30ರ ವರೆಗೂ ಪಾಕ್‌ ವಾಯು ಮಾರ್ಗ ಬಂದ್‌

Team Udayavani, May 16, 2019, 6:00 AM IST

ಲಾಹೋರ್‌: ಬಾಲಕೋಟ್‌ ದಾಳಿ ಅನಂತರದಲ್ಲಿ ಮುಚ್ಚಿದ್ದ ವಾಯುಮಾರ್ಗಗಳಲ್ಲಿ ಮೇ 30ರ ವರೆಗೂ ವಿಮಾನ ಹಾರಾಟಕ್ಕೆ ಅನುಮತಿ ನೀಡದೇ ಇರಲು ಪಾಕಿಸ್ಥಾನ ನಿರ್ಧರಿಸಿದೆ. ಇದರಿಂದಾಗಿ ಭಾರತೀಯ ವಿಮಾನಗಳು ಪಾಕಿಸ್ಥಾನದ ವಾಯುಗಡಿ ಪ್ರವೇಶಿಸುವಂತಿಲ್ಲ, ಪಾಕಿಸ್ಥಾನ ತನ್ನ ಸಂಪೂರ್ಣ ವಾಯು ಮಾರ್ಗ ಗಳನ್ನು ಬಂದ್‌ ಮಾಡಿತ್ತಾದರೂ, ಮಾ. 27ರಂದು ಹೊಸದಿಲ್ಲಿ ಸೇರಿ ಕೆಲವೇ ಮಾರ್ಗಗಳಲ್ಲಿ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿತ್ತು. ವಾಯು ಮಾರ್ಗಗಳ ಆರಂಭದ ಬಗ್ಗೆ ಮರುಪರಿಶೀಲನೆಯನ್ನು ಬುಧವಾರ ಪಾಕಿಸ್ಥಾನ ನಡೆಸಿದ್ದು, ಲೋಕಸಭೆ ಚುನಾವಣೆ ಫ‌ಲಿತಾಂಶದ ಅನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದೆ.


ಈ ವಿಭಾಗದಿಂದ ಇನ್ನಷ್ಟು

  • ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ...

  • ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು...

  • ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ...

  • ವಾಷಿಂಗ್ಟನ್‌: ಮುಂದಿನ ತಿಂಗಳು ಜಪಾನ್‌ನಲ್ಲಿ ಜಿ-20 ಶೃಂಗ ನಡೆಯಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಭೇಟಿ ನಡೆಯಲಿದೆ. ಇಲ್ಲಿ...

  • ಕೈರೋ: ಇರಾಕ್‌ ಹಾಗೂ ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಐಸಿಸ್‌ ಉಗ್ರರು ಈಗ ಗೆರಿಲ್ಲಾ ಯುದ್ಧ ತಂತ್ರ ಗಳನ್ನು ಅಳವಡಿಸಿ ಕೊಳ್ಳುವ...

ಹೊಸ ಸೇರ್ಪಡೆ