ಕತಾರ್ನಲ್ಲಿ ಶಾಂತಿ ಮಾತುಕತೆ; ಕಾಬೂಲಿನಲ್ಲಿ ತಾಲಿಬಾನ್ ಉಗ್ರರ ದಾಳಿ
Team Udayavani, May 8, 2019, 4:05 PM IST
ಕಾಬೂಲ್ : ಅಂತಾರಾಷ್ಟ್ರೀಯ ನೆರವಿನ ಸರಕಾರೇತರ ಸೇವಾ ಸಂಘಟನೆಯೊಂದರ ಕಾರ್ಯಾಲಯವಿರುವ ಮಧ್ಯ ಕಾಬೂಲಿನ ಕಾಂಪೌಂಡ್ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿರುವುದಾಗಿ ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಕಳೆದ 18 ವರ್ಷಗಳಿಂದ ಸಾಗುತ್ತಿರುವ ಸಮರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೊಲ್ಲಿಯ ಕತಾರ್ ನಲ್ಲಿ
ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುತ್ತಿರುವಂತೆಯೇ ಇತ್ತ ಕಾಬೂಲ್ ನಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದೆ.
ಅಫ್ಘಾನಿಸ್ಥಾನದಲ್ಲಿ ಸೇವಾ ನಿರವಾಗಿರುವ ಕೌಂಟರ್ಪಾರ್ಟ್ ಇಂಟರ್ನ್ಯಾಶನಲ್ ಸಂಘಟನೆಯ ಕಾರ್ಯಾಲಯಕ್ಕೆ ಸಮೀಪವೇ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ ಎಂದು ಒಳಾಡಳಿತ ಸಚಿವಾಲಯದ ವಕ್ತಾರೆ ನಸ್ರತ್ ರಹೀಮೀ ಹೇಳಿದ್ದಾರೆ.