ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್
Team Udayavani, Apr 17, 2024, 1:36 AM IST
ಸಿಡ್ನಿ: ಗೃಹಹಿಂಸೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಅವರಿಗೆ ಕ್ವೀನ್ಸ್ಲ್ಯಾಂಡ್ ರಾಜ್ಯದ ನ್ಯಾಯಾ ಲಯದಲ್ಲಿ ಜಾಮೀನು ನಿರಾಕರಿಸಲ್ಪಟ್ಟಿದೆ. ಇದರಿಂದ ಆಘಾತಕ್ಕೊಳಗಾಗಿ ಅವರು ಕುಸಿದು ಬಿದ್ದರು.
ಸ್ಲೇಟರ್ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಹಲವು ಗಂಭೀರ ವಾಗಿವೆ. ಕೆಲವಕ್ಕೆ ಸಿಸಿ ಟಿವಿ, ವೀಡಿಯೋ ಸಾಕ್ಷಿಗಳೂ ಸಿಕ್ಕಿವೆ. ಮಹಿಳೆ ಮನೆಗೆ ನುಗ್ಗಿದ್ದು, ಆಕೆಯ ಕತ್ತು ಹಿಸುಕಿದ್ದು, ಶಾರೀರಿಕ ಹಲ್ಲೆ ಮಾಡಿ ಗಂಭೀರ ಗಾಯಗಳಿಗೆ ಕಾರಣವಾಗಿದ್ದಕ್ಕೆ ವೀಡಿಯೋ ಸಾಕ್ಷಿಗಳಿವೆ.