Udayavni Special

ಮೊದಲ ಮಹಾಯುದ್ಧದಲ್ಲಿ ಕಾಲಾಳು ಪಡೆಯ ಮೂಲಕ ಯುದ್ಧದಲ್ಲಿ ಪಾಲ್ಗೊಂಡ ಕೂರ್ಗ್‌ ರೆಜಿಮೆಂಟ್‌


Team Udayavani, Nov 4, 2020, 4:33 PM IST

Army

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತಿದೆ. ಹೆತ್ತ ನೆಲದ ಸೇವೆಗಾಗಿ ನೆತ್ತರು ಚೆಲ್ಲಿ ದುಡಿದ ವೀರ ಯೋಧರು ಅನೇಕ.

ತನ್ನ ನೆಲದಾದ್ಯಂತ ಇಂತಹ ಕಲಿಯೋಧರಿಗೆ ಜನ್ಮನೀಡಿದ ಭೂಮಿ ಕೊಡಗು. ಅತುಲ್ಯ ಸೌಂದರ್ಯ, ಅಗಣಿತ ಸಂಸ್ಕೃತಿಯ ಈ ನೆಲದ ಹೆಸರಲ್ಲೇ, ಬ್ರಿಟಿಷರ ಕಾಲದಿಂದಲೂ ಇಲ್ಲಿನದೇ ಯೋಧರ ರೆಜಿಮೆಂಟ್‌ ಇದ್ದುದು ಆಶ್ಚರ್ಯವೇನಲ್ಲ. ಅದುವೇ ‘ಕೂರ್ಗ್‌ ರೆಜಿಮೆಂಟ್‌’.

1767ರಲ್ಲಿ ಸ್ಥಾಪಿತವಾದ ಈ ರೆಜಿಮೆಂಟ್‌ನ್ನು 15ನೇ ಬೆಟಾಲಿಯನ್‌ ಕೋಸ್ಟ್‌ ಸಿಪಾಯಿಸ್‌ ಎಂದು ಕರೆಯುತ್ತಿದ್ದರು. ಪ್ರಾರಂಭದಲ್ಲಿ ಬ್ರಿಟಿಷ್‌ ಭಾರತೀಯ ಸೇನಾಪಡೆಯಲ್ಲಿ ಇದು ಸಕ್ರಿಯವಾಗಿದ್ದು, 1901ರ ವರೆಗೆ ಇದನ್ನು “71ನೇ ಮದ್ರಾಸ್‌ ಇನ್‌ ಫೆಂಟ್ರಿ’ ಎಂದು ಕರೆಯಲಾಗುತ್ತಿತ್ತು.

1902ರ ವರೆಗೆ ತೆಲುಗು, ತಮಿಳರಿಗೆ ಮಾತ್ರ ಈ ವಿಭಾಗದಲ್ಲಿ ಸೇವೆ ಸಲ್ಲಿಸಲು ಅವಕಾಶವಿದ್ದು, ಅನಂತರ ಕೊಡವರ ಶೌರ್ಯ ಗುರುತಿಸಿ ಯೋಧರಾಗಿ ನೇಮಿಸಿ “ಕೂರ್ಗ್‌ ರೆಜಿಮೆಂಟ್‌’ನ್ನು ಕಟ್ಟಲಾಯಿತು.

ಕೆಂಪು ಫೆಝ್ ಟೋಪಿ ಪರಿಚಯ
1903ರಲ್ಲಿ ಈ ವಿಭಾಗವನ್ನು “71ನೇ ಕೂರ್ಗ್‌ ರೈಫಲ್ಸ್‌’ ಎನ್ನುತ್ತಿದ್ದರು. ಪ್ರಾರಂಭದಲ್ಲಿ ಸೇನಾ ಸಮವಸ್ತ್ರ ಬ್ರಿಟಿಷ್‌ ಮಾದರಿಯನ್ನೇ ಅನುಸರಿಸಿದರೂ ಅನಂತರ ಈ ವಿಭಾಗಕ್ಕೆ ಸೀಮಿತವಾದ ವಿಶಿಷ್ಟ ಕಡು ಹಸುರು ಬಣ್ಣದ ಸಮವಸ್ತ್ರವನ್ನು ನೀಡಲಾಯಿತು. ಜತೆಗೆ ಮೊಟ್ಟ ಮೊದಲ ಬಾರಿಗೆ “ಕೆಂಪು ಫೆಝ್’ ಟೋಪಿಯನ್ನು ಸೇನೆಯಲ್ಲಿ ಧರಿಸಲು ಕೊಟ್ಟದ್ದು ಆ ಕಾಲಕ್ಕೆ ವಿರಳಾತಿವಿರಳ.

