ಬಡತನದಿಂದ ಕಂಗೆಟ್ಟ ಜನತೆ: ಟುನೇಶಿಯಾ : ಹಸಿವು ತಾಳಲಾರದೆ ಪ್ರತಿಭಟನೆ

We need food': Tunisians struggle under Covid 19 lockdown

Team Udayavani, Apr 13, 2020, 6:23 PM IST

ಬಡತನದಿಂದ ಕಂಗೆಟ್ಟ ಜನತೆ: ಟುನೇಶಿಯಾ : ಹಸಿವು ತಾಳಲಾರದೆ ಪ್ರತಿಭಟನೆ

ಟುನೇಶಿಯಾ: ಕೋವಿಡ್‌ 19 ಸಮಸ್ಯೆ ದಿನೇದಿನೆ ಉಲ್ಬಣವಾಗುತ್ತಿದ್ದು, ಟುನೇಶಿಯಾದ ಜನರು ಕಡಿಮೆ ಆದಾಯ, ಬಡತನದಿಂದ ಕಂಗೆಟ್ಟಿದ್ದಾರೆ.

ಅಲ್ಲಿನ ಜನರದ್ದು ಈಗ ಆಹಾರಕ್ಕಾಗಿಯೇ ಹೋರಾಡುವ ಸ್ಥಿತಿ. ವಿಶ್ವಬ್ಯಾಂಕ್‌ ಅಂಕಿ ಅಂಶ‌ಗಳ ಪ್ರಕಾರ 2010 ರಿಂದ ಇಲ್ಲಿನ ಆರ್ಥಿಕ ಬೆಳವಣಿಗೆಯು ವರ್ಷಕ್ಕೆ 1.8 ಪ್ರತಿಶತದಷ್ಟಿದೆ. ಇದು ಹಿಂದಿನ ವಾರ್ಷಿಕ ಸರಾಸರಿಗಿಂತ ಕಡಿಮೆ. 2007 ಬೆನ್‌ ಅಲಿ ನೇತೃತ್ವದಲ್ಲಿ ನಿರುದ್ಯೋಗವು ಶೇ. 12 ರಷ್ಟು ತಲುಪಿತ್ತು. 2011 ರ ದಂಗೆಯ ಸಮಯದಲ್ಲಿ ಅದು 18 ಪ್ರತಿಶತಕ್ಕೆ ಏರಿತು. ಈ ವರ್ಷ 15 ಕ್ಕೆ ಕುಸಿದಿದೆ.
ಕೋವಿಡ್‌19 ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ವಿಧಿಸಲು ಸರ್ಕಾರ ಕೈಗೊಂಡ ನಿರ್ಧಾರ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಈಗ ಲಾಕ್‌ಡೌನ್‌ ನ್ನು ಎಪ್ರಿಲ್‌ 19 ರ ವರೆಗೆ ವಿಸ್ತರಿಸಲಾಗಿದೆ.

ರೆಸ್ಟೊರೆಂಟ್‌, ಹೊಟೇಲು, ಕಚೇರಿಗಳು, ವಿಮಾನಗಳ ನಿಷೇಧ ಮತ್ತು ಭೂ ಗಡಿಗಳನ್ನು ಮುಚ್ಚುವುದು-ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲವೂ ಈಗಾಗಲೇ ಹೆಣಗಾಡುತ್ತಿರುವ ಆರ್ಥಿಕ ಪರಿಸ್ಥಿಯನ್ನು ಸ್ಥಗಿತಗೊಳಿಸಿದೆ. ಟುನೇಶಿಯಾದ ಆರ್ಥಿಕತೆಯು 2020 ರಲ್ಲಿ ಶೇ.4.3 ರಷ್ಟು ಕುಗ್ಗಲಿದೆ ಎಂದು ಅಂತಾರಾಷ್ಟ್ರಿಯ ಹಣಕಾಸು ನಿಧಿ ಶುಕ್ರವಾರ ತಿಳಿಸಿದೆ.

ಆರ್ಥಿಕ ನೆರವು
ಅರ್ಥಿಕತೆ ಸ್ಥಗಿತದ ದುಷ್ಪರಿಣಾಮ ತಗ್ಗಿಸಲು ಹಾಗೂ ಸಾಮಾಜಿಕ ಅಶಾಂತಿಯನ್ನು ನಿವಾರಿಸುವ ಪ್ರಯತ್ನದಲ್ಲಿ ಪ್ರಧಾನ ಮಂತ್ರಿ ಎಲೀಸ್‌ ಫ‌ಖ್‌ಫಾಕ್‌ 2.5 ಬಿಲಿಯನ್‌ ದಿನಾರ್‌ ಹಂಚಿಕೆ ಮಾಡುವುದಾಗಿ ಘೋಷಿಸಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಮೇಲಿನ ತೆರಿಗೆ ವಸೂಲಿ ಮುಂದೂಡಿಕೆ ಹಾಗೂ ಕಡಿಮೆ ಆದಾಯದ ಮರುಪಾವತಿಯನ್ನು ವಿಳಂಬಿಸುವುದರ ಜತೆಗೆ ಬಡಕುಟುಂಬಗಳಿಗೆ ಸಹಾಯ ಮಾಡಲು 450 ಮಿಲಿಯನ್‌ ದಿನಾರ್‌ಗಳನ್ನು ಈ ಪ್ಯಾಕೆಜ್‌ ಒಳಗೊಂಡಿದೆ. ಆದರೆ ಟುನೇಶಿಯಾದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರ ಜೀವನೊಪಾಯಕ್ಕೆ ತೀರಾ ಹೊಡೆತ ಬಿದ್ದಿದೆ.

ಪ್ರತಿಭಟಿಸುವಂತೆ ಮಾಡಿತು
ಸರಕಾರದ ಕಾನೂನು ಕ್ರಮವನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನೂರಾರು ಜನ ತಮ್ಮ ಸ್ಥಳೀಯ ಸರಕಾರಿ ಕಚೇರಿಗಳ ಎದುರು ಪ್ರತಿಭಟನೆ ಆರಂಭಿಸಿದರು. ಮೂಲ ಆದಾಯವನ್ನು ಕಳೆದುಕೊಂಡ ಜನರು ಸ್ವಯಂ ಪ್ರೇರಿತರಾಗಿ ಹೊರಬಂದು ತಮ್ಮ ಹಸಿವನ್ನು ನೀಗಿಸುವಂತೆ ಪ್ರತಿಭಟಿಸಿದರು ಎಂದು ಅಲ್ಲಿನ ಕಾರ್ಮಿಕ ವರ್ಗದ ಮಾರ್ವನ್‌ ಜೆಲ್ಲಾಸಿ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.