Cinema: ಯಶ್‌,ರಾಮ್‌ಚರಣ್‌, ರಜಿನಿ ಸಿನಿಮಾದ ಗಳಿಕೆ ಮೀರಿಸಿದ ಕುಳ್ಳ ನಟ…ಯಾರೀತ?

ಈತ ನಟಿಸಿದ ಕೊನೆಯ ಮೂರು ಸಿನಿಮಾ ಗಳಿಸಿದ್ದು ಬರೋಬ್ಬರಿ...

ಸುಹಾನ್ ಶೇಕ್, Oct 12, 2023, 5:00 PM IST

tdy-16

ಬಣ್ಣದ ಲೋಕ ಎನ್ನುವುದು ಅದೃಷ್ಟ. ಸಿನಿಮಾದಲ್ಲಿ ನಟಿಸುವ ಕಲಾವಿದರು ಒಂದೊಂದೇ ಪಾತ್ರಗಳನ್ನು ಮಾಡುತ್ತಲೇ ಯಶಸ್ಸಿನ ಹಾದಿಯಲ್ಲಿ ನಡೆಯಲು ಶುರು ಮಾಡುತ್ತಾರೆ. ಅಂದುಕೊಂಡ ಹಾಗೆ ಈ ಹಾದಿಯಲ್ಲಿ ಹೆಜ್ಜೆ ಹಾಕುವುದು ಅಷ್ಟು ಸುಲಭದ ಮಾತಲ್ಲ. ಎಲ್ಲ ಸಂದರ್ಭದಲ್ಲಿ ಕಲಾವಿದರಿಗೆ ಯಶಸ್ಸೇ ಸಿಗಲ್ಲ. ಕೆಲವೊಮ್ಮೆ ಸೋಲೇ ಎದುರಾಗುತ್ತದೆ. ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಅಭಿಮಾನಿಗಳ ಹೃದಯವನ್ನು ಗೆದ್ದವ ಇಲ್ಲಿ ಸೂಪರ್‌ ಸ್ಟಾರ್‌ ಗಳಾಗುತ್ತಾರೆ.

ನೋಡಲು ಅತ್ಯಂತ ಕುಳ್ಳ ಅಂದರೆ, 4.8 ಅಡಿ ಎತ್ತರವಿರುವ ನಟನೊಬ್ಬನ ಬಣ್ಣದ ಲೋಕದ ಯಶೋಗಾಥೆಯ ಪರಿಚಯವಿದು. ಇವರು ಕಳೆದ 2 ವರ್ಷಗಳಲ್ಲಿ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. ಇವರ ಸಿನಿಮಾಗಳು ಸೂಪರ್‌ ಸ್ಟಾರ್‌ ಗಳ ಸಿನಿಮಾಗಳ ಗಳಿಕೆಯನ್ನೂ ಮೀರಿಸಿದೆ.!

ಭಾರತದ ಅತೀ ಕುಳ್ಳ ನಟ, ನಿರ್ದೇಶಕರ ಮೊದಲ ಆಯ್ಕೆ; ಯಾರು ಈ ಜಾಫರ್ ಸಾದಿಕ್? :

ಜುಲೈ 4 1995 ರಲ್ಲಿ ತಮಿಳುನಾಡಿನಲ್ಲಿ ಹುಟ್ಟಿದ ಜಾಫರ್‌ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಒಬ್ಬ ಡ್ಯಾನ್ಸರ್‌ ಹಾಗೂ ನೃತ್ಯ ಸಂಯೋಜಕರಾಗಿ‌ದ್ದರು. 20 ರ ಹರೆಯದಲ್ಲಿ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದ ಜಾಫರ್‌ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಗ್ಯಾಂಗ್ ಸ್ಟರ್‌, ಖಳನಾಯಕನ ಲುಕ್‌ ನಲ್ಲಿ. 4.8 ಅಡಿ ಎತ್ತರ ಜಾಫರ್‌ ಗ್ಯಾಂಗ್‌ ಸ್ಟರ್‌ ಗಳ ಗುಂಪಿನಲ್ಲಿ ಕಾಣಿಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರಿಗೆ ಪರಿಚಿತರಾದರು.

