“ಸಂಹಾರ’ ಮಾಡಲು ಚಿರು ರೆಡಿ: ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Oct 20, 2017, 4:10 PM IST
ಚಿರಂಜೀವಿ ಸರ್ಜಾ ಅಭಿನಯದ “ಸಂಹಾರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿರು ಅಂಧ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಅಂಧನೊಬ್ಬ ಯಾರನ್ನು ಮತ್ತು ಯಾಕೆ “ಸಂಹಾರ’ ಮಾಡುತ್ತಾನೆ ಎನ್ನುವುದೇ ಚಿತ್ರದ ಕಥೆ. ಇನ್ನು ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗದೀಶ್ ವಾಲಿ ಛಾಯಾಗ್ರಾಹಣ, ಕೆ.ಎಂ. ಪ್ರಕಾಶ್ ಕತ್ತರಿ ಪ್ರಯೋಗ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಅಂದಹಾಗೆ, ಈ ಚಿತ್ರದಲ್ಲಿ ಚಿರುಗೆ ನಾಯಕಿಯರಾಗಿ ಹರಿಪ್ರಿಯ ಮತ್ತು ಕಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರವನ್ನು ವೆಂಕಟೇಶ್ ಮತ್ತು ಸುಂದರ್ ಕಾಮರಾಜ್ ನಿರ್ಮಿಸಿದ್ದಾರೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