ಬೋಕೊ ಹರಾಮ್ ಉಗ್ರರ ದಾಳಿ: 30 ಯೋಧರು ಹತ
Team Udayavani, Sep 2, 2018, 6:00 AM IST
ಕಾನೊ(ನೈಜೀರಿಯಾ): ಇಲ್ಲಿಯ ನೈಗರ್ ಬಳಿಯ ಗಡಿ ಪ್ರದೇಶದ ಸೇನಾನೆಲೆಯಲ್ಲಿ ಬೊಕೊ ಹರಾಮ್ ಉಗ್ರರ ಜತೆ ಕಾದಾಡುತ್ತಿದ್ದ ಸುಮಾರು 30 ನೈಜೀರಿಯಾ ಸೈನಿಕರು ಸಾವಿಗೀಡಾಗಿದ್ದಾರೆ. ತಡರಾತ್ರಿ ಟ್ರಕ್ಗಳಲ್ಲಿ ಬಂದ ಬೋಕೊಹರಾಮ್ ಉಗ್ರರು ಸೇನಾನೆಲೆ ಮೇಲೆ ಒಂದೇ ಸಮನೆ ದಾಳಿ ನಡೆಸಲು ಆರಂಭಿಸಿದರು. ಕೆಲವು ಕಾಲ ನಡೆದ ಈ ದಾಳಿಯಲ್ಲಿ 30 ಯೋಧರು ಹತರಾದರು ಎಂದು ಇಲ್ಲಿಯ ಸೇನಾ ಮೂಲಗಳು ತಿಳಿಸಿವೆ.