ಮುಂಗಾರಿನ ಜತೆಗೆ ಡಿಸ್ಕೌಂಟ್‌ ಮಳೆ; 80%ರವರೆಗೂ ರಿಯಾಯ್ತಿ ಘೋಷಣೆ


Team Udayavani, Jun 27, 2017, 3:45 AM IST

GST-2017.jpg

ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ಜತೆಗೆ ವಿವಿಧ ಸರಕುಗಳ ಮೇಲೆ ಡಿಸ್ಕೌಂಟ್‌ಗಳ ಮಳೆ ಸುರಿಯುತ್ತಿದೆ. ಜು.1ರಿಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗುವುದರಿಂದ ಎಲ್ಲಾ ರೀತಿಯ ಜನಪ್ರಿಯ ವಸ್ತ್ರಗಳ, ಗೃಹೋಪಯೋಗಿ ಮಳಿಗೆಗಳು, ಮೊಬೈಲ್‌, ಕಾರು ಮತ್ತು ದ್ವಿಚಕ್ರ ಮಾರಾಟದ ಶೋ ರೂಮ್‌ಗಳು ಸ್ಪರ್ಧೆಗೆ ಬಿದ್ದವರಂತೆ ರಿಯಾಯಿತಿ ಘೋಷಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷ, ಮಳೆಗಾಲ, ದಸರೆ, ಗಣೇಶನ ಹಬ್ಬ, ದೀಪಾವಳಿ ಎಂದು ಶೇ.50ರವರೆಗೆ ರಿಯಾಯಿತಿ ಘೋಷಣೆ ಮಾಡುತ್ತಿದ್ದರು. ಆದರೆ ಈ ಬಾರಿ ಅದರ ಪ್ರಮಾಣ ಶೇ.80ರಷ್ಟು!

ಅಂಗಡಿ ಮುಂಗಟ್ಟುಗಳಲ್ಲಿ ಶೇ.50ರಷ್ಟು ಡಿಸ್ಕೌಂಟ್‌ ಘೋಷಿಸಿದ್ದರೆ, ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಶೇ.80ರ ವರೆಗೆ ವಿವಿಧ ವಸ್ತುಗಳಿಗೆ ರಿಯಾಯಿತಿ ಘೋಷಣೆ ಮಾಡಿದ್ದಾರೆ.
ಶೇ.40ರಷ್ಟು ರಿಯಾಯಿತಿ: ಗೃಹೋಪಯೋಗಿ ವಸ್ತುಗಳಾದ ಟಿವಿ, ಪ್ರಿಡ್ಜ್, ಎ.ಸಿ. ವಾಷಿಂಗ್‌ ಮೆಷಿನ್‌ಗಳ ಮೇಲೆ ಶೇ.20-ಶೇ.40ರ ವರೆಗೆ ರಿಯಾಯಿತಿ ಇದೆ.

ಸಾಮಾನ್ಯವಾಗಿ ಶೇ.10ರಿಂದ ಶೇ.15ರ ವರೆಗೆ ಡಿಸ್ಕೌಂಟ್‌ ನೀಡುತ್ತಿದ್ದರು. ಆದರೆ ಈ ಬಾರಿ ಹಾಗಿಲ್ಲ. ಸ್ಯಾಮ್‌ಸಂಗ್‌, ಪ್ಯಾನಾಸಾನಿಕ್‌, ಹಿಟಾಚಿ ಮತ್ತು ವಿಡಿಯೋಕಾನ್‌ ಕಂಪನಿಗಳು ತಮ್ಮ ವಿವಿಧ ಸ್ತರದ ಗೃಹೋಪಯೋಗಿ ಉಪಕರಣಗಳಿಗೆ ಮಾರಾಟದ ಬಳಿಕವೂ ವಿಸ್ತೃತ ಸೇವೆಯ ಖಾತರಿ (ಎಕ್ಸ್‌ಟೆಂಡೆಡ್‌ ಸರ್ವಿಸ್‌ ಗ್ಯಾರಂಟಿ) ನೀಡುತ್ತಿವೆ. ಎಲ್‌ಜಿ ಇಂಡಿಯಾ ದುಬಾರಿ ಐಟಂಗಳಿಗೆ ಆಕರ್ಷಕ ಇಎಂಐಗಳನ್ನೂ ಘೋಷಣೆ ಮಾಡಿವೆ.

