ನೆರವಾಗಿ ನ್ಯಾಯ್‌; ಮತಕ್ಕಾಗಿ ಅಲ್ಲ

Team Udayavani, Apr 5, 2019, 6:00 AM IST

d-21

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದೆ. 55 ಪುಟಗಳ ಪುಸ್ತಕದಲ್ಲಿ ಸಮಾಜದ ಎಲ್ಲ ವರ್ಗಗಳನ್ನು ಸಂತೈಸುವ ಪ್ರಯತ್ನವಿದೆ. ಯಾವ ರೀತಿ ಅದನ್ನು ಸಿದ್ಧಪಡಿಸಲಾಯಿತು ಎಂದು ರಾಜ್ಯಸಭೆ ಸದಸ್ಯ, ಕನ್ನಡಿಗ ಪ್ರೊ.ರಾಜೀವ್‌ ಗೌಡ ವಿವರಿಸಿದ್ದಾರೆ. ಅವರು ಪ್ರಣಾಳಿಕೆ ಸಮಿತಿಯ ಸದಸ್ಯರೂ ಆಗಿದ್ದಾರೆ.

ಮೂರು ದಶಕಗಳ ಹಿಂದೆ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್ಥಿಕ ಸುಧಾರಣೆಯ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಅದರಿಂದಾಗಿ ಮಧ್ಯಮ ವರ್ಗದ ಕುಟುಂಬದ ಆದಾಯ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚಿನವರ ಒಲವು ಬಿಜೆಪಿ ಕಡೆಗೆ ಹರಿದಿತ್ತು. ಈ ಬಾರಿ ಅಂಥ ಆತಂಕ ಏನಾದರೂ ಇದೆಯೇ?
ಡಾ.ಮನಮೋಹನ್‌ ಸಿಂಗ್‌ ಆರ್ಥಿಕ ಉದಾರೀಕರಣ ಘೋಷಣೆ ಮಾಡಿ ದ್ದರಿಂದ ದೇಶದಲ್ಲಿ ಉದ್ಯಮಶೀಲತೆ ಹೆಚ್ಚಿನ ರೀತಿಯಲ್ಲಿ ಬೆಳೆಯಿತು. ಅನಗತ್ಯ ನಿಯಮಗಳನ್ನು ತೆಗೆದು ಹಾಕುವಲ್ಲಿ ನೆರವಾಯಿತು. ಅದು ಮಧ್ಯಮ ವರ್ಗದ ಸದಸ್ಯರಿಗೆ ನೆರವಾ ಯಿತು. ಅದಕ್ಕಿಂತಲೂ ಮೊದಲು ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆಸಿದರು. ಉದಾರೀಕರಣ ಎಂಬ ವಿಚಾರ ಆ ದಿನಗಳಿಂದಲೇ ಶುರುವಾಯಿತು.

ಅತ್ಯಂತ ದೊಡ್ಡ ಪ್ರಮಾಣದ ಸವಾಲುಗಳನ್ನು ಎದುರಿಸಿ, ಮುನ್ನುಗ್ಗುವ ನಿಟ್ಟಿನಲ್ಲಿಯೇ ಮನಮೋಹನ್‌ ಸಿಂಗ್‌ ವಿತ್ತ ಸಚಿವರಾಗಿದ್ದ ವೇಳೆ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಯಿತು. ನಾವು ಏನು ಸಾಧನೆಗಳನ್ನು ಮಾಡಿದ್ದೇವೆ ಅದುವೇ ಈಗ ಚರ್ಚೆಯಾಗುತ್ತಿದೆ.

2ಜಿ ತರಂಗಾಂತರ ಹಂಚಿಕೆಯಲ್ಲಿ ಉಂಟಾದ ಅವ್ಯವಹಾರ ಮಧ್ಯಮ ವರ್ಗಕ್ಕೆ ಆತಂಕ ತಂದದ್ದು ನಿಜ. ಅದಕ್ಕೆ ಪೂರಕವಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಳು ನಡೆದದ್ದು ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಅದಕ್ಕಾಗಿಯೇ ನಮ್ಮ ಅಧ್ಯಕ್ಷರು ಹೇಳಿದಂತೆ ಸ್ವಲ್ಪ ಅಹಂಕಾರವೂ ಪ್ರತಿಕೂಲವಾಗಿ ಪರಿಣಮಿಸಿತು.

