ಪುಟ್ಟ ಅನ್ವೇಷಕರ ವಾಕಿ ಮೊಬೈಲ್‌ ಚಾರ್ಜರ್‌


Team Udayavani, Aug 26, 2020, 6:37 PM IST

sss

ಸಾಮಾನ್ಯವಾಗಿ ರನ್ನಿಂಗ್‌ ಶ್ಯೂ ವ್ಯಾಯಾಮ, ಓಟ, ಕ್ರೀಡೆಯ ಸಂದರ್ಭದಲ್ಲಿ ಹೀಗೆ ಬಹು ಉಪಯುಕ್ತವಾಗಿ ಬಳಕೆಯಾಗುತ್ತಿದೆ.

ಆದರೆ ಸ್ನೇಹಿತರಿಬ್ಬರ ಅನ್ವೇಷಣೆಯ ಪರಿಣಾಮ ರನ್ನಿಂಗ್‌ ಶ್ಯೂನಲ್ಲೂ ಮೊಬೈಲ್‌ ಚಾರ್ಜಿಂಗ್‌ ಅಳವಡಿಸಲಾಗಿದೆ.

ದೇಹದ ಫೀಟ್‌ನೆಸ್‌ ಜತೆ ವಿದ್ಯುತ್‌ ಮಿತವೇಯವು ಸಾಧ್ಯವಾಗಿದ್ದು ಎಲ್ಲೆಡೆ ಈ ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಷ್ಟಕ್ಕೂ ಇಂತಹದೊಂದು ಯೋಚನೆ ಹುಟ್ಟಿಕೊಂಡಿದ್ದು ಪುಟ್ಟ ಅನ್ವೇಷಕರಲ್ಲಿ.

ದಿಲ್ಲಿಯ ಮೌಂಟ್‌ ಕಾರ್ಮೆಲ್‌ ಸ್ಕೂಲ್‌ನ ವಿದ್ಯಾರ್ಥಿಗಳಾದ ಆನಂದ್‌ ಗಂಗಾಧರ್‌ ಮತ್ತು ಮೊಹಕ್‌ ಭಲ್ಲ ಈ ಯೋಜನೆಯ ರುವಾರಿಗಳು. ಏನಾದರೂ ಹೊಸತನ್ನು ಸಾಧಿಸಬೇಕೆನ್ನುವ ಈ ಹಂಬಲವೇ ಇವರಿಗೆ ಪ್ರೇರಣೆ.

ಯಾವುದೇ ಸಾಧನೆಯಾದರೂ ಏಳು ಬೀಳುಗಳಿರುವುದು ಸಹಜ. ಅದರಂತೆ ಇವರು ಈ ಮಾಡಲ್‌ ಅನ್ನು ಪ್ರಯತ್ನಿಸುವ ಮುನ್ನ ಹಲವಾರು ಬಾರಿ ಸೋತರೂ ಸಹ ಈ ಸಂಶೋಧನೆ ಜತೆ ಇನ್ನೂ ಮೂರು ಮಾಡಲ್‌ ಸಿದ್ಧಪಡಿಸಿದ್ದರು. 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ವಿಜ್ಞಾನದ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಹ ಸಂದರ್ಭದಲ್ಲಿ ಈ ಪ್ರಯೋಗ ಮಾಡಿದ್ದರು.

ವಾಕಿ ಮೊಬಿ ಚಾರ್ಜರ್‌
ಈ ಇಬ್ಬರು ಸ್ನೇಹಿತರು ತಮ್ಮ ಸಂಶೋಧನೆಗೆ ಇಟ್ಟ ಹೆಸರೇ ವಾಕಿ ಮೊಬಿ ಚಾರ್ಜರ್‌. ಹೆಸರೇ ಸೂಚಿಸುವಂತೆ ನಾವು ನಡೆಯುವ ಶ್ಯೂ ಮೂಲಕ ಪೊರ್ಟೆಬಲ್‌ ಚಾರ್ಜ್‌ ಮಾಡುವ ವ್ಯವಸ್ಥೆ ಇದಾಗಿದೆ. ರೈಲ್ವೇ ಇಲಾಖೆ ಪ್ರಯಾಣಿಕರ ಚಲನೆಯ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲು ಮುಂದಾಗಿರುವ ಲೇಖನಗಳ ಓದು ಇವರ ಈ ಯೋಜನೆಗೆ ಪ್ರಮುಖ ಪ್ರೇರಣೆಯಾಗಿದೆ.

