Rotary Club Ambalpady ವತಿಯಿಂದ ಕಟಪಾಡಿ ರಿಕ್ಷಾ ಚಾಲಕ ಮಾಲಕ ಸಂಘಕ್ಕೆ ಆಹಾರ ಕಿಟ್ ವಿತರಣೆ
Team Udayavani, Apr 23, 2020, 6:52 PM IST
ಕಟಪಾಡಿ; ಅಂಬಲಪಾಡಿ ರೋಟರಿ ಕ್ಲಬ್ ವತಿಯಿಂದ ಕಟಪಾಡಿ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರಿಗೆ ಆಹಾರ ಸಾಮಗ್ರಿಗಳನ್ನು ಒಳಗೊಂಡ 90 ಕಿಟ್ಟುಗಳನ್ನು ಕಟಪಾಡಿಯಲ್ಲಿ ವಿತರಿಸಿದರು.
ಈ ಸಂದರ್ಭ ಕಟಪಾಡಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಕಟಪಾಡಿ, ಗೌರವಧ್ಯಕ್ಷ ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾ ಪ್ರಸಾದ್, ಕಾರ್ಯದರ್ಶಿ ಮಹೇಂದ್ರಕುಮಾರ್, ಪ್ರಮುಖರಾದ ದೇವದಾಸ ಶೆಟ್ಟಿಗಾರ್, ರೂಪೇಶ್ ಆಚಾರ್, ಶ್ರೀಶ ಆಚಾರ್, ಹನೀಫ್ ಮಣಿಪುರ ಮೊದಲಾದವರು ಉಪಸ್ಥಿತರಿದ್ದರು