ಇರಾಕ್‌ನಿಂದ ಅಮೆರಿಕ ರಾಯಭಾರಿಗಳು ವಾಪಸ್‌

Team Udayavani, May 16, 2019, 6:00 AM IST

ವಾಷಿಂಗ್ಟನ್‌: ಇರಾನ್‌ ಜತೆಗೆ ಅಮೆರಿಕದ ಘರ್ಷಣೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳು ತ್ತಿದ್ದು, ಇರಾನ್‌ ಪ್ರಚೋದಿತ ಉಗ್ರರು ಇರಾಕ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉದ್ಯೋಗಿಗಳು ಹಾಗೂ ಅಮೆರಿಕ ಯೋಧರ ಮೇಲೆ ದಾಳಿ ನಡೆಸುತ್ತಿರುವುದರಿಂದ ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಅಮೆರಿಕದ ಅಧಿಕಾರಿಗಳೂ ಇರಾಕ್‌ ನಿಂದ ವಾಪಸಾಗುವಂತೆ ಆದೇಶಿಸಲಾಗಿದೆ. ಬಗ್ಧಾದ್‌ನಲ್ಲಿರುವ ಮತ್ತು ಕುರ್ದಿಶ್‌ ಪ್ರಾಂತ್ಯದ ರಾಜಧಾನಿ ಎರ್ಬಿಲ್‌ನಲ್ಲಿರುವ ಸಿಬಂದಿಗೆ ಈ ಆದೇಶ ಅನ್ವಯಿ ಸುತ್ತದೆ. ಇರಾನ್‌ ಬೆಂಬಲಿತ ಉಗ್ರರು ಭಾರಿ ದೊಡ್ಡ ಮಟ್ಟದ ದಾಳಿಗೆ ಸಜ್ಜಾಗುತ್ತಿದ್ದಾರೆ ಎಂದು ಅಮೆ ರಿಕ ಹೇಳಿದೆ. ಅಮೆರಿಕಕ್ಕೆ ಜರ್ಮನಿ ಕೂಡ ಬೆಂಬಲ ನೀಡಿದ್ದು, ಇರಾಕ್‌ನಲ್ಲಿ ಸೇನೆಗೆ ನೀಡುತ್ತಿದ್ದ ತರಬೇತಿ ಕಾರ್ಯಕ್ರಮ ಸ್ಥಗಿತಗೊಳಿಸಿದೆ.

ಮೂಲಗಳ ಪ್ರಕಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕರಾವಳಿಯಲ್ಲಿ ರವಿವಾರ ಇರಾನ್‌ ಬೆಂಬಲಿತ ಉಗ್ರರು ಭಾರಿ ಸ್ಫೋಟಕ ಬಳಸಿ ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿ ದ್ದಾರೆ. ಇದರಿಂದಾಗಿ ತೈಲ ಪೂರೈಕೆಗೆ ಭಾರಿ ಅಡ ಚಣೆ ಉಂಟಾಗಿದೆ ಎನ್ನಲಾಗಿದೆ. ಇನ್ನು ಈ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಗಲ್ಫ್ ಕರಾವಳಿಗೆ ಬಿ-52 ಬಾಂಬರ್‌ಗಳು ಮತ್ತು ಯುದ್ಧ ವಿಮಾನ ವಾಹಕಗಳನ್ನು ಅಮೆರಿಕ ಕಳುಹಿಸಿದೆ.

ತೈಲ ಪೂರೈಕೆ ಇಳಿಕೆ: ಇರಾನ್‌ ಮೇಲೆ ಅಮೆರಿಕ ಹೇರಿದ ನಿಷೇಧ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆ ಪ್ರಮಾಣ ಭಾರೀ ಇಳಿಕೆ ಕಂಡಿದೆ ಎಂದು ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ ವರದಿ ಮಾಡಿದೆ. ತೈಲ ಮಾರುಕಟ್ಟೆಯಲ್ಲಿ ಹೆಚ್ಚು ವರಿ ತೈಲವಿತ್ತಾದರೂ, ಈ ಪರಿಸ್ಥಿತಿ ಮುಂದು  ವರಿದರೆ ತೈಲ ಕೊರತೆ ಕಾಣಿಸಿಕೊಳ್ಳ ಬಹುದು ಎಂದು ಏಜೆನ್ಸಿ ಎಚ್ಚರಿಸಿದೆ. ಇದೇ ವೇಳೆ, ಪ್ರಮುಖ ತೈಲ ಪೈಪ್‌ಲೈನ್‌ ಮೇಲೆ ಬಂಡುಕೋರರು ನಡೆಸಿದ ದಾಳಿ ಯಿಂದಾಗಿ ಜಾಗತಿಕ ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸೌದಿ ಅರೇಬಿಯಾ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

  • ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ...

  • ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು...

  • ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ...

  • ವಾಷಿಂಗ್ಟನ್‌: ಮುಂದಿನ ತಿಂಗಳು ಜಪಾನ್‌ನಲ್ಲಿ ಜಿ-20 ಶೃಂಗ ನಡೆಯಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಭೇಟಿ ನಡೆಯಲಿದೆ. ಇಲ್ಲಿ...

  • ಕೈರೋ: ಇರಾಕ್‌ ಹಾಗೂ ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಐಸಿಸ್‌ ಉಗ್ರರು ಈಗ ಗೆರಿಲ್ಲಾ ಯುದ್ಧ ತಂತ್ರ ಗಳನ್ನು ಅಳವಡಿಸಿ ಕೊಳ್ಳುವ...

ಹೊಸ ಸೇರ್ಪಡೆ