Qatar: ಭಾರತೀಯ ನೌಕಾಪಡೆ ಮಾಜಿ ಸಿಬಂದಿಗಳಿಗೆ 3ರಿಂದ25 ವರ್ಷ ಜೈಲು ಶಿಕ್ಷೆ
Team Udayavani, Dec 30, 2023, 12:07 AM IST
ಹೊಸದಿಲ್ಲಿ: ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಸಿಬಂದಿಗೆ ಗಲ್ಲು ಸಜೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗಿದೆ.
ಸಿಬಂದಿಯನ್ನು 3ರಿಂದ 25 ವರ್ಷಗಳ ವರಗೆ ಜೈಲಿನಲ್ಲಿರಿಸಲು ಕತಾರ್ ನ್ಯಾಯಾಲಯ ಆದೇಶ ಹೊರಡಿ ಸಿದೆ. ಗುರುವಾರವಷ್ಟೇ ಅವರಿಗೆ ನೀಡ ಲಾಗಿದ್ದ ಗಲ್ಲು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿ ಕತಾರ್ ಸರಕಾರ ತೀರ್ಮಾನ ಪ್ರಕಟಿಸಿತ್ತು. ಶಿಕ್ಷೆಗೆ ಗುರಿಯಾದವರ ಪೈಕಿ ಓರ್ವ ನಾವಿಕರಿದ್ದು, ಅವರಿಗೆ ಮಾತ್ರ 3 ವರ್ಷಗಳ ಅವಧಿಯ ಜೆಲು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಇಬ್ಬರು ಅಧಿಕಾರಿಗಳಿಗೆ 10 ವರ್ಷ, ನಾಲ್ವರಿಗೆ 15 ವರ್ಷ ಮತ್ತು ದಹ್ರಾ ಗ್ಲೋಬಲ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಧಿಕಾರಿಗೆ 25 ವರ್ಷಗಳ ಸಜೆ ವಿಧಿಸಲಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