ಲಂಡನ್: 40 ಭಾರತೀಯರಿಗೆ ಗೌರವ
Team Udayavani, Jun 2, 2022, 7:55 PM IST
ಲಂಡನ್: ಕ್ವೀನ್ ಎಲಿಜಬೆತ್ 2 ಅವರು ರಾಣಿಯಾಗಿ 70 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಗುರುವಾರ ಲಂಡನ್ನಲ್ಲಿ ಪ್ಲಾಟಿನಂ ಜುಬಿಲಿ ಉತ್ಸವ ನಡೆಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಸೂಚಿಸಲಾಗಿದೆ. ಅದೇ ರೀತಿ ಭಾರತ ಮೂಲದವರಾಗಿದ್ದುಕೊಂಡು, ಬ್ರಿಟನ್ನಲ್ಲಿ ಸಾಧನೆ ಮಾಡಿದ 40 ಮಂದಿಗೆ ಗೌರವ ಸೂಚಿಸಲಾಗಿದೆ.
ಬೂಕರ್ ಪ್ರಶಸ್ತಿ ಪಡೆದ ಕೃತಿಯಾದ “ಮಿಡ್ನೈಟ್ಸ್ ಚಿಲ್ಡ್ರನ್’ ಪುಸ್ತಕವನ್ನು ಬರೆದ ಮುಂಬೈ ಮೂಲದ ಸಾಹಿತಿ ಸಲ್ಮಾನ್ ರಶ್ದಿ ಗೌರವ ಸ್ವೀಕರಿಸಿದ ಪ್ರಮುಖರಾಗಿದ್ದಾರೆ.
ಅವರೊಂದಿಗೆ ಅವಿನಾಶ್ ಮಿಟ್ಟರ್ ಗೋಯಲ್, ಕಿಶೋರ್ಕಾಂತ್ ಭಟ್ಟೆಸ್ಸಾ, ರೋಹಿತ್ ನಾಯಕ್, ಇಂದ್ರಾನಿಲ್ ಚಕ್ರವರ್ತಿ ಸೇರಿ ಅನೇಕರು ಗೌರವ ಸ್ವೀಕರಿಸಿದ್ದಾರೆ.