ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ತಿರಂಗ ಬಣ್ಣದಲ್ಲಿ “ಧೋಕ್ಲಾ” ತಯಾರಿಸಿ

ಮೊಸರಿನ ಜೊತೆಗೆ ನೀರನ್ನು ಬೆರಸದೇ ಚೆನ್ನಾಗಿ ಹದಮಾಡಿಕೊಳ್ಳಬೇಕು

ಶ್ರೀರಾಮ್ ನಾಯಕ್, Aug 5, 2022, 6:00 PM IST

web exclusive sri ram

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ನೀವು ಮನೆಯಲ್ಲಿಯೂ ತಿರಂಗ ಥೀಮ್ ನಲ್ಲಿ ಖಾದ್ಯಗಳನ್ನು ಮಾಡಿ ಸವಿಯಬಹುದು ಅದುವೇ “ಧೋಕ್ಲಾ” ರೆಸಿಪಿ. ಇದು ಗುಜರಾತಿನ ಜನಪ್ರಿಯ ತಿನಿಸಾಗಿದೆ. ಇದು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೆ ಇದು ಬಹಳ ಇಷ್ಟ ಪಡುವ ತಿಂಡಿಯಾಗಿದೆ . ಅದು ಮಾತ್ರವಲ್ಲದೇ  ಆರೋಗ್ಯಕ್ಕೂ ಒಳ್ಳೆಯದು . ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ . ಈ ರೆಸಿಪಿ ತುಂಬಾನೇ ಸಿಂಪಲ್ ಕೂಡ ಆಗಿದೆ . ನೀವು ಇದನ್ನು ಮನೆಯಲ್ಲಿ  ಟ್ರೈ ಮಾಡಿ .

ಬೇಕಾಗುವ ಸಾಮಗ್ರಿಗಳು
ಬೊಂಬೈ ರವೆ 2 ಕಪ್ ,ಮೊಸರು 1/4 ಕಪ್ ,ಸಕ್ಕರೆ 1 ಚಮಚ ,ಎಣ್ಣೆ 4 ಚಮಚ ,ಕ್ಯಾರೆಟ್ 1 ,ಪಾಲಕ್ 1 ಕಟ್ಟು ,ಬೇಕಿಂಗ್ ಸೋಡಾ (ಅಡುಗೆ ಸೋಡಾ)1/4 ಟೀ . ಚಮಚ ,ರುಚ್ಚಿಗೆ ತಕ್ಕಷ್ಟು .

ಒಗ್ಗರಣೆಗೆ :ಸಾಸಿವೆ ,ಕರಿಬೇವು ,ಹಸಿಮೆಣಸು ,ಎಣ್ಣೆ

ತಯಾರಿಸುವ ವಿಧಾನ
ಕ್ಯಾರೆಟ್ ಜ್ಯೂಸ್ : ಒಂದು ಕ್ಯಾರೆಟ್ ನ್ನು ತೊಳೆದು ಸಣ್ಣಗೆ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು  ಹಾಕಿ ಜ್ಯೂಸ್ ಮಾಡಿ ಇಟ್ಟುಕೊಳ್ಳಿ.

ಪಾಲಕ್ ಜ್ಯೂಸ್ : ಒಂದು ಕಟ್ ಪಾಲಕ್ ತೊಳೆದು ಸಣ್ಣಗೆ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು  ಹಾಕಿ ಜ್ಯೂಸ್ ಮಾಡಿ ಇಟ್ಟುಕೊಳ್ಳಿ.

ಮೊದಲಿಗೆ ದೊಡ್ಡ ಮಿಶ್ರಣ ಬೌಲ್ ನಲ್ಲಿ ರವೆ ಮತ್ತು ಮೊಸರಿನ ಜೊತೆಗೆ ನೀರನ್ನು ಬೆರಸದೇ ಚೆನ್ನಾಗಿ ಹದಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ,ಸಕ್ಕರೆ ,2 ಚಮಚ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ . 15 ನಿಮಿಷಗಳ ಬಳಿಕ ಒಂದು ಕಪ್ ನೀರನ್ನು ಹಾಕಿ ಮಿಕ್ಸ್ ಮಾಡಿ 3 ಸಣ್ಣ ಬೌಲ್ ಗೆ ಸಮನಾಗಿ ಪಾಲು ಮಾಡಿಕೊಳ್ಳಿ . ನಂತರ ವಿಂಗಡಿಸಿದ 3 ಬೌಲ್ ನಲ್ಲಿ 1 ಬೌಲ್ ನ್ನು ತೆಗೆದುಕೊಂಡು ಅದಕ್ಕೆ ಮಾಡಿದ  ಕ್ಯಾರೆಟ್ ಜ್ಯೂಸ್  ಹಾಕಿ ಬೇಕಿಂಗ್ ಸೋಡಾವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ . ತದನಂತರ ಒಂದು ಕಂಟೇನರ್ ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಸುತ್ತ ಸವರಿಕೊಳ್ಳಬೇಕು . ನಂತರ ಮಿಕ್ಸ್ ಮಾಡಿದ ಕ್ಯಾರೆಟ್ ಮಿಶ್ರಣ ವನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಸ್ಟೀಮ್ (ಬೇಯಿಸುವುದು)ಮಾಡಿಕೊಳ್ಳಿ.

ಉಳಿದ ಎರಡು ಬೌಲ್ ಗಳಲ್ಲಿ ಒಂದನ್ನು ತೆಗೆದುಕೊಂಡು  ಅದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಯಿಸಿಟ್ಟ ಕ್ಯಾರೆಟ್ ಮಿಶ್ರಣದ ಮೇಲೆಯೇ ಇದನ್ನು ಹಾಕಿ ಪುನಃ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ  ಬೇಯಿಸಿರಿ. ನಂತರ ಉಳಿದ ಒಂದು ಪ್ರಮಾಣದ ಬೌಲ್ ನ ಮಿಶ್ರಣಕ್ಕೆ ಪಾಲಕ್ ಜ್ಯೂಸ್ ಅನ್ನು ಹಾಕಿ ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿಟ್ಟ  ಎರಡು ಮಿಶ್ರಣಗಳ ಮೇಲೆಯೇ ಪಾಲಕ್ ಮಿಶ್ರಣವನ್ನು ಹಾಕಿ ಪುನಃ ಕಡಿಮೆ ಉರಿ ಅಲ್ಲಿ 10 ನಿಮಿಷ ಗಳ ಕಾಲ ಬೇಯಿಸಿರಿ. ನಂತರ ಧೋಕ್ಲಾವನ್ನು ತಣ್ಣಗಾಗಿಸಿದ ನಂತರ ತೆಗೆಯಿರಿ. ಅದಕ್ಕೆ ಎಣ್ಣೆ ಸಾಸಿವೆ, ಕರಿಬೇವು ಮತ್ತು ಹಸಿಮೆಣಸನ್ನು ಹಾಕಿ ಒಗ್ಗರಣೆ  ಹಾಕಿ ಅಲಂಕರಿಸಿರಿ .ನಂತರ ಧೋಕ್ಲಾ ವನ್ನು ನಿಮಗೆ ಬೇಕಾಗುವ ಆಕಾರಕ್ಕೆ ಕತ್ತರಿಸಿ. ಇದನ್ನು  ಹಸಿರು ಚಟ್ನಿಯೊಂದಿಗೆ ಸವಿಯಲು ರುಚಿಕರ.

*ಶ್ರೀರಾಮ್ ನಾಯಕ್

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.