Updated at Tue,25th Apr, 2017 12:25AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಒಂದು ಮೊಟ್ಟೆಯ ಕಥೆ; ಬೊಕ್ಕ ತಲೆಯ ಜನಾರ್ದನನ ವ್ಯಥೆ! 

ಲೂಸಿಯಾ ಹಾಗೂ ಯು ಟರ್ನ್ ನಿರ್ಮಾಪಕರು ಸದ್ದಿಲ್ಲದೆಯೇ "ಒಂದು ಮೊಟ್ಟೆಯ ಕಥೆ' ಚಿತ್ರ ಮಾಡಿದ್ದು ಗೊತ್ತೇ ಇದೆ. ಮೇ ತಿಂಗಳಲ್ಲಿ ಆ ಚಿತ್ರ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಪ್ರೀಮಿಯರ್‌ ಆಗುತ್ತಿದೆ ಅನ್ನೋದು ಗೊತ್ತು. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಆ ಚಿತ್ರದ ಟ್ರೇಲರ್‌ವೊಂದು ಯು ಟ್ಯೂಬ್‌ನಲ್ಲಿ ಅಪ್‌ಲೊಡ್‌ ಆಗಿ, ಜೋರು ಸುದ್ದಿ ಮಾಡುತ್ತಿದೆ. ರಾಜ್‌ ಬಿ.ಶೆಟ್ಟಿ ನಿರ್ದೇಶನದ "ಒಂದು ಮೊಟ್ಟೆ ಕಥೆ' ಟ್ರೇಲರ್‌ ನೋಡಿದರೆ, ಇಷ್ಟವಾಗದೇ ಇರದು, ಮಂಗಳೂರಿನ ಬೋಳು ತಲೆಯುಳ್ಳ ಜನಾರ್ದನ ಎಂಬ ಕನ್ನಡ ಉಪನ್ಯಾಸಕನೊಬ್ಬನ ಅಸಹಾಯಕ ಸ್ಥಿತಿ, ಅವನನ್ನು ಅಣಕಿಸುವಂತಹ ಸಂಭಾಷಣೆಗಳು, ಅವನ ತೊಳಲಾಟ ಮತ್ತು ಒಳಗಿರುವ ಸಂಕಟ ಇವೆಲ್ಲವನ್ನೂ ಚಂದದ ಟ್ರೇಲರ್‌ನಲ್ಲಿ ತೋರಿಸುವ ಮೂಲಕ "ಮೊಟ್ಟೆ' ಕಥೆ ಆಪ್ತ ಎನಿಸುತ್ತಾ ಹೋಗುತ್ತೆ. ಅಂದಹಾಗೆ, "ಒಂದು ಮೊಟ್ಟೆಯ ಕಥೆ'ಯೊಳಗಿನ ಮಾತುಗಳು ಹೀಗಿವೆ.

ಬೋಳು ತಲೆಯ ಕನ್ನಡ ಉಪನ್ಯಾಸಕ ಜನಾರ್ದನ ಹೇಳ್ತಾನೆ. "ಜೀವನದಲ್ಲಿ ಒಂದು ವಿಷಯ ಭಯಂಕರ ಇಷ್ಟ. ಅದು ಕನ್ನಡ ಭಾಷೆ. ನಿಮಗೆ ಮಾತೃಭಾಷೆಯಲ್ಲೇ ಪಾಸ್‌ ಆಗ್ಲಿಕ್ಕೆ ಆಗ್ತಾ ಇಲ್ಲ, ಬೇರೆ ವಿಷಯ ಹೆಂಗೆ ಮಾರಾಯ್ರೆ. " ಇಷ್ಟ ಇಲ್ಲ ಅಂತ ಹೇಳಿದ್ರೆ,  ಹೆಸರು...' ಹೀಗೆ ಆ ಜನಾರ್ದನ ಹೇಳುತ್ತಿದ್ದಂತೆಯೇ, "ಮೊಟ್ಟೆ, ಮೊಟ್ಟೆ ಹೆ‌ ಮೊಟ್ಟೆ, ಹೋಯ್‌ ಮೊಟ್ಟೆ..' ಎಂಬ ನಾಲ್ಕೈದು ಧ್ವನಿಗಳು ಪ್ರತಿಧ್ವನಿಸುತ್ತವೆ.

