ವೃಕ್ಷ ಮಾತೆಯ ಕಡೆ ನಮ್ಮ ಪಯಣ


Team Udayavani, Jul 4, 2021, 11:00 AM IST

ವೃಕ್ಷ ಮಾತೆಯ ಕಡೆ ನಮ್ಮ ಪಯಣ

ಶ್ರೀನಿವಾಸ್‌ ಕಾಲೇಜಿನ ಬಿ.ಎಡ್‌ ವಿದ್ಯಾರ್ಥಿಗಳಾದ ನಾವೆಲ್ಲ ಮುಂಜಾನೆ ಆರು ಗಂಟೆಗೆ  ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಕಾಣಿಕೆಯನ್ನು ಹಾಕಿ ಬಸ್‌ನಲ್ಲಿ  ಪ್ರಯಾಣವನ್ನು  ಆರಂಭಿಸಿದೆವು ನಾವು ಒಟ್ಟು ಎಪ್ಪತ್ತೆ„ದು ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಪ್ರಯಾಣ ಮುಂದುವರಿಸಿದ್ದೆವು.

ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿರುವ  ಪದ್ಮಶ್ರೀ ಪ್ರಶಸ್ತಿ ಪಡೆದ  ತುಳಸಿ ಗೌಡರ ಊರಿಗೆ ಪ್ರವಾಸ ಮತ್ತು ಸಂದರ್ಶನ ಎರಡನ್ನು ಹಮ್ಮಿಕೊಂಡೆವು.

ಅಲ್ಲಿಗೆ ನಾವು ಕಾಡು ಗುಡ್ಡ ಎನ್ನದೆ ಚಾರಣ ಮಾಡಲು ಆರಂಭಿಸಿದೆವು. ಇಳಿಸಂಜೆ ಹೊತ್ತಿನಲ್ಲಿ ಮಂಗಳೂರಿನಿಂದ ಪಯಣ ಆರಂಭಿಸಿದೆವು.

ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಅಂಕೋಲಾ ಹೊನ್ನಳ್ಳಿಯ ತುಳಸಿ ಗೌಡರು ಈವರೆಗೆ ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ಎಂದು ಅವರಿಗೆ ಗೊತ್ತಿರಲಿಲ್ಲ ತನ್ನ ಕಾಯಕ ಎಂಬಂತೆ ಅವರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಪ್ರಶಸ್ತಿ ಬಂದಾಗ ತಮ್ಮ ಬಗ್ಗೆ ತಾವೇ ಅಚ್ಚರಿ ಪಡುವಂತಾಯಿತು. ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ದಾಟಿದೆ ಎಂಬುದು ಮುಖ್ಯವಲ್ಲ ನೆಟ್ಟ ಗಿಡಗಳ ಲಾಲನೆ, ಪೋಷಣೆಗೆ ಎಷ್ಟು ಕಾಳಜಿ ವಹಿಸಿದ್ದೇನೆ ಎನ್ನುವುದು ಮುಖ್ಯ ಎಂದು ಅವರು ತಮ್ಮವರೊಡನೆ ಹೇಳುತ್ತಿರುತ್ತಾರೆ.

“ವಿಶ್ವ ಪರಿಸರ ದಿನಾಚರಣೆಯಂದು ಕೋಟಿ ವೃಕ್ಷ ಆಂದೋಲನ’ ಎಂಬ ಸುದ್ದಿ ಜೋರಾಗಿ ಕೇಳುತ್ತೇವೆ. ಆದರೆ ನಿಜಕ್ಕೂ ಕೋಟಿ ವೃಕ್ಷಗಳು ಬೆಳೆದವೇ? ಫ್ಯಾಷನ್‌ ಪರಿಸರವಾದಿಗಳಿಗೆ ತುಳಸಿ ಗೌಡರ ಈ ಮಾತು ಸಂದೇಶವೂ ಹೌದು ಎಚ್ಚರಿಕೆಯೂ ಹೌದು

