ಅನ್ನದಾತರೇ ಆತ್ಮಹತ್ಯೆ ಆಲೋಚಿಸದಿರಿ

Team Udayavani, Mar 22, 2017, 2:54 PM IST

dvg2.jpg

ದಾವಣಗೆರೆ: ರೈತರು ಸಾಲ ಮತ್ತಿತರ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೆಟ್ಟ ಹಾದಿ ತುಳಿಯಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮನವಿ ಮಾಡಿದ್ದಾರೆ. ಮಂಗಳವಾರ ನಗರ ಪೊಲೀಸ್‌ ಉಪಾಧೀಕ್ಷಕರ ಕಚೇರಿಆವರಣದಲ್ಲಿ ರೈತ ಮುಖಂಡರು, ಬ್ಯಾಂಕ್‌ ಅಧಿಕಾರಿಗಳ ಸಮಕ್ಷಮದಲ್ಲಿ ರೈತರ ಬ್ಯಾಂಕ್‌ ಸಾಲ, ಸಮಸ್ಯೆಗಳ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರು ಸಾಲದ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಾಕ್ಷಣ ಆ ಸಮಸ್ಯೆ ಬಗೆಹರಿಯದು. ಆದರೆ, ಕುಟುಂಬ ಸದಸ್ಯರು ಸಾಲದ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರ ಅಲ್ಲವೇ ಅಲ್ಲ. ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿ ಹಿಡಿಯಬಾರದು ಎಂದು ಕೋರಿದರು. ಯಾವುದೇ ಬ್ಯಾಂಕ್‌, ಫೈನಾನ್ಸ್‌, ಲೇವಾದೇವಿಯವರಿಂದ ನೋಟಿಸ್‌ ಜಾರಿ, ಕಿರುಕುಳ ನೀಡಿದಲ್ಲಿ ಪೊಲೀಸ್‌ ಇಲಾಖೆಯ ಗಮನಕ್ಕೆ ತರಬೇಕು.

ಎಂತದ್ದೇ ಪರಿಸ್ಥಿತಿಯಲ್ಲೂ ರೈತರು ಧೃತಿ,ಧೈರ್ಯಗೆಡಬಾರದು. ಪೊಲೀಸ್‌ ಈಗಲ್ಲ ಸದಾ ರೈತರೊಂದಿಗೆ ಇರುತ್ತದೆ ಎಂಬ ಭರವಸೆ ನೀಡಿದರು.  ಕೆಲ ಖಾಸಗಿ ಬ್ಯಾಂಕ್‌, ಹಣಕಾಸು ಸಂಸ್ಥೆಯವರಿಂದ ಸಾಕಷ್ಟು ಕಿರುಕುಳ ಇದೆ ಎಂಬುದರ ಬಗ್ಗೆ ಸಭೆಯಲ್ಲಿ ರೈತರು ತಿಳಿಸಿದ್ದಾರೆ. ಹಾಗೆಯೇ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತ್ಯೇಕ ಸಭೆ ನಡೆಸಲಾಗುವುದು. ಕಿರುಕುಳ ನೀಡುತ್ತಿರುವ ಬಗ್ಗೆ ಗಮನಕ್ಕೆ ತಂದಲ್ಲಿ ಸಂಬಂಧಿತ ಫೈನಾನ್ಸ್‌ ಕಂಪನಿಯವರಿಗೆ ಇಲಾಖೆಯಿಂದ ನೋಟಿಸ್‌ ನೀಡಲಾಗುವುದು ಎಂದು ತಿಳಿಸಿದರು. 

ಈ ರೀತಿಯ ಸಭೆ ನಡೆಸುವಂತೆ ಸೂಚನೆ ಬಂದಿಲ್ಲ. ಆದರೂ, ಈಚೆಗೆ ರೈತರೊಬ್ಬರ ಆತ್ಮಹತ್ಯೆ ಪ್ರಕರಣ ನಮ್ಮ ಗಮನಕ್ಕೆ ಬಂದಿತು. ಇಂದು ನಾವೆಲ್ಲ ಕೆಲಸ ಮಾಡಲು ಒಂದು ರೀತಿಯಲ್ಲಿ ಪರೋಕ್ಷ ಸಹಾಯ ಮಾಡುತ್ತಿರುವರು ರೈತರು. ಹಾಗೆಯೇ ನಾನು ಕೂಡಾ ರೈತ ಕುಟುಂಬದಿಂದ ಬಂದವನು. ಸಾಲ ಮತ್ತಿತರ ಕಾರಣಕ್ಕೆ ಅನ್ನದಾತರು ಆತ್ಮಹತ್ಯೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ.