ಇದರ ಮತ್ತೊಂದು ವಿಶೇಷತೆ ಎಂದರೆ ಚಲನೆಯ ಶಕ್ತಿಯನ್ನು ಬಳಸಿ ಸಾಮಾನ್ಯ ಚಾರ್ಜರ್‌ನ ಚಾರ್ಜಿಂಗ್‌ಗಿಂತಲೂ ವೇಗವಾಗಿ ಚಾರ್ಜ್‌ ಆಗುವ ಬ್ಯಾಟರಿ ಸಾಮರ್ಥ್ಯವಿದೆ. ಇದನ್ನು ಡೈನಮೋ ಮತ್ತು ಬಫ‌ರ್‌ ಮೇಷಿನ್‌ ಕಾರ್ಯವಿಧಾನದಿಂದ ಆವಿಷ್ಕರಿಸಿದ್ದು, ಇದರ ಒಟ್ಟು ಉತ್ಪಾದನಾ ವೆಚ್ಚ 2000 ರೂ. ಆಗಿರುತ್ತದೆ. ಸುತ್ತಾಡಲು, ಓಡಲು ಹೋದ ಬಳಿಕ ಪೋರ್ಟೆಬಲ್‌ ಚಾರ್ಜರ್‌ ಮೂಲಕ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ.

ಇದನ್ನು ಮತ್ತಷ್ಟು ವಿನೂತನವಾಗಿ ಪ್ರಸ್ತುತ ಪಡಿಸಬೇಕೆಂಬ ಆಸೆ ಇಬ್ಬರಲ್ಲೂ ಇದ್ದರೂ 10ನೇ ತರಗತಿ ವ್ಯಾಸಾಂಗಮಾಡುತ್ತಿದ್ದ ಕಾರಣ ಪೂರ್ಣ ಪ್ರಮಾಣದಲ್ಲಿ ಈ ವಿಚಾರದ ಕಡೆ ಅವರಿಗೆ ಗಮನಹರಿಸಲು ಸಾಧ್ಯವಾಗಿಲ್ಲವಂತೆ. ಮುಂದಿನ ವೃತ್ತಿ ಜೀವನದಲ್ಲಿ ಇದೊಂದು ಪ್ರೇರಣೆಯಾಗಿ ದೊರೆತೀತೆಂಬ ಬರವಸೆಯನ್ನು ಇವರು ಹೊಂದಿದ್ದಾರೆ. ಈ ಯೋಜನೆಗೆ ಶಿಕ್ಷಣ ವೃಂದ ಮತ್ತು ಪೋಷಕರು ಸಾಕಷ್ಟು ಸಹಕಾರವನ್ನು ನೀಡಿದ್ದಾರೆ.

ಭರವಸೆಯ ಬೆಳಕು
ಮುಂದಿನ ದಿನದಲ್ಲಿ ವಾಕಿ ಮೊಬೈಲ್‌ ಚಾರ್ಜರ್‌ ಅನ್ನು ವೈರ್‌ಲೆಸ್‌ ಮತ್ತು ಪವರ್‌ಬ್ಯಾಂಕ್‌ ಮಾದರಿಯಲ್ಲಿ ಪ್ರಸ್ತುತ ಪಡಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯೋಗಕ್ಕೆ ಬೆಂಬಲ ನೀಡುವುದಕ್ಕಿಂತ ಮನೋಸ್ಥೈರ್ಯ ಕುಗ್ಗಿಸುವವರೆ ಹೆಚ್ಚಾಗಿದ್ದರಂತೆ. ಪ್ರತಿಯೊಂದನ್ನು ಶಿಕ್ಷಣದಿಂದ ಪಡೆಯಲು ಸಾಧ್ಯವಿಲ್ಲ. ಯಾವುದೇ ಗುರಿ ಇದ್ದರೆ ಅದಕ್ಕೆ ಸಿದ್ಧತೆ, ತ್ಯಾಗ, ಪರಿಶ್ರಮದಂತಹ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು. ಸ್ನೇಹಿತರೊಂದಿಗಿನ ಕ್ಷಣಿಕ ಖುಷಿ ಮರೆಯಾಯಿತೆಂಬ ಬೇಸರವಿರುವುದು ಸಹಜ. ಅದರಂತೆ ಅದೇ ಕಾಲಾವಧಿ ಉತ್ತಮ ಸಂಶೋಧನೆಗೂ ಕಾರಣವಾಗಿದೆ ಎಂಬ ಹೆಮ್ಮೆ ಸ್ನೇಹಿತರಿಬ್ಬರಿಗೂ ಇದೆ.

ಪ್ರಸ್ತುತ ಇವರು ದಿಲ್ಲಿಯ ಭಾರತಿ ವಿದ್ಯಾಪೀಠ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಮತ್ತು ವಿಐಟಿಯಲ್ಲಿ ತಮ್ಮ ಬಿ.ಟೆಕ್‌ ಮಾಡುತ್ತಿದ್ದಾರೆ. ಈ ಸಂಶೋಧನೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಪ್ರೇರಣೆಯಾಗಿದೆ ಎಂದರೂ ತಪ್ಪಾಗಲಾರದು.

 ರಾಧಿಕಾ, ಕುಂದಾಪುರ 

 

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.