North Korea ಗಡಿಯಲ್ಲಿ ಈಗ ಪ್ರಕ್ಷುಬ್ಧ ಸ್ಥಿತಿ; ಗುಂಡಿನ ದಾಳಿ
ರವಿವಾರ ಒಂದೇ ದಿನ 90 ಸುತ್ತು ಫೈರಿಂಗ್
Team Udayavani, Jan 8, 2024, 12:42 AM IST
ಸಿಯೋಲ್: ಸತತ ಮೂರನೇ ದಿನವಾದ ರವಿವಾರ ಉತ್ತರ ಕೊರಿಯಾ ತನ್ನ ಪಶ್ಚಿಮ ಕರಾವಳಿಯ ಸಮುದ್ರ ಗಡಿಯಲ್ಲಿ ಫಿರಂಗಿ ದಾಳಿಯನ್ನು ಮುಂದುವರಿಸಿದೆ. ಒಟ್ಟು 90 ಸುತ್ತುಗಳಿಗೂ ಅಧಿಕ ಗುಂಡುಗಳ ಹಾರಾಟ ನಡೆಸಿರುವುದಾಗಿ ದಕ್ಷಿಣ ಕೊರಿಯಾದ ಸೇನಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಉತ್ತರ ಕೊರಿಯಾ ಈ ಆರೋಪವನ್ನು ತಳ್ಳಿಹಾಕಿದೆ. ಜತೆಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನ ಸಹೋದರಿ ಕಿಮ್ ಯೊ ಜಾಂಗ್, ದಕ್ಷಿಣ ಕೊರಿಯಾ ಹೊಂದಿರುವ ಕ್ಷಿಪಣಿ ದಾಳಿಯ ಮುನ್ಸೂಚನೆ ತಂತ್ರಜ್ಞಾನವನ್ನು ಅಣಕಿ ಸಿದ್ದಾಳೆ.
ಶುಕ್ರವಾರದಿಂದೀಚೆಗೆ ಉತ್ತರ ಕೊರಿಯಾವು ಸಮುದ್ರ ಗಡಿಯಲ್ಲಿ ತನ್ನನ್ನು ಗುರಿಯಾಗಿಸಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಬಂದಿದ್ದು ರವಿವಾರವೂ ಇಂಥದ್ದೇ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾ ಆರೋ ಪಿಸಿದೆ. ಶನಿವಾರದಂದು ಉತ್ತರ ಕೊರಿಯಾ ಫಿರಂಗಿ ದಾಳಿಗಳನ್ನು ನಡೆಸಿದೆ ಎಂಬ ದಕ್ಷಿಣ ಕೊರಿಯಾದ ಆರೋಪವನ್ನು ತಳ್ಳಿಹಾಕಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೊ ಜಾಂಗ್, ತಮ್ಮ ದೇಶ ದಾಳಿ ಎಸಗಿಲ್ಲ ಎಂದಿದ್ದಾರೆ. ವಿವಾದಿತ ಪಶ್ಚಿಮ ಸಮುದ್ರ ಗಡಿಯಲ್ಲಿ ಶುಕ್ರವಾರದಂದು 200ಕ್ಕೂ ಅಧಿಕ ಗುಂಡುಗಳನ್ನು ಹಾರಿಸುವ ಮೂಲಕ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದ ಉತ್ತರ ಕೊರಿಯಾ ಶನಿವಾರ ಕೂಡ ಉತ್ತರ ಕೊರಿಯಾ 60 ಸುತ್ತು ಗುಂಡು ಹಾರಾಟ ನಡೆಸಿರುವುದಾಗಿ ದಕ್ಷಿಣ ಕೊರಿಯಾ ಆರೋಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್