Updated at Thu,23rd Mar, 2017 7:12PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಹಾರಾಣಿ ಹಾಸ್ಟೆಲ್ ನಲ್ಲಿ ರಾತ್ರಿ ಸೈಕೋ ಕಾಟ; ಒಳಉಡುಪು ಧರಿಸಿ ವರ್ತನೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ನಡುವೆಯೇ ಈಗ ಸೈಕೋಗಳ ಕಾಟ ಕೂಡ ಹೆಚ್ಚಾಗತೊಡಗಿದ್ದು, ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಸೈಕೋ ಕಾಟ ಕೊಡುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಮಹಾರಾಣಿ ಹಾಸ್ಟೆಲ್ ಒಳಗೆ ಮಧ್ಯರಾತ್ರಿ 12ರಿಂದ 2ಗಂಟೆಯೊಳಗೆ ಆವರಣ ಮತ್ತು ಟೆರೆಸ್ ಗೆ ಬರುವ ಈ ಸೈಕೋ ವಿದ್ಯಾರ್ಥಿನಿಯರ ಒಳ ಉಡುಪು ಕದ್ದು ಧರಿಸಿ ವಿಚಿತ್ರವಾಗಿ ವರ್ತಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಸ್ಟೆಲ್ ಹೊರಗಡೆ ಒಣಹಾಕಿರುವ ವಿದ್ಯಾರ್ಥಿನಿಯರ ಒಳಉಡುಪನ್ನು ಧರಿಸಿ ಕಾಟ ಕೊಡುತ್ತಿರುವ ಸೈಕೋವನ್ನು ಕಂಡು ವಿದ್ಯಾರ್ಥಿನಿಯರು ದೊಣ್ಣೆ ಹಿಡಿದು ಓಡಿಸಿದ್ದಾರೆ. ಟರ್ಫ್ ಕ್ಲಬ್ ನಿಂದ ಹಾಸ್ಟೆಲ್ ಆವರಣದೊಳಗೆ ನುಗ್ಗುವ ಸೈಕೋ ರಾತ್ರಿ ಹೊತ್ತು ಕಾಟ ಕೊಡುತ್ತಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲು ದೂರು ದಾಖಲಾಗಿದೆ.


More News of your Interest

Trending videos

Back to Top