Udayavni Special

ವಿಶ್ವ ಸಂಸ್ಕೃತ ದಿನ: ಸಂಸ್ಕೃತದಲ್ಲಿಹುದು ಸಂಸ್ಕೃತಿ


Team Udayavani, Aug 3, 2020, 11:36 AM IST

sanskrith day

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಹರಿದು ಬರುತ್ತದೆ.

ಅವುಗಳಲ್ಲೊಂದು ವಿಶ್ವ ಸಂಸ್ಕೃತ ದಿನ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ.

ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ.

ಸರ್ವಸ್ವವನ್ನೂ ತನ್ನಲ್ಲಿ ಇಟ್ಟುಕೊಂಡ ವಿಶ್ವಕೋಶ. ಇದು  ಎಲ್ಲ ಭಾಷೆಗಳ ಜನನಿ. ಸಂಸ್ಕೃತವು ವಿಶಿಷ್ಟವಾದ, ಸುಲಲಿತವಾದ ಭಾಷೆ.

ವೇದ-ವೇದಾಂಗ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇವುಗಳಿರುವುದು ಸಂಸ್ಕೃತದಲ್ಲಿ.

ಅರ್ಥಶಾಸ್ತ್ರ, ವೇದಗಣಿತ, ನೀತಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ನ್ಯಾಯ, ಧರ್ಮ, ರಾಜನೀತಿ, ವ್ಯವಹಾರ, ನಾಟ್ಯ, ಕಲೆ ಇವುಗಳ ತವರೂರು ಸಂಸ್ಕೃತ. ಯಾವುದೇ ವಿಷಯವನ್ನಾಗಲಿ ಆಳವಾಗಿ ತಿಳಿಯಬೇಕೆಂದರೆ ಅದಕ್ಕೆ  ಸಂಸ್ಕೃತ ಬೇಕು.

‘ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು  ಸಂಸ್ಕೃತಿ’. ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಮ್ಮ ಭಾರತೀಯ ಸಂಸ್ಕೃತಿ ಅವಿಚ್ಛಿನ್ನವಾಗಿ, ಅವ್ಯಾಹತವಾಗಿ ಹರಿದು ಬರಲು ಕಾರಣ ಸಂಸ್ಕೃತವೇ. ಒಬ್ಬ ವ್ಯಕ್ತಿ ಮಾನಸಿಕವಾಗಿ, ಬೌದ್ಧಿಕವಾಗಿ, ನಿಷ್ಠಾವಂತನಾಗಿ, ಸರ್ವಗುಣ ಸಂಪನ್ನನಾಗಲು ಸಂಸ್ಕೃತ ಬೇಕು. ಯಾಕೆಂದರೆ ಸಂಸ್ಕೃತದಲ್ಲಿ  ಸಂಸ್ಕೃತಿ ಅಡಗಿದೆ. ಮಣ್ಣಿನ ಮುದ್ದೆಯಂತಿರುವ ಮಾನವನನ್ನು ಉತ್ತಮ ಮೂರ್ತಿಯನ್ನಾಗಿ ರೂಪಿಸುವ ಸಾಮರ್ಥ್ಯ ಸಂಸ್ಕೃತಕ್ಕಿದೆ. ಸಂಸ್ಕೃತ ಶ್ಲೋಕಗಳ ಓದುವಿಕೆಯಿಂದ ಮೆದುಳು ಚುರುಕಾಗುತ್ತದೆ ಎಂದು ಇತ್ತೀಚಿನ ವರದಿ ಹೇಳಿದೆ. ಇದು ಕಂಪ್ಯೂಟರ್ ಗೆ  ಸೂಕ್ತವಾಗುವ ಭಾಷೆಯೂ ಹೌದು.

