UV Fusion: ಒಳಿತನ್ನು ಯೋಚಿಸಿದರೆ ಒಳಿತು


Team Udayavani, Mar 2, 2024, 4:05 PM IST

15-uv-fusion

ಛೇ ಮಾರಾಯ ನನ್ನ ಹಣೆಬರಹನೇ ಸರಿ ಇಲ್ಲ, ನಾನು ಏನೇ ಮಾಡಲು ಹೊರಟರೂ ಎಲ್ಲ ಅದರ ವಿರುದ್ಧವಾಗಿಯೇ ನಡೆಯುತ್ತಿದೆ. ನನ್ನ ಜೀವನವೇ ಸರಿ ಇಲ್ಲ. ಒಂದು ವೇಳೆ ನನ್ನ ಬಳಿ ಕೈತುಂಬಾ ದುಡ್ಡು, ಆಸ್ತಿಪಾಸ್ತಿ ಇರುತ್ತಿದ್ದರೆ ನಾನು ಈ ಸಮಾಜದಲ್ಲಿ ನಾಲ್ಕು ಜನರ ಮುಂದೆ ತಲೆ ಎತ್ತಿ ನಡೆಯಬಹುದಿತ್ತು, ಆದರೆ ಇದಾವುದೂ ನನಗೆ ಒಳಿದಿಲ್ಲ. ಈ ರೀತಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಖಡಿತವಾಗಿಯೂ ಯೋಚಿಸಿರುತ್ತಾರೆ.

ನಾನೂ ಕೂಡ ಹೀಗೆ ಹಲವು ಬಾರಿ ಯೋಚಿಸಿದ್ದೇನೆ. ನನಗೂ ಕೂಡ ಎಲ್ಲರ ಹಾಗೆ ತಂದೆ ತಾಯಿ ಇರಬೇಕಿತ್ತು. ನನಗೂ ಒಂದು ಕುಟುಂಬ ಇರಬೇಕು, ಆಗ ನಾನು ಕೂಡ ಎಲ್ಲ ಮಕ್ಕಳ ಹಾಗೆ ಖುಷಿಯಾಗಿರುತ್ತಿದ್ದೆ. ಒಂದು ಒಳ್ಳೆಯ ಕುಟುಂಬದಲ್ಲಿ ನಾನು ಬೆಳೆದಿದ್ದರೆ ಇಂದು ನಾನು ಏನನ್ನಾದರೂ ಸಾಧಿಸುತ್ತಿದ್ದೆ. ಒಳ್ಳೆಯ ಸಂಸ್ಕಾರ ನನಗೆ ಸಿಗಲಿಲ್ಲ, ಕುಟುಂಬದ ಪ್ರೀತಿ ಏನಂತ ನನಗೆ ತಿಳಿದಿಲಿಲ್ಲ, ನನ್ನ ಜೀವನದಲ್ಲೇ ಇವೆಲ್ಲ ಏಕೆ ಆಗುತ್ತಿವೆ? ಹೀಗೆ ನೂರಾರು ಯೋಚನೆ ವಿಚಾರಗಳು ನನ್ನಲ್ಲೂ ಸದಾ ಬರುತ್ತವೆ.

ಅದೊಂದು ದಿನ ಸಂಜೆ ನಾನು ಮಹಾಭಾರತದ ಕೆಲವೊಂದು ಸನ್ನಿವೇಶಗಳನ್ನು ಓದುತ್ತಿದ್ದೆ. ಅದರಲ್ಲಿ ಕುರುಕ್ಷೇತ್ರದ ಆರಂಭಕ್ಕೂ ಮುನ್ನ ಶ್ರೀ ಕೃಷ್ಣನು ಕರ್ಣನ ಮನ ವೊಲಿಸಲು ಅನುಸರಿಸಿದ ಕಪಟತನವನ್ನು ಕಾಣಬಹುದು. ಆದರೆ ಧರ್ಮಕ್ಕಾಗಿ ಮಾಡುವ ಪ್ರತಿಯೊಂದು ಕಪಟ ಹಾಗೂ ಹೇಳುವ ಸುಳ್ಳು ಕೂಡ ಧರ್ಮವಾಗಿರುತ್ತದೆ.

ಆದರೆ ಶ್ರೀ ಕೃಷ್ಣ ಕರ್ಣನನ್ನು ಮನವೊಲಿಸಲು ವಿಫ‌ಲನಾಗುತ್ತಾನೆ. ಆದರೆ ಕರ್ಣನಲ್ಲಿ ಶ್ರೀ ಕೃಷ್ಣನ ಬಗ್ಗೆ ಅಪಾರವಾದ ಗೌರವ ಇತ್ತು. ಕೃಷ್ಣನ ಮೂಲಕ ಅದಾಗಲೇ ಕರ್ಣ ತನ್ನ ಜನ್ಮ ರಹಸ್ಯವನ್ನು ತಿಳಿದುಕೊಂಡಿದ್ದ. ದಿನಗಳು ಉರುಳುತ್ತಾ ಹೋದವು ಕುರುಕ್ಷೇತ್ರ ಯುದ್ಧ ಆರಂಭವಾಯಿತು. ದಿನೇ ದಿನೇ ಕೌರವ ಬಣ ದುರ್ಬಲವಾಗುತ್ತಾ ಹೋಯಿತು.