ಕೊಡಗಿನ ಕತ್ತಿಗಳ ಚಿಹ್ನೆ
ಮೊದಲ ಮಹಾಯುದ್ಧದ ಅನಂತರ ಈ ರೆಜಿಮೆಂಟ್‌ ಉಳಿಸಲು ಸಾಕಷ್ಟು ಪ್ರಯತ್ನಗಳಾದವು. ಆದರೆ ಸೈನಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ರೆಜಿಮೆಂಟ್‌ ಉಳಿಯಲಿಲ್ಲ. 1942ರಲ್ಲಿ “ಕೂರ್ಗ್‌ ಬೆಟಾಲಿಯನ್‌ ಕಟ್ಟಲಾಯಿತು. ಈ ಬೆಟಾಲಿಯನ್‌ ನ ಬ್ಯಾಡ್ಜ್ನಲ್ಲಿ ಕೊಡಗಿನ ಕತ್ತಿಗಳ ಚಿಹ್ನೆ ಹಾಕಲಾಗಿದ್ದು, ಅದನ್ನು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. 1946ರಲ್ಲಿ ಈ ವಿಭಾಗ ವನ್ನು “37ನೇ ಕೂರ್ಗ್‌ ಆ್ಯಂಡ್‌ – ಟ್ಯಾಂಕ್‌ ರೆಜಿಮೆಂಟ್‌ ಯುನಿಟ್‌’ ಎಂದು ಕರೆಯ ಲಾಯಿತು. ಇಂದು ಅದು “ರೆಜಿಮೆಂಟ್‌ ಆಫ್‌ ಆರ್ಟಿಲರಿ’ಯ ಭಾಗವಾಗಿದೆ.

ಹೆಮ್ಮೆಯ ಪಡೆ
ಇತಿಹಾಸ ಪ್ರಸಿದ್ಧ, “3ನೇ ಆಂಗ್ಲೋ ಮೈಸೂರು ಯುದ್ಧ’ದಲ್ಲಿ ಪಾಲ್ಗೊಂಡು, ಟಿಪ್ಪು ಸುಲ್ತಾನನ ವಿರುದ್ಧ ಬ್ರಿಟಿಷರ ಪರವಾಗಿ ಹೋರಾಡಿ ಯಶಗಳಿಸಿದ ಕೀರ್ತಿ “ಕೂರ್ಗ್‌ ರೆಜಿಮೆಂಟ್‌’ ಗೆ ಇದೆ. ಜತೆಗೆ ಮೊದಲ ಮಹಾಯುದ್ಧದ ಕಾಲದಲ್ಲಿ ಕಾಲಾಳು ಪಡೆಯ ಮೂಲಕ ಪ್ರಪಂಚದ ರಾಜಕೀಯ ಇತಿಹಾಸದ ನಿರ್ಣಾಯಕ ಯುದ್ಧದಲ್ಲಿ ಪಾಲ್ಗೊಂಡ ಹೆಮ್ಮೆ ಈ ಪಡೆಗಿದೆ.

ಪ್ರಸಿದ್ಧ ಸೇನಾ ನಾಯಕರನ್ನು ಕೊಟ್ಟ ನಾಡು (ಸೈನಿಕರ ಜಿಲ್ಲೆ)
ಕೊಡವರು ಶೌರ್ಯ ಬಹಳ ಮೆಚ್ಚತಕ್ಕದ್ದು. ಒಂದೊಮ್ಮೆ ಕೊಡಗನ್ನು “ಜನರಲ್‌ಗ‌ಳ ನೆಲ’ ಎನ್ನುತ್ತಿದ್ದು, ಇಲ್ಲಿನ ಜನರಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯರವರಂತವರ ಮುತ್ಸದ್ಧಿತನ ಇಂದಿಗೂ ಅಜರಾಮರ. ಅದರಂತೆ, ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ಶೌರ್ಯಚಕ್ರ ಪ್ರಶಸ್ತಿಗೆ ಭಾಜನರಾದ ಎಚ್‌.ಎನ್‌. ಮಹೇಶ್‌ ಕೂಡ ಇದೇ ನೆಲದವರಾಗಿದ್ದು “ನಿರ್ಭೀತಿ ಮತ್ತು ಅದಮ್ಯ ಇಚ್ಛಾಶಕ್ತಿಯುಳ್ಳ ಸೈನಿಕ’ ಎಂದು ಮೆಚ್ಚಿಗೆ ಪಡೆಯುವ ಮೂಲಕ ಕೊಡಗಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.