ಸಂಸ್ಕೃತ ಮರೆಯಾಗುತ್ತಿರುವ ಈ ದಿನಗಳಲ್ಲಿ, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ‘ನೂತನ ಶಿಕ್ಷಣ ನೀತಿ’ ಯಲ್ಲಿ ಸಂಸ್ಕೃತ ಭಾಷೆಗೆ ಮಹತ್ವ  ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಕೃತವನ್ನು ಆರಿಸಿಕೊಂಡ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಾಗಿ ಓದದೆ, ಸಂಸ್ಕೃತ ಕಲಿಯುವಲ್ಲಿ ಮನಸ್ಸು ಮಾಡಬೇಕು. ವಿದೇಶೀಯರು ಸಂಸ್ಕೃತ ಕಲಿಯುವತ್ತ ಮುಖ ಮಾಡಿದ್ದು, ಸಂಸ್ಕೃತವೆಂದರೆ ಮೂಗು ಮುರಿಯುವ ಭಾರತೀಯರಿಗೆ ಆದರ್ಶವಾಗಬೇಕು. ಸಂಸ್ಕೃತವೆಂದರೆ ‘ಕಬ್ಬಿಣದ ಕಡಲೆ’ ಎಂಬ ಭಾವನೆಯನ್ನು ತೊಡೆದು ಹಾಕಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಕೃತದ ಕುರಿತು ಶಿಕ್ಷಣ, ಶಿಬಿರ, ಲೇಖನ, ನುಡಿ, ವ್ಯಾವಹಾರಿಕ ಸಂಸ್ಕೃತ ಹಾಗೂ ಅದೆಷ್ಟೋ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು, ಸಂಸ್ಕೃತವನ್ನು ಬೆಳೆಸುವಲ್ಲಿ ಹೆಜ್ಜೆ ಹಾಕೋಣ. ಸಂಸ್ಕೃತವನ್ನು ಈ ದಿನಕ್ಕಷ್ಟೇ ಮೀಸಲಾಗಿರಿಸದೆ, ಎಲ್ಲ  ದಿನವನ್ನು  ಸಂಸ್ಕೃತಮಯವಾಗಿಸೋಣ.

ಅರುಂಧತಿ ಎ.ಎಂಕೆ, ಸಾಲಿಗ್ರಾಮ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

stomch

ಹುಟ್ಟುವ ಮಗುವಿನ ಲಿಂಗ ತಿಳಿಯಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ 5 ಹೆಣ್ಣುಮಕ್ಕಳ ತಂದೆ !

ವಿಜಯಪುರ ಮಹಿಳಾ ವಿ.ವಿ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ವಿಜಯಪುರ ಮಹಿಳಾ ವಿ.ವಿ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

rajuyasabe

ತೀವ್ರ ವಿರೋಧದ ನಡುವೆ ಕೃಷಿಗೆ ಸಂಬಂಧಿಸಿದ 2 ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ

masnglore

ವರುಣನ ಆರ್ಭಟ: ಮಂಗಳೂರು ವಿ.ವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bil hast

ಹೀಗೊಂದು ಹಾವು ಪ್ರೇಮಿ

Horse

ಅಬ್ಬಾ ಡೇಂಜರ್‌ ಝೋನ್‌ ದಾಟಿದೆವು! ವಿನಾಶದ ಅಂಚಿನಿಂದ ಪಾರಾದ 73 ಜೀವಿಗಳ ನಿಟ್ಟುಸಿರು

Day to day

ಭಾರತದ ಯುವಕನಿಗೆ ವಿಶ್ವದ ಅತೀ ವೇಗದ ಕ್ಯಾಲುಕ್ಯುಲೇಟರ್‌ ಎಂಬ ಹೆಗ್ಗಳಿಕೆ

Gorkha_Regiments_Soldiers

ಶತ್ರುಗಳ ಎದೆ ನಡುಗಿಸುವ ಗೂರ್ಖಾ ರೈಫ‌ಲ್ಸ್‌ ಪಡೆ

FMC

ಭಾರತೀಯ ಸೇನೆಯ ಕಲಿ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರ್ಯಪ್ಪ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಯೂರಿಯಾ ಕೃತಕ ಅಭಾವ: ಆಕ್ರೋಶ

ಯೂರಿಯಾ ಕೃತಕ ಅಭಾವ: ಆಕ್ರೋಶ

ಅಂಬಲಪಾಡಿ ಗ್ರಾಮಾಂತರ ಪ್ರದೇಶದಲ್ಲಿ ನೆರೆ ಹಾವಳಿ: ಯುವಕರಿಂದ ಸುರಕ್ಷಾ ಕ್ರಮ

ಅಂಬಲಪಾಡಿ ಗ್ರಾಮಾಂತರ ಪ್ರದೇಶದಲ್ಲಿ ನೆರೆ ಹಾವಳಿ: ಯುವಕರಿಂದ ಸುರಕ್ಷಾ ಕ್ರಮ

ಹೈಬ್ರೀಡ್‌ ತಳಿಯಿಂದ ಹೆಚ್ಚು ಇಳುವರಿ

ಹೈಬ್ರೀಡ್‌ ತಳಿಯಿಂದ ಹೆಚ್ಚು ಇಳುವರಿ

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಜಿಲ್ಲೆಯಲ್ಲಿ 412 ಸೋಂಕಿತರು ಗುಣಮುಖ

ಜಿಲ್ಲೆಯಲ್ಲಿ 412 ಸೋಂಕಿತರು ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.