ್ರಾಣಿಗಳಿಂದ ಮಾತ್ರವಲ್ಲದೇ, ಸೋಂಕಿತ ಪ್ರಾಣಿಯ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದಲೂ ಇದು ಹಬ್ಬುತ್ತದೆ. ಇದು ಜನರಿಂದ ಜನರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ, ಸೋಂಕಿತ ವ್ಯಕ್ತಿ ಸೀನುವಾಗ, ಕೆಮ್ಮುವಾಗ ಹೊರಬೀಳುವ ದ್ರವದ ಸ್ಪರ್ಶದಿಂದ, ಆತ ಬಳಸಿರುವ ಬಟ್ಟೆ, ಟವೆಲ್, ಬೆಡ್‌ಶೀಟ್‌ಗಳನ್ನು ಬಳಸುವುದರಿಂದ ಮತ್ತೂಬ್ಬ ವ್ಯಕ್ತಿಗೆ ಹಬ್ಬುವ ಸಾಧ್ಯತೆಯಿರುತ್ತದೆ.
ರೋಗಲಕ್ಷಣಗಳು: ಮಂಕಿಪಾಕ್ಸ್ ಬಂದರೆ ರೋಗಲಕ್ಷಣ ಕಾಣಿಸಿಕೊಳ್ಳಲು 5ರಿಂದ 21 ದಿನಗಳ ಬೇಕು. ಜ್ವರ, ತಲೆನೋವು, ಸ್ನಾಯುನೋವು, ಬೆನ್ನು ನೋವು, ಗ್ರಂಥಿಗಳು ಊದಿಕೊಳ್ಳುವುದು, ನಡುಕ ಮತ್ತು ಬಳಲಿಕೆ ಕಾಣಿಸಿಕೊಂಡ ಬಳಿಕ, ಚರ್ಮದಲ್ಲಿ ಸಿಡುಬಿನಂಥ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಏನಿದು ಮಂಕಿಪಾಕ್ಸ್? :
ಆಫ್ರಿಕಾದ ಸೋಂಕಿತ ವನ್ಯಜೀವಿಗಳಿಂದ ಹರಡುತ್ತಿರುವ ಅಲ್ಪಪ್ರಮಾಣದ ಸೋಂಕು ರೋಗವಿದು. ಇದು ಮೊದಲು ಪತ್ತೆಯಾಗಿದ್ದು 1958ರಲ್ಲಿ. ಸಂಶೋಧನೆಗೆಂದು ತರಲಾಗಿದ್ದ ಕೋತಿಗಳಲ್ಲಿ ಇದು ಕಾಣಿಸಿಕೊಂಡಿತ್ತು. ಮನುಷ್ಯನಿಗೆ ಮೊದಲ ಬಾರಿ ಹರಡಿದ್ದು 1970ರಲ್ಲಿ. ಈ ಸೋಂಕು ತಗುಲಿದ ವ್ಯಕ್ತಿಯ ಮುಖದಲ್ಲಿ ಸಿಡುಬಿನಂಥ ಗುಳ್ಳೆಗಳು ಕಾಣಿಸಿಕೊಂಡು, ನಂತರ ಅದು ದೇಹವಿಡೀ ಹಬ್ಬುತ್ತದೆ.
ಭಾರತದಲ್ಲಿ ಹೇಗಿದೆ ಪರಿಸ್ಥಿತಿ? :
ಈವರೆಗೂ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಹಲವು ದೇಶಗಳಿಗೆ ಈಗಾಗಲೇ ಇದು ಪ್ರವೇಶವಾಗಿರುವ ಕಾರಣ, ಭಾರತದಲ್ಲೂ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ
ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ
ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ
ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ
ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