ಪಾಕ್ನಿಂದ 8 ಶತಕೋಟಿ ಡಾಲರ್ ನೆರವು ಯಾಚನೆ: ಇಸ್ಲಾಮಾಬಾದ್ಗೆ IMF ನಿಯೋಗ
Team Udayavani, May 1, 2019, 5:16 PM IST
ಇಸ್ಲಾಮಾಬಾದ್ : ಆರ್ಥಿಕವಾಗಿ ದಿವಾಳಿ ಅಂಚಿಗೆ ತಲುಪಿರುವ ದೇಶವನ್ನು ಪಾರುಗೊಳಿಸುವ ಸಲುವಾಗಿ ಪಾಕಿಸ್ಥಾನ ಐಎಂಎಫ್ ನಿಂದ 8 ಶತಕೋಟಿ ಡಾಲರ್ಗಳ ನೆರವನ್ನು ಕೋರಿದ್ದು, ಇಂದು ಬುಧವಾರ ಇಲ್ಲಿಗೆ ಆಗಮಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ನಿಯೋಗವನ್ನು ಭೇಟಿಯಾಗಿರುವ ಹಿರಿಯ ಪಾಕ್ ಅಧಿಕಾರಿಗಳು ತಾಂತ್ರಿಕ ಚರ್ಚೆ ನಡೆಸಿದ್ದಾರೆ.
ಐಎಂಎಫ್ ನಿಯೋಗದೊಂದಿಗೆ ಮಾತುಕತೆ ಒಂದು ವಾರ ಕಾಲ ಮುಂದುವರಿಯಲಿದೆ. ಪಾಕಿಸ್ಥಾನ ಐಎಂಎಫ್ ನಿಂದ ಪಡೆಯಲು ಬಯಸಿರುವ 8 ಶತಕೋಟಿ ಡಾಲರ್ ನೆರವನ್ನು ಹೆಚ್ಚುತ್ತಿರುವ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ಥಾನ ಹಾಲಿ ಹಣಕಾಸು ವರ್ಷದಲ್ಲಿ ಚೀನದಿಂದ ಸಹಕಾರದಲ್ಲಿ ತನ್ನ ಮಿತ್ರ ರಾಷ್ಟ್ರಗಳಿಂದ ಒಟ್ಟು 9.1 ಶತಕೋಟಿ ಡಾಲರ್ ನೆರವು ಪಡೆದಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕೆಲ ದಿನಗಳ ಹಿಂದಷ್ಟೇ ಬೀಜಿಂಗ್ನಲ್ಲಿ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿನಾ ಲಗಾರ್ಡ್ ಜತೆಗೆ ಮಾತುಕತೆ ನಡೆಸಿರುವ ಪರಿಣಾಮವಾಗಿ ಇದೀಗ ಐಎಂಎಫ್ ನಿಯೋಗ ಇಲ್ಲಿಗೆ ಬಂದಿದೆ.