ಕಾರು ಮತ್ತು ಬೈಕ್‌ಗಳು: ಮುಂದಿನ ತಿಂಗಳಿಂದ ಕಾರುಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರ ಜತೆಗೆ ಸೆಸ್‌ ಕೂಡ ಇದೆ. ಕಾರುಗಳ ವಿಭಾಗಕ್ಕೆ ಅನ್ವಯವಾಗಿ ಶೇ.1, 3 ಅಥವಾ ಶೇ.15 ಎಂದು ನಿಗದಿ ಮಾಡಲಾಗುತ್ತದೆ.

ಮಹೀಂದ್ರಾ, ಹ್ಯುಂಡೈ,  ಫೋರ್ಡ್‌ ಕಾರುಗಳು ಪೈಪೋಟಿಗೆ ಇಳಿದವರಂತೆ ಡಿಸ್ಕೌಂಟ್‌ ನೀಡುತ್ತಿದ್ದಾರೆ. ಹ್ಯುಂಡೈನ ಇಲೈಟ್‌ ಐ20 ಕಾರಿಗೆ 25 ಸಾವಿರ ರೂ.ಗಳಿಂದ ಸಾಂಟಾ ಎಫ್ಇ ಮಾದರಿ ಕಾರ್‌ಗೆ 2.50 ಲಕ್ಷ ರೂ. ವರೆಗೆ ವಿನಾಯಿತಿ ಘೋಷಣೆ ಮಾಡಿದೆ. ಮಹೀಂದ್ರಾ ಸ್ಕಾರ್ಪಿಯೋ ಮೇಲೆ 27 ಸಾವಿರ ರೂ., ಟಿಯುವಿ300 ಮೇಲೆ 61 ಸಾವಿರ ರೂ, ಮತ್ತು ಕೆಯುವಿ100 ವಾಹನದ ಮೇಲೆ 72 ಸಾವಿರ ರೂ., ಎಕ್ಸ್‌ಯುವಿ500ಕ್ಕೆ 90 ಸಾವಿರ ರೂ. ಡಿಸ್ಕೌಂಟ್‌ ನೀಡಿದೆ. ಫೋಕ್ಸ್‌ ವ್ಯಾಗನ್‌ ಕೂಡ 76 ಸಾವಿರ ರೂ. ವರೆಗೆ ವಿನಾಯಿತಿ ನೀಡಿದೆ.

ವಾರ್ಡ್‌ರೋಬ್‌ ರಿಫ್ರೆಶ್‌: ಸಿದ್ಧ ಉಡುಪು ಮತ್ತಿತ್ರ ಬ್ರಾಂಡೆಡ್‌ ವಸ್ತುಗಳ ಮೇಲೆ ಶೇ.18ರಷ್ಟು ತೆರಿಗೆ ಹಾಕಲು ನಿರ್ಧರಿಸಿರುವುದರಿಂದ ಜನಪ್ರಿಯ ಬ್ರಾಂಡ್‌ಗಳಾದ ವುಡ್‌ಲ್ಯಾಂಡ್‌ ಬಿಬಾ, ವ್ಯಾನ್‌ ಹ್ಯೂಸೆನ್‌, ಅಲೆನ್‌ ಸಾಲಿ ಮತ್ತಿತರ ಬ್ರಾಂಡ್‌ಗಳು ತಮ್ಮ ವಸ್ತುಗಳ ಮೇಲೆ ಡಿಸ್ಕೌಂಟ್‌ ಘೋಷಣೆ ಮಾಡಿವೆ.

ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿಯೂ ಉಡುಗೆ-ತೊಡುಗೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹೆಚ್ಚಿನ ಎಲ್ಲ ಐಟಂಗಳನ್ನು ಫ್ಲಿಪ್‌ ಕಾರ್ಟ್‌, ಅಮೆಜಾನ್‌ನಲ್ಲಿ  ಶೇ.60ರಿಂದ ಶೇ.80ರ ವರೆಗೆ ರಿಯಾಯಿತಿ ನೀಡಲಾಗಿದೆ. ಅಮೆಜಾನ್‌ನಲ್ಲಿ ಅದಕ್ಕೆ “ವಾರ್ಡ್‌ರೋಬ್‌ ರಿಫ್ರೆಶ್‌ ‘ ಎಂದು ಹೆಸರಿಸಲಾಗಿದೆ. ಮಿಂತ್ರಾದಲ್ಲಿ ಶೀಘ್ರದಲ್ಲಿಯೇ ಆರನೇ ಆವೃತ್ತಿಯ “ಎಂಡ್‌ ಆಫ್ ಸೀಸನ್‌ ಸೇಲ್‌’ ಶುರುವಾಗಿ, ಭಾರಿ ಜನಪ್ರಿಯತೆ ಗಳಿಸಿದೆ.

