BJP ಭ್ರಷ್ಟಾಚಾರದ ಮಾಡೆಲ್ ಯಾರು?: ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು?


Team Udayavani, Apr 24, 2023, 2:15 PM IST

b k hari (2)

ಕಾರವಾರ: ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ .ಹರಿಪ್ರಸಾದ್ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಬಿಜೆಪಿಯ ಭ್ರಷ್ಟಾಚಾರದ ಮಾಡೆಲ್ ಮಾಡಾಳು ವಿರೂಪಾಕ್ಷಪ್ಪ ಎಂದು ಸೋಮವಾರ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಿನ ಲಿಂಗಾಯಿತ ಮುಖ್ಯಮಂತ್ರಿ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಹರಿಪ್ರಸಾದ್ ಬಸವರಾಜ ಬೊಮ್ಮಾಯಿ ಸರ್ಕಾರ ಶೇ. 40 ರಷ್ಟು ಕಮಿಷನ್ ಸರ್ಕಾರ ಎಂದು ಹೇಳುವುದು ಸಿದ್ಧರಾಮಯ್ಯನವರ ಮಾತಿನ ಅರ್ಥ ಎಂದರು.

ಬಿಜೆಪಿಯವರು ಪಾಳುಬಿದ್ದ ಸ್ಮಶಾನದಲ್ಲಿ, ಮುರುಕಲು ಬಿದ್ದ ಮಸೀದಿಯಲ್ಲಿ ,ಹೇಳದೇ ಕೇಳದೇ ಇರುವ ದೇವಸ್ಥಾನದಲ್ಲಿ ರಾಜಕೀಯ ಮಾಡುವವರು‌‌ ಎಂದು ಆರೋಪಿಸಿದರು. ಬಿಜೆಪಿಯವರು ರಾಜಕೀಯ ಪಕ್ಷವಾಗಿ ಜಾತಿ ,ಧರ್ಮ ದ್ವೇಷದಲ್ಲಿ ರಾಜಕಾರಣ ಮಾಡುತಿದ್ದಾರೆ.ಇದಕ್ಕೆ ಜನ ಚುನಾವಣೆಯಲ್ಲಿಸರಿಯಾದ ಉತ್ತರ ಕೊಡುತ್ತಾರೆ.

ಬಿಜೆಪಿಯಲ್ಲಿ ಜಾತಿ ಧರ್ಮ ರಂಗಪ್ರವೇಶ ಮಾಡಿದೆ ಎಂದರು.ಭಾರತೀಯ ಜನತಾ ಪರ್ಟಿಯಲ್ಲಿ ಮುಖ್ಯಂತ್ರಿಯಾಗುವವರು ಎರಡೂವರೆ ಸಾವಿರ ಕೋಟಿ ಕೊಡಬೇಕು. ಹಾಗೆ ಕೊಡುವವರೇ ಮುಖ್ಯಮಂತ್ರಿ ಆಗ್ತಾರೆ ಅಂತ ಬಸವನಗೌಡ ಪಾಟೀಲ್ ಯತ್ನಾಳ್ ಹಿಂದೆ ಹೇಳಿದ್ದಾರೆ.ಹಾಗಾಗಿ ಹಣ ಕೊಟ್ಟವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎಂಬುದು ಅವರ ಮಾತಿನಲ್ಲೇ ಇದೆ. ಈಗ ಭಾರತೀಯ ಜನತಾ ಪಾರ್ಟಿ ದಿವಾಳಿತನದ ಹಂತ ತಲುಪಿದೆ. ಅವರಿಗೆ ಪಾರ್ಟಿ ಸೋಲುವ ಭೀತಿ ಆವರಿಸಿದೆ ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಪೋನ್ ಕದ್ದಾಲಿಕೆ ಮುಂದುವರಿಸಿದ್ದಾರೆ.ಸಿಬಿಐ,ಇಡಿ ಗಳನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ.ಆ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿನ್ನೆ ಗಂಗಾಧರ ಗೌಡ ರವರನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದೆವು. ಇಂದು ಲೋಕಾಯುಕ್ತ ದಾಳಿ ಆಗಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಹರಿಪ್ರಸಾದ್ ಆರೋಪಿಸಿದರು‌.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪಡೆಯಲು ಹೋರಾಡಿದೆ‌ . ಕಾಂಗ್ರೆಸ್ಸಿಗರು ಬ್ರಿಟೀಷರ ಗುಲಾಮರಾಗಿರಲಿಲ್ಲ ಹಾಗೂ ಕ್ಷಮಾಪಣೆ ಪತ್ರ ಬರೆದವರಲ್ಲ ಬ್ರಿಟೀಷರಿಗೆ ಎದೆ ತಟ್ಟಿ ನಿಂತವರು ನಾವು‌ . ಈಗಿನ ರಾಜಕೀಯ ಸನ್ನಿವೇಶ ಎದುರಿಸುತ್ತೇವೆ ಎಂದರು.

ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಬಿಜೆಪಿಗರನ್ನು ಜೈಲಿಗೆ ಕಳುಸುತ್ತೇವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಮಂಜುನಾಥ ನಾಯ್ಕ, ಡಿಸಿಸಿ ಅಧ್ಯಕ್ಷ ಸಾಯಿ ಗಾಂವಕರ್ ,ಶಂಭು ಶೆಟ್ಟಿ ಮುಂತಾದವರು ಇದ್ದರು.

ಟಾಪ್ ನ್ಯೂಸ್

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

33

ನರ್ಸಿಂಗ್‌ ಕಾಲೇಜುಗಳ ಶುಲ್ಕ ಪರಿಷ್ಕರಣೆ ಇಲ್ಲ, ಸೌಲಭ್ಯ ನೀಡದ ಕಾಲೇಜಿಗೆ ಬೀಗ ಹಾಕಿ: ಸಚಿವ

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

18

Nikhil kumaraswamy: ಸಿನೆಮಾಕ್ಕೆ ವಿರಾಮ ನೀಡಿ ಪಕ್ಷದ ಸಂಘಟನೆಗೆ ದುಡಿಯುವೆ; ನಿಖಿಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Gokarna: ಅಕ್ರಮ ಮದ್ಯ ಸಾಗಾಟ… ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರ ಬಂಧನ, ಸೊತ್ತು ವಶಕ್ಕೆ

Gokarna: ಅಕ್ರಮ ಮದ್ಯ ಸಾಗಾಟ… ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರ ಬಂಧನ, ಸೊತ್ತು ವಶಕ್ಕೆ

Gangavalli Bridge ಕೂಡುರಸ್ತೆ ಕುಸಿತ; ವಾಹನ ಸವಾರರ ಪರದಾಟ

Gangavalli Bridge ಕೂಡುರಸ್ತೆ ಕುಸಿತ; ವಾಹನ ಸವಾರರ ಪರದಾಟ

Dandeli: ದ್ವಿಚಕ್ರ ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ಅನಾಹುತ

Dandeli: ದ್ವಿಚಕ್ರ ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ಅನಾಹುತ

1-sadsad

Gokarna;ಗಂಗಾವಳಿ ಸೇತುವೆ ಕೂಡು ರಸ್ತೆಗೆ ಹಾಕಲಾದ ಮಣ್ಣು ಕುಸಿತ: ಆತಂಕ

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

tennis

Australian Open: ಪ್ರಣಯ್‌, ಸಮೀರ್‌ ಕ್ವಾರ್ಟರ್‌ ಫೈನಲಿಗೆ

Rohan Bopanna

ಪ್ಯಾರಿಸ್‌ ಒಲಿಂಪಿಕ್ಸ್‌  ಡಬಲ್ಸ್‌ ನಲ್ಲಿ ಬೋಪಣ್ಣ-ಬಾಲಾಜಿ

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

1-bbb

Kuwait ಭೀಕರ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.