2020 ರಲ್ಲಿ ತೆರೆ ಕಂಡ ತಮಿಳಿನ ʼಪಾವ ಕಡೈಗಲ್ʼ ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡರು. ಅಲ್ಲಿ ಮಿಂಚಿದ ಬಳಿಕ ಅವರಿಗೆ ದೊಡ್ಡ ಬಂಪರ್‌ ಆಫರ್‌ ರೀತಿಯಲ್ಲಿ ಕಮಲ್‌ ಹಾಸನ್‌ ಅವರ  ʼವಿಕ್ರಮ್‌ʼ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು. ಈ ಸಿನಿಮಾದಲ್ಲಿ ವಿಜಯ್‌ ಸೇತುಪತಿ ಅವರ ಆಪ್ತನಾಗಿ ಗ್ಯಾಂಗ್‌ ಸ್ಟರ್‌ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡರು. ʼವಿಕ್ರಮ್‌ʼ ಸಿನಿಮಾ 414 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು.

ಇದಾದ ಬಳಿಕ ಜಾಫರ್‌ “ವೆಂದು ತಾನಿಂದು ಕಾದು”ಸಿನಿಮಾದಲ್ಲಿ ನಟಿಸಿದರು. ಆ ನಂತರ ʼಸೈತಾನ್‌ʼ ವೆಬ್‌ ಸಿರೀಸ್‌ ನಲ್ಲಿ ನಟಿಸಿ ಗಮನ ಸೆಳೆದರು. ಇದಾದ ಬಳಿಕ ಅವರ ವೃತ್ತಿ ಜೀವನದಲ್ಲಿ ಮತ್ತೆ ದೊಡ್ಡ ಬ್ಯಾನರ್‌ ನ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂತು. ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಹಾಗೂ ಇತ್ತೀಚೆಗೆ ಬಂದ ಶಾರುಖ್‌ ಖಾನ್‌ ಅವರ ʼಜವಾನ್ʼ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾ ಅವರಿಗೆ ಇನ್ನಷ್ಟು ಬೇಡಿಕೆಯ ನಟನಾಗಿ ಮಾಡಿದೆ.

ಯಶ್‌, ರಾಮ್‌ ಚರಣ್‌, ಜೂ.ಎನ್‌ ಟಿಆರ್‌ ಸಿನಿಮಾದ ಗಳಿಕೆಯನ್ನೇ ಮೀರಿಸಿದ ಸಾಧನೆ.!  

ಜಾಫರ್ ಅವರ ಚಿತ್ರಗಳು ಕಡೆಯ ಮೂರು ಸಿನಿಮಾಗಳು (ಕೋವಿಡ್‌ ಅವಧಿಯಿಂದ) 2200 ಕೋಟಿ ರೂ. ಗಳಿಸಿವೆ. ಶಾರುಖ್ ಖಾನ್ (2100 ಕೋಟಿ ರೂ.), ಮತ್ತು ಜೂನಿಯರ್ ಎನ್‌ಟಿಆರ್, ರಾಮ್ ಚರಣ್ (ಇಬ್ಬರ ಸಿನಿಮಾ 1300 ಕೋಟಿ ರೂ.), ಯಶ್ (ರೂ 1200 ಕೋಟಿ) ಮತ್ತು ರಜಿನಿಕಾಂತ್ (ರೂ. 650 ಕೋಟಿ) ಅವರ ಸಿನಿಮಾದ ಗಳಿಕೆಯನ್ನೇ ಮುರಿದಿದೆ.

ಮುಂದೆಯೂ ದೊಡ್ಡ ಸಿನಿಮಾದಲ್ಲಿ ನಟನೆ..

ಬಣ್ಣದ ಲೋಕದಲ್ಲಿ ಜಾಫರ್‌ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ʼಜವಾನ್‌ʼ ಬಳಿಕ ಜಾಫರ್‌ ಲೋಕೇಶ್‌ ಕನಕರಾಜ್‌ – ದಳಪತಿ ವಿಜಯ್‌ ಅವರ ʼಲಿಯೋ; ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಸೂರ್ಯ ಅವರ ಬಹು ನಿರೀಕ್ಷಿತ ಇನ್ನು ಟೈಟಲ್‌ ಅಂತಿಮಗೊಳ್ಳದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಇನ್ನು ‘ಪ್ಯಾರಡೈಸ್ ಸರ್ಕಸ್’ ಸಿನಿಮಾದಲ್ಲೂ ನಟಿಸಲಿದ್ದಾರೆ.

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.