6ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಮಲ್ಪ್ರೀತ್
Team Udayavani, Aug 2, 2021, 9:19 PM IST
ಟೋಕಿಯೊ: ಮಹಿಳೆಯರ ಡಿಸ್ಕಸ್ ತ್ರೋನಲ್ಲಿ ಪದಕದ ಭರವಸೆ ಮೂಡಿಸಿದ್ದ ಕಮಲ್ಪ್ರೀತ್ ಕೌರ್, ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಸೋಮವಾರ ನಡೆದ ಡಿಸ್ಕಸ್ ತ್ರೋ ಫೈನಲ್ಸ್ನಲ್ಲಿ ತಮಗೆ ಸಿಕ್ಕಿದ ಮೂರು ಅವಕಾಶಗಳಲ್ಲಿ ಗರಿಷ್ಠ 63.70 ಮೀಟರ್ ವರೆಗೆ ಡಿಸ್ಕ್ ಎಸೆಯುವಲ್ಲಿ ಅವರು ಸಫಲರಾದರು. ಈ ಮೂಲಕ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕೃಷ್ಣಾ ಪುನಿಯ ಅವರ ಭಾರತದ ಸಾಧನೆಯನ್ನು (63.70 ಮೀ.) ಸರಿಗಟ್ಟಿದರು. ಶನಿವಾರ ನಡೆದಿದ್ದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 2ನೇ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕೌರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು.
ಫೈನಲ್ನಲ್ಲಿ 68.98 ಮೀಟರ್ ವರೆಗೆ ಡಿಸ್ಕ್ ಎಸೆದ ಅಮೆರಿಕದ ವಲ್ಲಾರಿ ಅಲ್ಮನ್ ಚಿನ್ನದ ಗೌರವಕ್ಕೆ ಭಾಜನರಾದರು. ಜರ್ಮನಿಯ ಕ್ರಿಸ್ಟಿನ್ ಪುಜೆನ್ಜ್ (66.86 ಮೀ.) ಹಾಗೂ ಹಾಲಿ ವಿಶ್ವ ಚಾಂಪಿಯನ್ ಕ್ಯೂಬಾದ ಯೈಮೆ ಪೆರೆಜ್ (65.72 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