ನಾಗರಹೊಳೆ, ಬಂಡೀಪುರದಲ್ಲಿದೆ ಪ್ರಾಣಿಗಳ ಸಹಬಾಳ್ವೆ


Team Udayavani, Feb 18, 2017, 6:52 AM IST

17-STATE-3.jpg

ಲಂಡನ್‌: ಸಾಮಾನ್ಯವಾಗಿ ಕಾಡುಗಳಲ್ಲಿ ಹುಲಿ, ಸಿಂಹಗಳು ಒಂದು ಮತ್ತೂಂದರ ಪ್ರದೇಶಕ್ಕೆ ಹೋಗುವುದಿಲ್ಲ. ಅವುಗಳ ಬಾಂಧವ್ಯ ಅಷ್ಟಕ್ಕಷ್ಟೆ. ಆದರೆ, ಕರ್ನಾಟಕದ ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ ಪ್ರದೇಶ, ಬಂಡೀಪುರ ವ್ಯಾಪ್ತಿಯ ದಟ್ಟಡವಿಯಲ್ಲಿ ಈ ಅಂಶ ಅಪವಾದ. ಹುಲಿ, ಚಿರತೆ ಮತ್ತು ಸೀಳುನಾಯಿಗಳು ಕಾಡಿನಲ್ಲಿ ಒಂದೇ ಕಡೆ ವಾಸಿಸುತ್ತವೆ. ಇದು ಹೇಗೆ ಸಾಧ್ಯ ಎಂದು
ಆಶ್ಚರ್ಯ ಪಡುತ್ತಿದ್ದೀರಾ. ವನ್ಯಜೀವಿ ಸಂರಕ್ಷಣಾ ಸಂಸ್ಥೆ (ಡಬ್ಲೂಸಿಎಸ್‌) ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳಿಗೆ ಬೇಟೆ ವಿಷಯವಾಗಿ ನೇರ ಸ್ಪರ್ಧೆ ಇರುತ್ತದೆ. ಆದರೂ, ಸ್ವಲ್ಪ ಮಟ್ಟಿನ ಸಂಘರ್ಷಗಳ ನಡುವೆ ಇವುಗಳು ಸಾಮರಸ್ಯದಿಂದ ಬದುಕುತ್ತವೆ. ಅವುಗಳು ಒಂದೇ ರೀತಿಯ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ, ಬೇಟೆಗೆ ತೆರಳುವ ಸಮಯವನ್ನು ಪ್ರಾಣಿಗಳೇ ನಿಗದಿಪಡಿಸಿಕೊಂಡಿವೆ. ಸೀಳುನಾಯಿಗಳು ಹಗಲಿನಲ್ಲಿ ಚಟುವಟಿಕೆಯಿಂದ ಇರುತ್ತವೆ. ಹಗಲಿನಲ್ಲೇ ಬೇಟೆಯಾಡುತ್ತವೆ. ರಾತ್ರಿ ವೇಳೆ ಹುಲಿ ಮತ್ತು ಚಿರತೆಗಳು ತಮ್ಮ ಬೇಟೆ ಹುಡುಕಿಕೊಂಡು ಹೋಗುತ್ತವೆ. ಭದ್ರಾ 
ಸಂರಕ್ಷಿತಾರಣ್ಯದಲ್ಲಿ ಬೇಟೆ ವಿರಳವಾಗಿರುತ್ತವೆ. ಆದರೂ, ಸೀಳುನಾಯಿಗಳು ದೊಡ್ಡ ಬೆಕ್ಕುಗಳು ಮುಖಾಮುಖೀಯಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ನಾಗರಹೊಳೆಯಲ್ಲಿ ಚಿರತೆಗಳು ಹುಲಿಗಳ ಬಳಿ ಹೋಗುವುದನ್ನು ತಡೆಯುತ್ತವೆ. ಇವುಗಳು ಬೇಟೆಯಾಡುವ ಪ್ರಾಣಿಗಳಾದ ಹಂದಿ, ಜಿಂಕೆ ಮೊಲಗಳ ಸಂಖ್ಯೆ ವಿರಳವಾಗಿರುವುದೇ ಈ ಸಾಮರಸ್ಯಕ್ಕೆ ಕಾರಣ ಎನ್ನುತ್ತಾರೆ ಡಬ್ಲೂéಸಿಎಸ್‌ನ
ಏಷ್ಯಾ ವಲಯದ ನಿರ್ದೇಶಕ ಡಾ.ಉಲ್ಲಾಸ್‌ ಕಾರಂತ್‌. ಮಾಂಸಾಹಾರಿ ಪ್ರಾಣಿಗಳ ಜೀವನ ಅಭ್ಯಸಿಸುವ ಸಲುವಾಗಿ 12ಕ್ಕೂ ಹೆಚ್ಚು ಕ್ಯಾಮರಾಗಳನ್ನು ಇರಿಸಿ, 2,500 ಚಿತ್ರಗಳನ್ನು ತೆಗೆಯಲಾಗಿದೆ. ಈ ವೇಳೆ, ಮೃಗಗಳ ಬೇಟೆ ಮತ್ತು ಜೀವನ ಕ್ರಮಗಳ ಕುರಿತು ಹಲವಾರು ಮಾಹಿತಿಗಳು ಬಹಿರಂಗವಾಗಿವೆ. ಹೆಚ್ಚಾಗಿ ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳು ಬೇರೆ ಬೇರೆ ಸ್ಥಳಗಳಲ್ಲಿ 
ವಾಸಿಸುತ್ತವೆ. ಆದರೆ, ಪಶ್ಚಿಮ ಘಟ್ಟದಲ್ಲಿ ಒಂದೇ ಕಡೆ ವಾಸಿಸುತ್ತವೆ.