ಇಂದಿನ ಸಭೆಯಲ್ಲಿ ಅನೇಕರು ವ್ಯಕ್ತಪಡಿಸಿದ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಲೀಡ್‌ ಬ್ಯಾಂಕ್‌ ಮೂಲಕ ಸರ್ಕಾರ, ಸಂಬಂಧಿತರ ಗಮನಕ್ಕೆ ತರಲಾಗುವುದು. ಏನೇ, ಎಂತದ್ದೇ ಪರಿಸ್ಥಿತಿಯೇ ಇರಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲೇಬಾರದು ಎಂದು ವಿನಂತಿಸಿಕೊಂಡರು. ಲೀಡ್‌ ಬ್ಯಾಂಕ್‌ ಮುಖ್ಯ ಪ್ರಬಂಧಕ ಎನ್‌.ಟಿ. ಎರ್ರಿಸ್ವಾಮಿ ಮಾತನಾಡಿ, ಸತತ ಎರಡು ವರ್ಷದ ಬರದ ಹಿನ್ನೆಲೆಯಲ್ಲಿ ಆರ್‌ಬಿಐ ಸುತ್ತೋಲೆಯಂತೆ ಯಾವುದೇ ರೈತರಿಗೆ ಸಾಲದ ತೀರುವಳಿ ನೋಟಿಸ್‌ ನೀಡುವಂತಿಲ್ಲ.

ಅಡವಿಟ್ಟಂತಹ ಚಿನ್ನವನ್ನು ಹರಾಜು, ಟ್ರಾÂಕ್ಟರ್‌ ಮತ್ತಿತರ ವಸ್ತುಗಳನ್ನು ಜμ¤ ಮಾಡುವಂತೆಯೇ ಇಲ್ಲ. ಅಲ್ಪಾವಧಿ ಬೆಳೆ ಸಾಲವನ್ನು ಮಧ್ಯಮಾವಧಿ, ಮಧ್ಯಮಾವಧಿ ಸಾಲವನ್ನು ಧೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಲಾಗುವುದು. ಬರಗಾಲದ ಸಂದರ್ಭದಲ್ಲಿ ರೈತರ ಅನುಕೂಲಕ್ಕೆ ಇರುವ ಹಲವಾರು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು.

ನಾವು ರೈತ ಕುಟುಂಬದಿಂಲೇ ಬಂದವರು. ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದರು. ರೈತ ಮುಖಂಡ ತೇಜಸ್ವಿ ಪಟೇಲ್‌ ಮಾತನಾಡಿ, ಬಸವಾಪಟ್ಟಣ ಕೆನರಾ ಬ್ಯಾಂಕ್‌, ಕತ್ತಲಗೆರೆ ವಿಜಯಾಬ್ಯಾಂಕ್‌ನಿಂದ ಸಾಲ ತೀರುವಳಿ ಸಂಬಂಧ ರೈತರಿಗೆ ನೋಟಿಸ್‌ ಬಂದಿದೆ. ಈ ಬಗ್ಗೆ ಸಂಬಂಧಿತರು ಗಮನ ನೀಡಿ, ಕ್ರಮ ತೆಗೆದುಕೊಳ್ಳಬೇಕು. ಬರದ ಹಿನ್ನೆಲೆಯಲ್ಲಿ ಸಾಲ ಪಾವತಿಗೆ ಸಮಯದ ಅವಕಾಶ ಮಾಡಿಕೊಟ್ಟಾಕ್ಷಣಕ್ಕೆ ರೈತರ ಸಾಲ ಕಟ್ಟುವ ಸಾಮರ್ಥ್ಯ ಹೆಚ್ಚಾಗುತ್ತದೆಯೇ ಎಂಬುದನ್ನು ಸಂಬಂಧಿತರು ಗಮನಿಸಬೇಕು.

ಈ ಬಗ್ಗೆ ಸರ್ಕಾರಗಳಿಗೆ ಸವಿವರವಾದ ಪತ್ರ ಬರೆದು, ರೈತರ ವಾಸ್ತವ ಸ್ಥಿತಿ ತಿಳಿಸಬೇಕು. ಸಾಧ್ಯವಾದರೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಮುಖಂಡರಾದ ಬಲ್ಲೂರು ರವಿಕುಮಾರ್‌, ಅರುಣ್‌ಕುಮಾರ್‌ ಕುರುಡಿ, ಹೊನ್ನೂರು ಮುನಿಯಪ್ಪ, ಬಿ. ನಾಗೇಶ್ವರರಾವ್‌, ಎಂ.ಎಸ್‌.ಕೆ. ಶಾಸ್ತ್ರಿ. ಮಲ್ಲಾಪುರದ ದೇವರಾಜ್‌, ಪೂಜಾರ್‌ ಅಂಜಿನಪ್ಪ, ವಾಸನದ ಓಂಕಾರಪ್ಪ, ಸುರೇಂದ್ರಪ್ಪ, ಹಾಳೂರು ನಾಗರಾಜಪ್ಪ ಇತರರು ಮಾತನಾಡಿದರು. ನಗರ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್‌, ವೃತ್ತ ನಿರೀಕ್ಷಕ ಬಿ.ಎಸ್‌. ಸಂಗನಾಥ್‌, ಪಿಎಸ್‌ಐಗಳಾದ ಟಿ. ರಾಜಣ್ಣ, ಭವ್ಯಾ, ಪಿ.ವೈ. ಶಿಲ್ಪಾ, ಸಿದ್ದಪ್ಪ ಮೇಟಿ ಇತರರು ಇದ್ದರು.

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.