ಅದು ಕರ್ಣಾರ್ಜುನರ ನಡುವೆ ನಡೆಯುತ್ತಿದ್ದ ಸಮರ. ಇಬ್ಬರೂ ರಣರಂಗದಲ್ಲಿ ವೀರಾವೇಶದಿಂದ ಹೋರಾಡುತ್ತಿರುತ್ತಾರೆ. ಅವರಿಬ್ಬರ ಬಿಲ್ಲುಗಳ ಝೇಂಕಾರಕ್ಕೆ ಇಡೀ ಕುರುಕ್ಷೇತ್ರವೇ ನಡುಗುತ್ತದೆ. ಆದರೆ ಕೊನೆಗೆ ಕೃಷ್ಣನ ಸಹಾಯದಿಂದ ಅರ್ಜುನ ವಿಜಯ ಸಾಧಿಸುತ್ತಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರ್ಣನು ತನ್ನ ಕೊನೆಯ ಗಳಿಗೆಯಲ್ಲಿ ಶ್ರೀ ಕೃಷ್ಣನನ್ನು ತನ್ನತ್ತ ಕರೆದು ಕೇಳುತ್ತಾನೆ ಹೇ ವಾಸುದೇವ ಇದು ನಿನಗೆ ಸರಿ ಅನ್ನಿಸುತ್ತದೆಯೇ? ನಾನು ಜನಿಸಿದ್ದು ಒಬ್ಬ ಕ್ಷತ್ರಿಯನಾಗಿ ರಾಜವಂಶದಲ್ಲಿ ಆದರೆ ಹುಟ್ಟಿದ ಮರುಕ್ಷಣವೇ ಕುಂತಿಮಾತೆ ನನ್ನನ್ನು ಗಂಗೆಗೆ ಅರ್ಪಿಸಿಬಿಟ್ಟಳು. ಅನಂತರ ನಾನು ರಾಧೆ ಮಾತೆಗೆ ಸಿಕ್ಕೇ ಅವಳ ಪಾಲನೆಯಲ್ಲಿ ನಾನು ಬೆಳೆದೆ, ಪಾಂಡು ಪುತ್ರದಲ್ಲಿ ನಾನು ಹಿರಿಯವನಾದರೂ ಕೂಡ ಒಬ್ಬ ಸೂತಪುತ್ರನಾಗಿ ರಥವನ್ನು ಓಡಿಸುವವನಾದೆ.

ಅದು ಸಾಲದು ಎಂಬಂತೆ ನನ್ನ ಗುರು ಪರಶುರಾಮರಿಂದಲೇ ನಾನು ಶಾಪಗ್ರಸ್ತನಾದೆ. ವಿಶ್ವದ ಶ್ರೇಷ್ಠ ಅನು ಧನು ಧನುರ್ಧಾರಿಯಾಗುವ ಎಲ್ಲ ಅರ್ಹತೆಗಳು ನನ್ನಲ್ಲಿ ಇದ್ದರೂ ಯುದ್ಧದ ಸಮಯದಲ್ಲಿ ಭೂತಾಯಿಯು ನನ್ನ ಜತೆ ನಿಲ್ಲಲಿಲ್ಲ. ಶ್ರೇಷ್ಠತೆಯನ್ನು ಗಿಟ್ಟಿಸಿಕೊಡುವ ಎಲ್ಲದರಲ್ಲಿಯೂ ನಾನು ಅಗ್ರಗಣ್ಯ, ಯುದ್ಧಕಾಲದಲ್ಲಿ ನಾನು ಯಾವುದೇ ಶಸ್ತ್ರವನ್ನು ಸಹೋದರರ ವಿರುದ್ಧ ಬಳಸುವಂತಿಲ್ಲ ಎಂದು ಸ್ವಂತ ತಾಯಿಯಿಂದಲೇ ವಚನವನ್ನು ಪಡೆದುಕೊಂಡೆ.