ನಮ್ಮ ಪಕ್ಷ ಮಧ್ಯಮ ವರ್ಗದ ಕುಟುಂಬಗಳ ಜತೆಗಿನ ಸಂಪರ್ಕವೂ ಕೊಂಚ ಕಡಿಮೆಯಾಯಿತು. ಬಿಜೆಪಿಯನ್ನು ಆಯ್ಕೆ ಮಾಡಿದ ಅದೇ ವರ್ಗಕ್ಕೆ ಏನಾಯಿತು ಎನ್ನುವುದು ಈಗ ಅರಿವಾಗತೊಡಗಿದೆ. ಸರಿಯಾದ ರೀತಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳು ಸಿಕ್ಕಿತೇ? ನಿರ್ಭಯವಾಗಿರುವ ಸಮಾಜ ಅವರದ್ದಾಯಿತೇ? ಸೌಹಾರ್ದಯುತ ವಾತಾವರಣ ಇದೆಯೇ? ಈ ಎಲ್ಲಾ ವಿಚಾರಗಳಿಗೆ ತಡೆಯೊಡ್ಡಲಾಗಿದೆ. ಗುಂಪು ಥಳಿತ, ಹಿಂಸೆ ಸಾಮಾನ್ಯ ಎಂಬಂತಾಯಿತು. ಈ ಎಲ್ಲಾ ವಿಚಾರಗಳಿಂದಾಗಿ ಮಧ್ಯಮ ವರ್ಗದ ಕುಟುಂಬಗಳು ಮತ್ತೆ ಕಾಂಗ್ರೆಸ್‌ನತ್ತ ಮರಳಲಿವೆ ಎಂಬ ವಿಶ್ವಾಸ ನನ್ನದು.

ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಧಾನ ಭರವಸೆಯೇ “ನ್ಯಾಯ್‌’. ಅದರಿಂದಾಗಿ ಸಿಗುವ ರಾಜಕೀಯ ಲಾಭಗಳೇನು?
ಬಡತನ ಎನ್ನುವುದಕ್ಕೆ ಜಾತಿ, ಧರ್ಮ ಇಲ್ಲ. ಯಾರು ಬಡವರಾಗಿದ್ದಾರೆಯೋ ಅವರಿಗೆ ನೆರವಿನ ಹಸ್ತ ಬೇಕು. ಮತಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಿಲ್ಲ. ಬದಲಾಗಿ ಸಹಾಯ ಬೇಕಾದವರಿಗಾಗಿ ನೆರವಾಗಲು ಮುಂದಾಗುತ್ತಿದ್ದೇವೆ.

ಹವಾಮಾನ ಬದಲಾವಣೆ ವಿಚಾರ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿದೆ. ವಾಯು ಮಾಲಿನ್ಯವನ್ನು ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ ಎಂದು ವಿಶ್ಲೇಷಿಸಲಾಗಿದೆ.
ಕೇರಳದಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಗಮನಿಸಿದ್ದೀರಿ. ಇನ್ನು ನವದೆಹಲಿಯಲ್ಲಿ ಯಾವ ಪರಿಸ್ಥಿತಿ ಇದೆ ಎಂದು ಗೊತ್ತೇ ಇದೆ. ಶ್ರೀಮಂತ, ಬಡವ ಎಂದು ಬೇಧವೆಣಿಸದೆ ಕಾಡುತ್ತಿದೆ. ನಾವು ಪ್ರಸ್ತಾಪಿಸಿದ ಸಲಹೆಗಳ ಜಾರಿಗೆ ಕೈಗಾರಿಕೆ ಮತ್ತು ಇತರ ವಲಯಗಳಿಂದ ಸಹಮತದ ಅಗತ್ಯವೂ ಇದೆ. ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಕರೆದಿರುವುದರಿಂದ ಎಲ್ಲರ ಗಮನ ಸೆಳೆದಂತಾಗುತ್ತದೆ.

(ಸಂದರ್ಶನ ಕೃಪೆ: ನ್ಯೂಸ್‌18)

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.