ಅಂತಾರಾಷ್ಟ್ರೀಯ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಒಕ್ಕೂಟ (ಐಯುಸಿಎನ್‌) ಹುಲಿಗಳು ಮತ್ತು ಸೀಳುನಾಯಿಗಳನ್ನು ಅಳಿವಿನಂಚಿನಲ್ಲಿರುವ ಮತ್ತು ಚಿರತೆಗಳನ್ನು ಅತ್ಯಂತ ಸೂಕ್ಷ್ಮ ಪ್ರಾಣಿ ಎಂದು ಗುರುತಿಸಿದೆ. ಜನಸಂಖ್ಯೆಯನ್ನು ನಿಯಂತ್ರಿಸಿದಾಗ
ಹುಲಿಗಳು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಯನ್ನೂ ನಡೆಸಿ ಜೀವ ವೈವಿಧ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವೈಜ್ಞಾನಿಕ ಅಂಶಗಳಿರುವ ಲೇಖನ “ದ ರಾಯಲ್‌ ಸೊಸೈಟಿ  ಬಿ-ಬಯಲಾಜಿಕಲ್‌ ಸೈನ್ಸಸ್‌’ನಲ್ಲಿ ಪ್ರಕಟವಾಗಿದೆ.

ಈ ಅಧ್ಯಯನದ ಫ‌ಲಿತಾಂಶ ದಿಂದ ನಮಗೇ ಅಚ್ಚರಿಯಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಣಿಗಳು ತಮ್ಮ ಮೂಲ ಬೇಟೆಯನ್ನು ಬಿಟ್ಟು ಮತ್ತೂಂದನ್ನು ಅವಲಂಬಿಸುತ್ತವೆ. ಇಂಥ ವ್ಯವಸ್ಥೆ ಜೀವ ವೈವಿಧ್ಯ ಕಾಪಾಡಲು ನೆರವಾಗುತ್ತದೆ.
ಡಾ.ಉಲ್ಲಾಸ ಕಾರಂತ್‌, ಡಬ್ಲೂéಸಿಎಸ್‌ ಏಷ್ಯಾ ವಲಯದ ನಿರ್ದೇಶಕ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.