ನನ್ನ ಕರ್ಣ-ಕುಂಡಲಗಳನ್ನು ಕೂಡ ದಾನವಾಗಿ ಇಂದ್ರದೇವ ಪಡೆದುಕೊಂಡ. ಆದರೆ ನೀನು ಸಾಕ್ಷಾತ್‌ ವಿಷ್ಣುವಿನ ಅವತಾರ ಎಲ್ಲವನ್ನು ಬಲ್ಲ, ನೀನು ಅರ್ಜುನನ ಜತೆಗೂಡಿ ಕಪಟದಿಂದ ನನ್ನನ್ನು ಸೋಲಿಸಿದ್ಧಿ ಇದು ನ್ಯಾಯವೇ?, ಇದೆÇÉಾ ನನ್ನ ಜೀವನದಲ್ಲಿ ಏಕಾಯಿತು?, ನಾನು ಏನು ತಪ್ಪು ಮಾಡಿದ್ದೆ ವಾಸುದೇವ? ಎಂದು ಕೇಳಿದನು. ಆಗ ಕೃಷ್ಣನು ಕರ್ಣನಿಗೆ ನನ್ನ ಜೀವನವೂ ಕೂಡ ನಿನ್ನ ಹಾಗೆ ಇತ್ತು.

ನಾನು ಹುಟ್ಟಿದ್ದು ಸೆರೆವಾಸದಲ್ಲಿ, ಹುಟ್ಟಿದ ತತ್‌ಕ್ಷಣವೇ ಸಾವು ನನ್ನ ಬೆನ್ನು ಹತ್ತಿತ್ತು. ಹೆತ್ತವರಿಂದ ನಾನು ಬೇರ್ಪಡುವಂತಾಯಿತು. ಹಾಗೂ ತಾಯಿ ಯಶೋಧರೆಯ ಪಾಲನೆಯಲ್ಲಿ ಬೆಳೆಯಬೇಕಾಯಿತು. ಅನೇಕ ಅಸುರರು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಕ್ಷತ್ರಿಯ ವಂಶದಲ್ಲಿ ನಾನು ಜನಿಸಿದ್ದರೂ ಹಳ್ಳಿಯ ಗೋ-ಬಾಲಕರೊಂದಿಗೆ ಹಸುವನ್ನು ಮೇಯಿಸಿಕೊಂಡು ದೊಡ್ಡವನಾದೆ. ರಾಜವಂಶವನಾದರೂ ನನಗೆ ಶಿಕ್ಷಣ ದೊರಕಲಿಲ್ಲ.

ಕೊನೆಗೆ ನನ್ನ ಪ್ರಿಯಸಖೀ ರಾಧೆಯಿಂದಲೇ ನಾನು ದೂರವಾಗುವಂತಾಯಿತು. ಆದರೆ ನಾನು ನಿನ್ನಂತೆ ಎಂದಿಗೂ ನನ್ನ ಜೀವನದ ಬಗ್ಗೆ ಬೇಸರವನ್ನು ಮಾಡಿಕೊಂಡಿಲ್ಲ. ಕರ್ಣ ಇಂದು ನಿನ್ನ ಈ ಸ್ಥಿತಿಗೆ ನೀನೇ ಕಾರಣವಾಗಿರುವೆ. ನನ್ನ ಹುಟ್ಟು ಹಾಗೂ ಜೀವನ ದರಿದ್ರತೆಯಿಂದ ಕೂಡಿದ್ದರೂ ನಾನು ಧರ್ಮದ ದಾರಿಯಲ್ಲಿ ಪಾಂಡವರ ಸಹಾಯಕ್ಕೆ ನಿಂತೆ. ಆದರೆ ನೀನು ಅಧರ್ಮಿಗಳಾದ ಕೌರವರ ಪರವಾಗಿ ನಿಂತು ಅಧರ್ಮದ ಸಾತು ಕೊಟ್ಟೆ ಎಂದನು.

ಮಹಾಭಾರತದ ಈ ಕಥಾಪ್ರಸಂಗ ಓದಿದ ಬಳಿಕ ನನ್ನ ಆಲೋಚನಾ ದಿಸೆಯೇ ಬದಲಾಯಿತು. ಜೀವನದಲ್ಲಿ ಎಷ್ಟೇ ಕೆಟ್ಟ ಬಂದರೂ ನಾವು ಎಂದಿಗೂ ಅಧರ್ಮದ ಹಾದಿಯನ್ನು ಹಿಡಿಯಬಾರದು. ಹಾಗೂ ದುಡುಕಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಕೊರಗಬಾರದು. ತಾಳಿದವನು ಬಾಳಿಯಾನು ಎನ್ನುವಂತೆ ತಾಳ್ಮೆಯಿಂದ ನಮ್ಮ ಗುರಿಯತ್ತ ಸಾಗಬೇಕು. ನಮಗೂ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಪ್ರಾಮಾಣಿಕವಾಗಿ ನಮ್ಮ ಕಾರ್ಯದಲ್ಲಿ ಪ್ರಯತ್ನಮಗ್ನರಾಗಬೇಕು ಅಷ್ಟೇ.

-ಕಾರ್ತಿಕ ಹಳಿಜೋಳ

ಎಂ.ಎಂ. ಕಾಲೇಜು ಶಿರಸಿ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.