ಸಿಕ್ಖ್ ಯೋಧಗೆ ವಜಾ ಭೀತಿ
Team Udayavani, Sep 26, 2018, 6:13 PM IST
ಲಂಡನ್: ಸಮುದಾಯದ ಸಂಪ್ರದಾಯದಂತೆ ಟರ್ಬನ್ ಧರಿಸಿಯೇ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್ ಹುಟ್ಟು ಹಬ್ಬದಂದು ಪಥಸಂಚಲನದಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದ್ದ 22 ವರ್ಷದ ಮೊದಲ ಸಿಕ್ಖ್ ಯೋಧ ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರು ಕೊಕೇನ್ ಸೇವನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಅವರನ್ನು ಉದ್ಯೋಗದಿಂದ ವಜಾ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚರಣ್ಪ್ರೀತ್ ಸಿಂಗ್ ಲಾಲ್ ಕಳೆದ ಜೂನ್ನಲ್ಲಿ ಟರ್ಬನ್ ಧರಿಸಿಯೇ ಪಥಸಂಚಲನದಲ್ಲಿ ಪಾಲ್ಗೊಂಡು ವಿಶ್ವದ ಗಮನ ಸೆಳೆದಿದ್ದರು. ಕಳೆದವಾರ ನಡೆದ ನಿಷೇಧಿತ ಉದ್ದೀಪನ ದ್ರವ್ಯ ಸೇವನಾ ಪರೀಕ್ಷೆ ವೇಳೆ, ಅವರು ಭಾರೀ ಪ್ರಮಾಣದ ಕೊಕೇನ್ ಸೇವಿಸಿದ್ದು ದೃಢಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