Ukraine: ನಾಯಿಗೂಡಿನಲ್ಲಿ ಬೆಳೆದ ಓಕ್ಸಾನಾ, ನಾಯಿಯಂತೆಯೇ ಆದಳು!
Team Udayavani, Feb 22, 2024, 6:15 AM IST
ಕೀವ್: ನೀವೆಲ್ಲರೂ “ಆಫ್ರಿಕಾದಲ್ಲಿ ಶೀಲಾ’, ಹಾಗೆಯೇ “ಟಾರ್ಜನ್ ಆ್ಯಂಡ್ ಮೋಗ್ಲಿ’ ಚಿತ್ರ ನೋಡಿರುತ್ತೀರಿ. “ಅಯ್ಯೋ, ಪ್ರಪಂಚದಲ್ಲಿ ಹೀಗೂ ಉಂಟೆ?’ ಎಂದುಕೊಂಡಿರಬಹುದು. ಆದರೆ ಇದೇ ಕಥೆಗಳನ್ನು ಹೋಲುವ ನೈಜ ಘಟನೆ ಉಕ್ರೇನ್ನಲ್ಲಿ ನಡೆದಿದೆ.
ಓಕ್ಸಾನಾ ಮಲಾಯಾ 3 ವರ್ಷದವಳಾಗಿದ್ದಾಗ, ತನ್ನ ಹೆತ್ತವರು ಅತಿಯಾಗಿ ಮದ್ಯಪಾನ ಮಾಡಿ ಈಕೆಯನ್ನು ಮನೆಯಿಂದ ಹೊರಗಟ್ಟಿದರು. ಅಂದು ತಮ್ಮ ಮನೆಯ ಸಾಕು ನಾಯಿ ಜತೆ ಮಲಗಿದ್ದ ಆಕೆಯ ಜೀವನವು ಆಘಾತಕಾರಿ ತಿರುವು ಪಡೆಯಿತು. 5 ವರ್ಷ ನಾಯಿಗೂಡಿನಲ್ಲೇ ಬೆಳೆದ ಈಕೆ, ನಾಯಿಗಳ ರೀತಿ 4 ಕಾಲಿನಲ್ಲಿ ನಡೆಯುವುದು, ಬೊಗಳುವುದು, ಕೈಗಳ ಸಹಾಯವಿಲ್ಲದೆ ಬಾಯಿ ಯಿಂದಲೇ ಆಹಾರ ಸೇವನೆ ಮಾಡುತ್ತಿದ್ದಳು. ದೇಹವನ್ನು ತನ್ನ ನಾಲಗೆಯಲ್ಲಿ ನೆಕ್ಕುವ ಮೂಲಕ ಶುಚಿ ಮಾಡಿಕೊಳ್ಳುತ್ತಿದ್ದ ಆಕೆ, ನೀರನ್ನೂ ನಾಲಗೆಯಲ್ಲಿ ನೆಕ್ಕುತ್ತಿದ್ದಳು. ಇಂಥ ಪರಿಸ್ಥಿತಿಯಲ್ಲಿ ಆಕೆಯನ್ನು ರಕ್ಷಿಸಿದ ಅಧಿಕಾರಿಗಳು, ಸೂಕ್ತ ಮನೋಚಿಕಿತ್ಸೆಯನ್ನು ನೀಡಿದ್ದಾರೆ. ಈಗ ಆಕೆಗೆ 40 ವರ್ಷ ವಯಸ್ಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್