ಬಾಲಿವುಡ್ ಹಾಡು ಹಾಡಿ ಫೇಮಸ್ ಆದ ನೈಜೀರಿಯಾ ಯುವಕರು
Team Udayavani, Dec 26, 2018, 10:33 AM IST
ಸಂಗೀತದ ಭಾಷೆ ವಿಶ್ವವ್ಯಾಪಿ. ಸಂಗೀತ ಪ್ರಪಂಚದ ಬೇರೆಬೇರೆ ಸಂಸ್ಕೃತಿಯ, ಭಾಷೆಯ, ಸಮುದಾಯಗಳ ಜನರನ್ನು ಬೆಸೆಯುತ್ತಿದೆ ಎಂಬ ಮಾತು ಸುಳ್ಳಲ್ಲ. 15 ವರ್ಷಗಳ ಕೆಳಗೆ ಭಾರತದ ಸಂಗೀತ ಪ್ರೇಮಿಗಳನ್ನು ಆಕರ್ಷಿಸಿದ್ದ “ಕಲ್ ಹೋ ನಾ ಹೊ’ ಚಿತ್ರದ ಶೀರ್ಷಿಕೆ ಗೀತೆ ಈಗ ದೂರದ ನೈಜೀರಿಯಾದಲ್ಲಿ ಭಾರಿ ಫೇಮಸ್ ಆಗಿದೆ.
ನೈಜೀರಿಯಾದ ಮೂವರು ಯುವಕರು ಈ ಹಾಡನ್ನು ಹಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸುಶ್ರಾವ್ಯವಾಗಿ ಅವರು ಹಾಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ. ಜೊತೆಗೆ ಭಾರತೀಯರೂ ಇದನ್ನು ಬಹುವಾಗಿ ಮೆಚ್ಚಿದ್ದಾರೆ. ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಭಾರತೀಯರು ಆ ಯುವಕರಿಗೆ ಭಾರತದ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆಯೂ ಕೋರಿದ್ದಾರೆ.