Budget; ರಾಜ್ಯಾದ್ಯಂತ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಆರಂಭ

ವಿವಿಧೆಡೆ 50 ಕೆಫೆ ಸ್ಥಾಪನೆಗೆ 7.50 ಕೋಟಿ ರೂಪಾಯಿ ಮೀಸಲು

Team Udayavani, Feb 16, 2024, 11:11 PM IST

Budget; ರಾಜ್ಯಾದ್ಯಂತ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಆರಂಭ

ನಿರುದ್ಯೋಗಿ ಯುವಕರಿಗೆ ಯುವನಿಧಿಯಡಿ ನಿರುದ್ಯೋಗಿ ಭತ್ಯೆ ನೀಡಿರುವ ಸರಕಾರ ಈಗ ನಿರುದ್ಯೋಗಿಗಳನ್ನು ಕೌಶಲ್ಯ ಭರಿತರನ್ನಾಗಿಸಲು ಕಾರ್ಯತತ್ಪರವಾಗಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಉತ್ಸಾಹವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟಕುವ ದರದಲ್ಲಿ ನೀಡುವ ಮಹಿಳೆಯರೇ ನಡೆಸುವ “ಕೆಫೆ ಸಂಜೀವಿನಿ’ ಹೆಸರಿನ ವಿಶಿಷ್ಟ ಕಾರ್ಯ ಕ್ರಮವನ್ನು ಘೋಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 50 ಕೆಫೆ ಗಳ ಸ್ಥಾಪನೆಗೆ 7.50 ಕೋಟಿ ರೂ. ಮೀಸಲಿರಿ ಸಲಾಗಿದೆ. ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ, 25 ಕೋಟಿ ರೂ. ವೆಚ್ಚದಲ್ಲಿ 2,500 ಕಾಫಿ ಕಿಯೋಸ್ಕ್ ಸ್ಥಾಪನೆಯನ್ನು ಪ್ರಕಟಿಸಲಾಗಿದೆ.

ಮಹಿಳಾ ಸ್ವ-ಸಹಾಯ ಗುಂಪುಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದ ನಿರ್ವಹಣೆಯಲ್ಲಿ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೈಗೆಟಕುವ ದರದಲ್ಲಿ ರಾತ್ರಿ ತಂಗುವ ವ್ಯವಸ್ಥೆಯನ್ನು 5 ನಗರಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಒದಗಿಸುವುದಾಗಿ ಘೋಷಿಸಲಾಗಿದೆ.

ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ತರಬೇತಿ, ಯುವನಿಧಿ ಪ್ಲಸ್‌ ನಡಿ 25 ಸಾವಿರ ಫ‌ಲಾನುಭವಿಗಳಿಗೆ ವಿಷಯಾಧಾರಿತ ಉದ್ಯಮ ಶೀಲತಾ ಅಭಿವೃದ್ಧಿ, ರಾಜ್ಯಾದ್ಯಂತ ಯುವ ಸಮೃದ್ಧಿ ಉದ್ಯೋಗ ಮೇಳ ಆಯೋಜನೆ, ರಾಜ್ಯ ಕೌಶಲ್ಯ ನೀತಿಯ ರಚನೆ ಮುಂತಾದ ಕಾರ್ಯಕ್ರಮಗಳನ್ನು ಘೋಷಿಸಿದೆ.
ಸ್ಕಿಲ್‌ ಅಕಾಡೆಮಿ ಸ್ಥಾಪನೆ: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ಕಿಲ್‌ ಅಕಾಡೆಮಿಯ ಸ್ಥಾಪನೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಹಯೋಗದಲ್ಲಿ ಕಲಬುರಗಿ, ಕೊಪ್ಪಳದ ತಳಕಲ್‌ ಮತ್ತು ಮೈಸೂರಿ ನ ವರುಣಾದಲ್ಲಿ ಒಟ್ಟು 350 ಕೋಟಿ ರೂ. ವೆಚ್ಚದಲ್ಲಿ ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಜಿಲ್ಲಾ ಖನಿಜನಿಧಿಯ ಮೂಲಕ ಹಾಗೂ ಗದಗ ಜಿಲ್ಲೆಯ ರೋಣದಲ್ಲಿ ನಬಾರ್ಡ್‌ ಸಹಯೋಗದಲ್ಲಿ ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ಹೊಸ ಜಿ.ಟಿ.ಟಿ.ಸಿಗಳು, ಜಿ.ಟಿ.ಟಿ.ಸಿ ಗಳಲ್ಲಿ ಎಲೆಕ್ಟ್ರಾನಿಕ್ಸ್‌, ಕಮ್ಯುನಿಕೇಶನ್‌, ಮೆಕ್ಯಾಟ್ರಾನಿಕ್ಸ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಎಂಜಿನಿಯ ರಿಂಗ್‌, ರೊಬೊಟಿಕ್ಸ್‌ ಇತ್ಯಾದಿ ಹೆಚ್ಚುವರಿ ಡಿಪ್ಲೊಮ ಕೋರ್ಸ್‌ಗಳನ್ನು ಆರಂಭಿಸುವ ಪ್ರಸ್ತಾಪವನ್ನು ಮಂಡಿಸಲಾಗಿದೆ. 16ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್‌.ಸಿ ಯಂತ್ರವನ್ನು ಕೇಂದ್ರೀಕರಿಸುವ ಶ್ರೇಷ್ಠತಾ ಕೇಂದ್ರ, ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಸಂವಹನ ಕೌಶಲ್ಯ ತರಬೇತಿಗೆ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಟಾಪ್ ನ್ಯೂಸ್

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

NIA (2)

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NIA (2)

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

ಕಾಂಗ್ರೆಸ್‌ ಮಾಡಿದ ಅವಮಾನದಿಂದಾಗಿ ಬಿಜೆಪಿ ಸಖ್ಯ; ಮೋದಿ ಜತೆಗೆ ರಾಹುಲ್‌ ಹೋಲಿಕೆ ಸಲ್ಲದು

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ರಾಜ್ಯದಲ್ಲಿ ಖತರ್ನಾಕ್‌ ಸ್ಥಿತಿ, ಕಾಂಗ್ರೆಸ್‌ ಬಗ್ಗೆ ಹುಷಾರಾಗಿರಿ: ಮೋದಿ ವಾಗ್ಧಾಳಿ!

ರಾಜ್ಯದಲ್ಲಿ ಖತರ್ನಾಕ್‌ ಸ್ಥಿತಿ, ಕಾಂಗ್ರೆಸ್‌ ಬಗ್ಗೆ ಹುಷಾರಾಗಿರಿ: ಮೋದಿ ವಾಗ್ಧಾಳಿ!

Mahesh JOshi

ನವೆಂಬರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಜೋಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

NIA (2)

Cafe Blast: ಶಂಕಿತರ ಎನ್‌ಐಎ ಕಸ್ಟಡಿ ನಾಳೆಗೆ ಮುಕ್ತಾಯ

ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

Panamburu; ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.