ಮಲ್ಯ ಇರಿಸುವ ಮುಂಬಯಿ ಜೈಲು ಕೋಣೆಯ ವಿಡಿಯೋ ನೀಡಿ: ಲಂಡನ್ ಕೋರ್ಟ್
Team Udayavani, Jul 31, 2018, 4:36 PM IST
ಲಂಡನ್ : ಗಡೀಪಾರಾಗಿ ಬರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಇರಿಸಲಾಗುವ ಮುಂಬಯಿಯ ಆರ್ಥರ್ ರೋಡ್ ಜೈಲು ಕೋಣೆಯ ವಿಡಿಯೋ ಚಿತ್ರಿಕೆಯನ್ನು ತನಗೆ ಮೂರು ವಾರಗಳ ಒಳಗೆ ಸಲ್ಲಿಸುವಂತೆ ಬ್ರಿಟನ್ ಕೋರ್ಟ್ ಭಾರತೀಯ ಅಧಿಕಾರಿಗಳನ್ನು ಕೇಳಿಕೊಂಡಿದೆ.
ಇದೇ ವೇಳೆ ಮಲ್ಯ ಗಡೀಪಾರು ವಿಚಾರಣೆಯ ಮುಂದಿನ ದಿನಾಂಕವನ್ನು ನ್ಯಾಯಾಲಯವು ಸೆ.12ಕ್ಕೆ ನಿಗದಿಸಿದೆ. ಅಂದು ವಾದ -ಪ್ರತಿವಾದಗಳ ವಿಚಾರಣೆ ಮುಗಿಯಲಿದೆ.
ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ಲಂಡನ್ಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ಅವರಿಂದು ಲಂಡನಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟರ ಕೋರ್ಟಿನಲ್ಲಿ ಹಾಜರಾದರು.
ಮಲ್ಯ ಗಡೀಪಾರಾಗಿ ಬಂದ ಬಳಿಕ ಅವರನ್ನು ಇರಿಸಲಾಗುವ ಮುಂಬಯಿಯ ಆರ್ಥರ್ ರೋಡ್ ಜೈಲಿನ 12ನೇ ನಂಬರ್ ಕೋಣೆಯ ಕುರಿತಾದ ಸ್ಪಷ್ಟೀಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಶನ್ಮತ್ತು ಡಿಫೆನ್ಸ್ ವಾದ – ಪ್ರತಿವಾದ ಮಂಡಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು