ದೊಡ್ಡರಂಗೇಗೌಡರ “ಹಳ್ಳಿ ಸೊಗಡು’ ಚಿತ್ರ ಈ ವಾರ ತೆರೆಗೆ: ಚಿತ್ರದ ಟ್ರೈಲರ್ ವೀಕ್ಷಿಸಿ
Team Udayavani, Sep 7, 2017, 2:40 PM IST
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕವಿ ಹಾಗೂ ಆತನ ಅಭಿಮಾನಿಯ ಕುರಿತ ಚಿತ್ರ “ಹಳ್ಳಿ ಸೊಗಡು’ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಪಿ.ಸತೀಶ್ಕುಮಾರ್ ಮೆಹ್ತಾ ನಿರ್ಮಿಸಿದ್ದು, ನೃತ್ಯ ನಿರ್ದೇಶಕ ಕಪಿಲ್ರವರು ಕಥೆ, ಚಿತ್ರಕಥೆ, ರಚಿಸಿ ನಿರ್ದೇಶನ ಮಾಡಿದ್ದಾರೆ. ಅರವ್ ಸೂರ್ಯ, ಅಕ್ಷರಾ, ಡಿಂಗ್ರಿ ನಾಗರಾಜ್, ಶಂಕರ್ ಭಟ್, ರಮಾನಂದ್, ಅರವಿಂದ್, ಮೈಕಲ್ ಮಧು, ಮಹದೇವ್, ಜ್ಯೋತಿ ಮುಂತಾದವರ ತಾರಾಬಳಗವಿದೆ. ಡಾ. ದೊಡ್ಡರಂಗೇಗೌಡ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿ. (Halli Sogadu, Trailer, Arav Surya, Doddarange Gowda, M.R. Kapil, Raaga Ramana)