ಟ್ರಂಪ್ ಈಗ “ಸೂಪರ್ಮ್ಯಾನ್’!; ತಮ್ಮದೇ ಚಿತ್ರಗಳುಳ್ಳ ಡಿಜಿಟಲ್ ಟ್ರೇಡಿಂಗ್ ಕಾರ್ಡ್ ಬಿಡುಗಡೆ
2024ರ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾದ ಮಾಜಿ ಅಧ್ಯಕ್ಷ
Team Udayavani, Dec 18, 2022, 7:45 AM IST
ವಾಷಿಂಗ್ಟನ್:2024ರ ಅಧ್ಯಕ್ಷೀಯ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ತಮ್ಮದೇ ಆದ ಡಿಜಿಟಲ್ ಟ್ರೇಡಿಂಗ್ ಕಾರ್ಡ್ ಅನ್ನು ಮಾರಾಟ ಮಾಡಲು ಆನ್ಲೈನ್ ಮಳಿಗೆಯೊಂದನ್ನು ತೆರೆಯುವ ಬಗ್ಗೆ ಘೋಷಿಸಿದ್ದಾರೆ!
ವಿಶೇಷವೆಂದರೆ, 99 ಜಾಲರ್ ಮೌಲ್ಯದ ಈ ಡಿಜಿಟಲ್ ಕಾರ್ಡ್ನಲ್ಲಿ ಟ್ರಂಪ್ ತಮ್ಮನ್ನು ತಾವು “ಸೂಪರ್ಮ್ಯಾನ್’ ಎಂದು ಬಿಂಬಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾರ್ಡ್ನಲ್ಲಿ ಟ್ರಂಪ್ರನ್ನು ಸೂಪರ್ಹೀರೋ, ಓಲ್ಡ್ ವೆಸ್ಟ್ ಶೆರಿಫ್, ಗಗನಯಾತ್ರಿ ಹಾಗೂ ಇತರೆ ರೂಪದಲ್ಲಿ ಚಿತ್ರಿಸಲಾಗಿದೆ. ಪ್ರತಿ ಕಾರ್ಡ್ಗೆ 8,100 ರೂ. ನಿಗದಿ ಮಾಡಲಾಗಿದೆ.
“ಅಮೆರಿಕಕ್ಕೆ ಒಬ್ಬ ಸೂಪರ್ಹೀರೋ ಬೇಕು. ನನ್ನನ್ನು ನಾನು ಸೂಪರ್ಮ್ಯಾನ್ ಎಂದು ಬಿಂಬಿಸಿಕೊಳ್ಳಲು ಇಷ್ಟಪಡುತ್ತೇನೆ’ ಎಂದೂ ಟ್ರಂಪ್ ಹೇಳಿದ್ದಾರೆ.
ಡಿಜಿಟಲ್ ಕಾರ್ಡ್ ಕೊಳ್ಳುವವರಿಗೆ ವಿವಿಧ ಆಫರ್ಗಳನ್ನೂ ನೀಡಲಾಗಿದೆ. 45 ಕಾರ್ಡ್ ಖರೀದಿ ಮಾಡಿದರೆ, ಫ್ಲೋರಿಡಾದ ಟ್ರಂಪ್ ರೆಸಾರ್ಟ್ನಲ್ಲಿ ನಡೆಯುವ ಪಾರ್ಟಿಗೆ ಟಿಕೆಟ್ ಸಿಗಲಿದೆ. ಇದಲ್ಲದೇ, ಟ್ರಂಪ್ ಅವರ ಒಡೆತನದ ಗಾಲ್ಫ್ ಮೈದಾನದಲ್ಲಿ ಆಡುವ, ಟ್ರಂಪ್ರನ್ನು ಭೇಟಿಯಾಗುವ ಅವಕಾಶವನ್ನೂ ನೀಡುವುದಾಗಿ ಘೋಷಿಸಲಾಗಿದೆ.
ಟ್ರಂಪ್ಗೆ ಸಂಕಷ್ಟ
ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ನಲ್ಲಿ ನಡೆದ ದಾಂದಲೆಗೆ ಸಂಬಂಧಿಸಿ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧದ ಮೂರು ಕ್ರಿಮಿನಲ್ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆಗೆ ಶಿಫಾರಸು ಮಾಡಲು ಸಂಸದೀಯ ಸಮಿತಿ ಮುಂದಾಗಿದೆ. ಅವರ ವಿರುದ್ಧ ದಂಗೆ, ಅಧಿಕೃತ ಕಲಾಪಕ್ಕೆ ಅಡ್ಡಿ ಮಾಡಿದ ಹಾಗೂ ಸಂಚು ರೂಪಿಸಿದ ಆರೋಪ ಕುರಿತೂ ತನಿಖೆಗೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಮಿತಿಯು ಸಭೆ ಸೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