ಮದ್ವೆ ನೋಡೋಕೆ ಕಾರೊಳಗೆ ಕೂತ ಜನಾರ್ದನ ಮುಂದೆಯೇ "ಅಲ್ಲ ಇವ್ನಿಗೆ ಕೂದಲು ಇಲ್ವಂತೆ' ಎಂಬ ಮಾತೊಂದು ಕೇಳಿ ಬರುತ್ತೆ, ಆ ಮಾತಿಗೆ ಕೌಂಟರ್‌ ಎಂಬಂತೆ, "ಕೂದಲು ಇಲ್ಲ ಅಂದ್ರೆ ಎಂತಾ ಆಗಬೇಕಾ, ಮಾಡಲಿಕ್ಕೆ ಕೆಲಸ ಉಂಟು ಅಲ್ವಾ, ಕೂದಲು ಏನ್‌ ಅನ್ನ ಹಾಕ್ತದಾ..' ಎಂಬ ಮತ್ತೂಂದು ಡೈಲಾಗ್‌ ಕೇಳಿಬರುತ್ತೆ. ಆ ಮಾತುಗಳನ್ನು ಆಲಿಸುವ ಜನಾರ್ದನ ಮೌನಕ್ಕೆ ಶರಣಾಗಿರುತ್ತಾನೆ. ಇನ್ನೊಂದು ದೃಶ್ಯದಲ್ಲಿ ಪಾರ್ಕ್‌ನ ಕಲ್ಲು ಬಂಡೆ ಮೇಲೆ ಹುಡುಗಿಯೊಬ್ಬಳ ಜತೆ ಕುಳಿತ ಜನಾರ್ದನ ಎದುರು, ಆ ಹುಡುಗಿ ಹೇಳ್ತಾಳೆ, "ಕೂದ್ಲು ಸ್ವಲ್ಪ ಉದ್ದುದ ಬಂದ್ರೆ ಚಂದ ಕಾಣತ್ತೆ' ಆ ಮಾತಿಗೂ ಅವನ ಅಸಹಾಯಕ ಸ್ಥಿತಿಯ ದೃಶ್ಯ ನೋಡಿದರೆ ನಗು ಬರದೇ ಇರದು. ಇನ್ನು, ಸದಾ "ಮೊಟ್ಟ ಮೊಟ್ಟೆ' ಅಂತ ರೇಗಿಸುವ ಸ್ಟುಡೆಂಟ್ಸ್‌ಗಳಿಗೆ ಮತ್ತೂಬ್ಬ ಉಪನ್ಯಾಸಕ ಅವರಿಗೆ ಬುದ್ಧಿ ಹೇಳುವ ದೃಶ್ಯವೊಂದಿದೆ, ಅದರಲ್ಲಿ "ನಿನ್ನಪ್ಪನ ಪ್ರಾಯ ಆಯ್ತು, ಅವರಿಗೆ ಹಾಗೆ ತಮಾಷೆ ಮಾಡ್ತೇನಾ' ಅಂತಾರೆ. ಅಲ್ಲೇ ಪಕ್ಕದಲ್ಲಿದ್ದ ಜನಾರ್ದನ, "28 ..' ಅಂತ ಮೆಲುದನಿಯಲ್ಲಿ ಹೇಳ್ತಾನೆ. ಏನ್‌ ಸಾರ್‌' ಅದು ಎನ್ನುವ ಆ ಉಪನ್ಯಾಸಕನಿಗೆ "ಪ್ರಾಯ..' ಸಾರ್‌ ಅಂತಾನೆ ಜನಾರ್ದನ. "ಎಲ್ಲರ ಕೂದ್ಲು' ಉದುರ್ಲಿ ಅಂತ ದಿವಸಕ್ಕೆ ಎರಡು ಸಲ ಕೈ ಮುಗಿತೀನಿ, ಇವರೆಲ್ಲರಿಗಿಂತ ಚಂದದ ಹುಡುಗಿ ನನಗೆ ಸಿಕ್ಕಿದ ಹಾಗೆ ಪ್ರತಿ ರಾತ್ರಿ ಕನಸು ಕಾಣಿನಿ, ಸದ್ಯದಲ್ಲೇ ಮದ್ವೆ ಅಂತ ರೆಡಿಯಾಗ್ತಾ ಇದ್ದೀನಿ...' ಹೀಗೆ ಆ ಬೋಳು ತಲೆಯ ಜನಾರ್ದನನ ಸ್ಥಿತಿ ನಗುವು ಹುಟ್ಟಿಸುತ್ತೆ, ಅಲ್ಲಲ್ಲಿ ಮರುಕವೂ ತರಿಸುತ್ತೆ.
 
ಈ ಚಿತ್ರವನ್ನು ಪವನ್‌ ಕಮಾರ್‌ ಸ್ಟುಡಿಯೋಸ್‌ ಅರ್ಪಿಸುತ್ತಿದ್ದು, ಮ್ಯಾಂಗೋ ಪಿಕ್ಚರ್‌ ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಪವನ್‌ ಕುಮಾರ್‌. ಇವರೊಂದಿಗೆ ಸುಹಾನ್‌ ಪ್ರಸಾದ್‌ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.


More News of your Interest

Trending videos

Back to Top