Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ

ಬ್ರಿಟಿಷರ ಆಳ್ವಿಕೆಯಲ್ಲೂ ಇಂತಹ ಕ್ರೌರ್ಯವು ನಡೆದಿಲ್ಲ...

Team Udayavani, Apr 21, 2024, 2:18 PM IST

1-aaaaa

ಹೊಸದಿಲ್ಲಿ: ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ತಿಹಾರ್ ಜೈಲಿನ ಹೊರಗೆ ಔಷಧ ಗಳನ್ನು ಹಿಡಿದು ಭಾನುವಾರ ಪ್ರತಿಭಟನೆಗಿಳಿದಿದೆ.

ಚುನಾಯಿತ ಸಿಎಂ ಅರವಿಂದ್ ಕೇಜ್ರಿವಾಲ್ ಮಧುಮೇಹ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಎಎಪಿಯ ಸೌರಭ್ ಭಾರದ್ವಾಜ್ ಆರೋಪ ಮಾಡಿದ್ದಾರೆ.

ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರು, “ಅರವಿಂದ್ ಕೇಜ್ರಿವಾಲ್ ಅವರು ಕಳೆದ 20 ದಿನಗಳಿಂದ ಜೈಲಿನಲ್ಲಿದ್ದಾರೆ. ಅವರು 30 ವರ್ಷಗಳಿಂದ ಮಧುಮೇಹಿ ಯಾಗಿದ್ದು ಅವರ ಸಕ್ಕರೆ ಮಟ್ಟ 300 ದಾಟಿದೆ. ನೀವು ಜಗತ್ತಿನ ಯಾವುದೇ ವೈದ್ಯರನ್ನು ಕೇಳಿದರೂ 300 ಕ್ಕಿಂತ ಹೆಚ್ಚಿರುವ ಸಕ್ಕರೆಯ ಮಟ್ಟವು ಇನ್ಸುಲಿನ್ ಇಲ್ಲದೆ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಹೇಳಿತ್ತಾರೆ. ತಿಹಾರ್ ಜೈಲಿನ ಆಡಳಿತವು ಇನ್ಸುಲಿನ್ ನೀಡಲು ನಿರಾಕರಿಸಿದೆ. 300 ಕ್ಕಿಂತ ಹೆಚ್ಚು ಸಕ್ಕರೆ ಮಟ್ಟ ಹೊಂದಿದ್ದರೂ ಇನ್ಸುಲಿನ್ ನಿರಾಕರಿಸುತ್ತಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲೂ ಇಂತಹ ಕ್ರೌರ್ಯವು ನಡೆದಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ತಿಹಾರ್‌ ಜೈಲಲ್ಲಿ ಕೇಜ್ರಿವಾಲ್‌ರನ್ನು ನಿಧಾವಾಗಿ ಕೊಲ್ಲಲು ಸಂಚು ನಡೆಸಲಾಗಿದೆ ಎಂದು ಆಪ್‌ ನಾಯಕ ಸೌರಭ್‌ ಭಾರದ್ವಾಜ್‌ ಆರೋಪಿಸಿದ್ದರು.

ಬಂಧನಕ್ಕೂ ಹಲವು ತಿಂಗಳುಗಳ ಮೊದಲಿನಿಂದಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಇನ್ಸುಲಿನ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪರ್ಯಾಯ ಔಷಧ ಮೆಟ್‌ಫೋರ್ಮಿನ್‌ ಮಾತ್ರೆ ಸೇವಿಸುತ್ತಿದ್ದಾರೆ. ಆರೋಗ್ಯ ತಪಾಸಣೆಯ ವೇಳೆ ಸ್ವತಃ ಕೇಜ್ರಿವಾಲ್‌ ಅವರೇ ಈ ಮಾಹಿತಿ ನೀಡಿದ್ದಾರೆ ಎಂದು ತಿಹಾರ್‌ ಜೈಲು ಆಡಳಿತ ತಿಳಿಸಿದೆ. ಅಲ್ಲದೆ ಕೇಜ್ರಿವಾಲರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿಲ್ಲ ಹಾಗೂ ಅಗತ್ಯಬಿದ್ದರೆ ಇನ್ಸುಲಿನ್‌ ಒದಗಿಸಲಾಗುವುದು ಎಂದಿದೆ. ಈ ವರದಿ ಲೆಫ್ಟಿನೆಂಟ್‌ ಗವರ್ನರ್‌ ಕೈಸೇರಿದೆ.

ಟಾಪ್ ನ್ಯೂಸ್

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

Modi Interview

Taj Mahal ಒಂದೇ ಪ್ರವಾಸಿ ತಾಣವಲ್ಲ…ಅಸಂಖ್ಯ ತಾಣಗಳಿವೆ: ಪ್ರಧಾನಿ ಮೋದಿ

bjpಸರ್ಕಾರದ ಕಮಿಷನ್‌ ದಾಹಕ್ಕೆ ಅಧಿಕಾರಿ ಬಲಿ: ಬಿಜೆಪಿ

ಸರ್ಕಾರದ ಕಮಿಷನ್‌ ದಾಹಕ್ಕೆ ಅಧಿಕಾರಿ ಬಲಿ: ಬಿಜೆಪಿ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi Interview

Taj Mahal ಒಂದೇ ಪ್ರವಾಸಿ ತಾಣವಲ್ಲ…ಅಸಂಖ್ಯ ತಾಣಗಳಿವೆ: ಪ್ರಧಾನಿ ಮೋದಿ

priyaanka

55 ವರ್ಷ ಆಳಿದರೂ ಕಾಂಗ್ರೆಸ್‌ ಶ್ರೀಮಂತವಾಗಲಿಲ್ಲ : ಪ್ರಿಯಾಂಕಾ

1-qeqqweqwewq

Stage ಕುಸಿತ: ಅಪಾಯದಿಂದ ಅದೃಷ್ಟವಶಾತ್‌ ರಾಹುಲ್‌ ಗಾಂಧಿ ಪಾರು: Watch Video

1-asasas

Kejriwal ಅವಕಾಶವಾದಿ, ಮಣಿಶಂಕರ್‌ ಅಯ್ಯರ್‌ ಬಾಯಿಬಡುಕ: ವಾದ್ರಾ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

Modi Interview

Taj Mahal ಒಂದೇ ಪ್ರವಾಸಿ ತಾಣವಲ್ಲ…ಅಸಂಖ್ಯ ತಾಣಗಳಿವೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.