Sparking Frenzy; ಬೆಚ್ಚಿಬೀಳಿಸಿದ ಏಲಿಯನ್; ಅಲ್ಲ! ಸ್ಕೈಡೈವರ್ಗಳು…
ದಾಖಲೆ ನಿರ್ಮಿಸುವ ಪ್ರಯತ್ನ ತಂದಿಟ್ಟ ಫಜೀತಿ
Team Udayavani, Mar 30, 2024, 6:20 AM IST
ವಾಷಿಂಗ್ಟನ್: ಏಲಿಯನ್ಗಳ ಕಥೆಗಳನ್ನು ಕೇಳಿರುತ್ತೀರಿ, ಸಿನೆಮಾಗಳಲ್ಲಿ ನೋಡಿಯೂ ಇರುತ್ತೀರಿ! ಆ ಕಥೆಗಳು ನಿಜವಾದರೆ? ನೀವಿರುವಲ್ಲಿಗೆ ಅನ್ಯಗ್ರಹ ಜೀವಿಗಳು ಲಗ್ಗೆ ಇಟ್ಟರೆ ಹೇಗಿರಬಹುದು? ಇಂಥದ್ದೇ ಒಂದು ಸನ್ನಿವೇಶ ಅಮೆರಿಕದ ಆರಿಜೋನಾ ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಕಡೆಗೆ ತಾವು ಕಂಡದ್ದು ಏಲಿಯನ್ಗಳನ್ನಲ್ಲ, ನಮ್ಮಂತೆಯೇ ಮನುಷ್ಯರನ್ನು ಎಂದು ತಿಳಿದ ಜನ ನಿರಾಳರಾಗಿದ್ದಾರೆ.
46 ಸ್ಕೈ ಡೈವರ್ಗಳ ತಂಡವೊಂದು ವಿಶ್ವ ದಾಖಲೆ ನಿರ್ಮಿಸಲು ವಿನೂತನ ಸಾಹಸ ಮಾಡಿದ್ದಾರೆ. ಸ್ಕೈ ಡೈವಿಂಗ್ ಸೂಟ್ಗಳನ್ನು ಧರಿಸಿ, ಕಾಲಿಗೆ ವಿಭಿನ್ನ ಲೈಟಿಂಗ್ ಸ್ಟ್ರಿಪ್ಗ್ಳನ್ನು ಅಳವಡಿಸಿ ಕೊಂಡು ವಿಮಾನದಿಂದ 16,000 ಅಡಿ ಎತ್ತರದಿಂದ ಜಿಗಿದಿದ್ದಾರೆ. ಅಷ್ಟೂ ಮಂದಿ ಸ್ಕೈ ಡೈವರ್ಗಳು ತಲೆ ಕೆಳಗಾಗಿಸಿ ಒಬ್ಬರ ಕೈಯನ್ನು ಮತ್ತೂಬ್ಬರು ಹಿಡಿದು ವಿವಿಧ ಆಕಾರಗಳನ್ನು ರಚಿಸುವ ಮೂಲಕ ಗಂಟೆಗೆ 322 ಕಿ.ಮೀ. ವೇಗದಲ್ಲಿ ಸ್ಕೈಡೈವ್ ಮಾಡಿದ್ದಾರೆ.
ಇದನ್ನು ಕಂಡ ಜನರು ಗಾಬರಿ ಗೊಂಡಿದ್ದಾರೆ. ಯಾವುದೋ ಅನ್ಯಗ್ರಹ ಜೀವಿಗಳೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ಪೊಲೀಸರಿಂದ ಇವರು ಸ್ಕೈ ಡೈವರ್ಗಳು ಎಂಬ ವಿಚಾರ ತಿಳಿದು ನಿರಾಳರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?