ಬ್ರಿಟಿಷರು ಕೂರ್ಗ್‌ ರೈಫಲ್ಸ್‌ ಅನ್ನು ಕಟ್ಟಿದರೆ, ಅಂದಿನ ಪ್ರಧಾನಿ ದೇವೇಗೌಡರು ಕೂರ್ಗ್‌ ರೆಜಿಮೆಂಟ್‌ನ್ನು ಮರು ರೂಪಿಸಿದರು. ಹೆಚ್ಚಿನ ಜನರನ್ನು ಸೇನೆಗಾಗಿ ಕಳುಹಿಸಿದ ಪ್ರತಿಷ್ಠೆ ಕೊಡಗಿನ ನೆಲಕ್ಕಿದೆ ಎಂಬುದು ಹೆಮ್ಮೆಯ ವಿಷಯ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಆದ್ಯತೆ ನೀಡಲು ಎಸ್.ಆರ್.ವಿಶ್ವನಾಥ್ ಸೂಚನೆ

ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಆದ್ಯತೆ ನೀಡಲು ಎಸ್.ಆರ್.ವಿಶ್ವನಾಥ್ ಸೂಚನೆ

000

ಅಬ್ಬರಿಸಿದ ಆಸೀಸ್ ಆಟಗಾರರು ; ಭಾರತಕ್ಕೆ 375 ರ ಬೃಹತ್ ಸವಾಲು

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

Only-women-passengers,-no-children-allowed-in-Mumbai-local-trains

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ: ಕಠಿಣ ಮಾರ್ಗಸೂಚಿ ಜಾರಿಗೆ !

ws-40

ಚಳಿಗಾಲಕ್ಕೆ ಟ್ರೆಂಡಿ ಬಟ್ಟೆ

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

ಬಿಎಸ್ ವೈ ಲಿಂಗಾಯತ ಬ್ರಹ್ಮಾಸ್ತ್ರಕ್ಕೆ ಹಿನ್ನಡೆ: ಆತುರದ ತೀರ್ಮಾನ ಮಾಡದಂತೆ ವರಿಷ್ಠರ ಸೂಚನೆ

ಬಿಎಸ್ ವೈ ಲಿಂಗಾಯತ ಬ್ರಹ್ಮಾಸ್ತ್ರಕ್ಕೆ ಹಿನ್ನಡೆ: ಆತುರದ ತೀರ್ಮಾನ ಮಾಡದಂತೆ ವರಿಷ್ಠರ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

page 2

ನೈವೇದ್ಯಕ್ಕೆ ಸಿಹಿ ಕಡುಬು ಮಾಡಿ ಲಕ್ಷ್ಮೀ ಪೂಜೆ

page 1

ತಮಸ್ಸನ್ನು ಹೋಗಲಾಡಿಸಿ ದೀಪವೆಂಬ ಬೆಳಕು ಮೂಡಲಿ

kanooru_heggadithi

ಕಾನೂರು ಹೆಗ್ಗಡತಿ ಸಿನೆಮಾದೊಳಗೊಂದು ನೋಟ

sunil chetri

ಭಾರತದ ಫ‌ುಟ್‌ಬಾಲ್‌ ದಂತಕಥೆ ಸುನಿಲ್‌ ಚೆಟ್ರಿ!

Paint

ಗ್ರಾಮೀಣ ಪ್ರತಿಭೆ ವಿಜಯದ ಸಾಧನೆ

MUST WATCH

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

ಹೊಸ ಸೇರ್ಪಡೆ

suchitra-tdy-5

ತೆರೆಮೇಲೆ ಮುತ್ತಪ್ಪ ರೈ ಬಯೋಪಿಕ್‌

ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಆದ್ಯತೆ ನೀಡಲು ಎಸ್.ಆರ್.ವಿಶ್ವನಾಥ್ ಸೂಚನೆ

ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಆದ್ಯತೆ ನೀಡಲು ಎಸ್.ಆರ್.ವಿಶ್ವನಾಥ್ ಸೂಚನೆ

000

ಅಬ್ಬರಿಸಿದ ಆಸೀಸ್ ಆಟಗಾರರು ; ಭಾರತಕ್ಕೆ 375 ರ ಬೃಹತ್ ಸವಾಲು

ಯುಗಪುರುಷನ ನೆನೆದ ಗಣೇಶ್‌

ಯುಗಪುರುಷನ ನೆನೆದ ಗಣೇಶ್‌

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.