ತುಳಸಿ ಗೌಡರು ಎರಡು ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಹೆಣ್ಣಿನ ಜವಾಬ್ದಾರಿ ಎಂದರೆ ಹಿಂದಿನ ಕಾಲದಲ್ಲಿ ಕಷ್ಟವೆಂದೇ ನಂಬಿಕೆ. ಅಲ್ಲದೆ ತುಳಸಿ ಅವರದ್ದು ಬಾಲ್ಯ ವಿವಾಹ ಆದರೆ ಗಂಡ ಗೋವಿಂದಗೌಡರು ಬಹುಬೇಗನೆ ತೀರಿಕೊಂಡಾಗ ತುಳಸಿ ಮಗನನ್ನು ಸಾಕುವ ಜವಾಬ್ದಾರಿಯನ್ನು ಹೊರಬೇಕಾಯಿತು.

ಅನಂತರ ಇವರು ನೋವು ತುಂಬಿದ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಪ್ರಕೃತಿಯ ಮಡಿಲಿಗೆ ಬಂದರು. ಇಲ್ಲಿ ಇವರು ಪರಿಸರದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದು ಯಾವ ಸಂದರ್ಭದಲ್ಲಿ ಯಾವ ಬೀಜ ಬಿತ್ತಿ ಬೆಳೆ ಬೆಳೆಯಬೇಕು? ಯಾವಾಗ ನಾಟಿಗೆ ಸೂಕ್ತ? ಎಂಬುದನ್ನು ಕಲಿಯುತ್ತಾ ವರ್ಷಕ್ಕೆ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಈ ಭೂಮಂಡಲದ ಹಸುರು ಹೊದಿಕೆಯನ್ನು ವಿಸ್ತಾರಗೊಳಿಸುತ್ತ ಬರುತ್ತಿದ್ದಾರೆ. ಇವರು ಹಲವಾರು ವಿಧದ ಗಿಡಗಳನ್ನು ನೆಟ್ಟು ಮಕ್ಕಳಂತೆ ಬೆಳೆಸಿ ಪೋಷಣೆ ಮಾಡಿದ್ದಾರೆ. ಮರಗಿಡಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಾ ಮುಗ್ಧರಾಗಿದ್ದಾರೆ.

ಗಿಡ ಮರಗಳೊಂದಿಗೆ ಸದಾ ಮಾತಾಡುವ ಅವುಗಳ ರೋದನೆ, ವೇದನೆಗೆ ಸ್ಪಂದಿಸುವ ಇವರು ಬಡತನದಲ್ಲಿ ಇದ್ದರು ತಾನೂ ನೆಟ್ಟ ಲಕ್ಷಾಂತರ ಗಿಡ  ಮರಗಳ ನೆಮ್ಮದಿಯನ್ನು ಕಾಣುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಬಂದಿರುವುದರ ಬಗ್ಗೆ ಇವರಲ್ಲಿ ಕೇಳಿದಾಗ ಏನೋ ಒಂದಿಷ್ಟು ಮಾಡಿದ್ದೇನೆ. ಇನ್ನೂ ಒಂದಷ್ಟು ಮಾಡಲು ಇದೆ. ಪ್ರಕೃತಿ ಸೇವೆಗೆ ಅಂತ್ಯವಿಲ್ಲ ಅದು ನಿರಂತರ. ಪದ್ಮಶ್ರೀ ಪ್ರಶಸ್ತಿಯ ಸಂಭ್ರಮಕ್ಕಿಂತ ನಾಡಿನ ಎಲ್ಲರೂ ಸ್ವ ಇಚ್ಛೆಯಿಂದ ಯಾರೆಲ್ಲ ಒತ್ತಾಯಕ್ಕೂ ಕಾಯದೆ ನಮ್ಮ ಭವಿಷ್ಯದ ಭದ್ರತೆಯ ಉದ್ದೇಶ ಇಟ್ಟುಕೊಂಡು ಗಿಡ ನೆಟ್ಟು ಪೋಷಿಸಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇಲ್ಲ ಎನ್ನುತ್ತಾರೆ.

 

ಅರುಣ್‌ ಕುಮಾರ್‌

ಶ್ರೀನಿವಾಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.