ಆಫ‌ರ್‌ಗಳ ಝಲಕ್‌
ಪ್ರಮುಖ ಉಡುಗೆ ತೊಡುಗೆಗಳ ಬ್ರಾಂಡ್‌ಗಳಲ್ಲಿ
ನೈಕ್‌- ಕೆಲ ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯಿತಿ.
ಇನ್ನು ಕೆಲವು ಪಾದರಕ್ಷೆಗಳ ಮೇಲೆ ಶೇ.25-35 ಡಿಸ್ಕೌಂಟ್‌
ಲಿವೈಸ್‌- ಎಲ್ಲ ಮಾದರಿ ಜೀನ್ಸ್‌ ಮೇಲೆ ಫ್ಲಾಟ್‌ ಶೇ.40 ರಿಬೇಟುಕೆಲವು ದಿರಿಸು ಕೊಂಡರೆ ಶೇ.50 ರಿಯಾಯಿತಿ
ಪುಮಾ- ಶೇ.40
ಆ್ಯರೋ-  ಎರಡು ಶರ್ಟ್‌ ಕೊಂಡರೆ 2 ಉಚಿತ
ಐದಕ್ಕಿಂತ ಹೆಚ್ಚು ಶರ್ಟ್‌ ಕೊಂಡರೆ ಟೋಟಲ್‌ ಬಿಲ್‌ನಲ್ಲಿ ಶೇ.40ರಷ್ಟು ರಿಯಾಯಿತಿ

ಶೇ.80ರ ವರೆಗೆ ಡಿಸ್ಕೌಂಟ್‌ ನೀಡಿದ್ದರಿಂದ 20 ಮಿಲಿಯ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆಂಬ ವಿಶ್ವಾಸವಿದೆ. ಇಷ್ಟು ಮಾತ್ರವಲ್ಲದೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.18ರಷ್ಟು ಮಾರಾಟ ಹೆಚ್ಚಾಗಿದೆ. ಪ್ರತಿ ದಿನ 3 ಲಕ್ಷ ವಸ್ತುಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದ್ದೇವೆ.
– ಅನಂತ ನಾರಾಯಣ, ಮಿಂತ್ರಾ-ಜಬಂಗ್‌ ಸಿಇಓ

ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿರುವ ಆ್ಯರೋ ಶರ್ಟ್‌ ಶೋರೂಮ್‌ನ ಸ್ಟೋರ್‌ ಮ್ಯಾನೇಜರ್‌ ಜೀವನ್‌ ಕುಮಾರ್‌ ಹೇಳುವುದೇ ಬೇರೆ. ಹಿಂದಿನ ವರ್ಷದಂತೆ ಈ ವರ್ಷವೂ ಕಂಪನಿ ವತಿಯಿಂದ ಶೇ.40ರಷ್ಟು ರಿಯಾಯಿತಿ ಕೊಡಲಾಗಿದೆ. ಸಾಮಾನ್ಯವಾಗಿ ಬೇಸಗೆ ಮುಕ್ತಾಯವಾಗಿ ಮಳೆಗಾಲ ಬರುತ್ತಿರುವಂತೆ ಹಳೆಯ ಸಂಗ್ರಹ ಮುಗಿಸಲು ಕಂಪನಿ ವಿವಿಧ ರೀತಿಯ ದುಸ್ತುಗಳ ಮೇಲೆ  ಡಿಸ್ಕೌಂಟ್‌ ನೀಡುತ್ತೇವೆ. ಹೊಸತಾಗಿ ಜಾರಿಯಾಲಿರುವ ವ್ಯವಸ್ಥೆ ಮತ್ತು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಭರಪೂರ ಡಿಸ್ಕೌಂಟ್‌ಗೆ ಹೆಚ್ಚಿನ ಅರ್ಥ ಕಲ್ಪಿಸುವುದು ಬೇಡ ಎಂದು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಪ್ಯಾಂಟಲೂನ್ಸ್‌ ಮಳಿಗೆಯಲ್ಲಿ ಮಾರುಕಟ್ಟೆ ಮೌಲ್ಯ 10 ಸಾವಿರ ರೂ.ಗಳಷ್ಟು ಖರೀದಿ ಮಾಡಿದರೆ, 5 ಸಾವಿರ ರೂ.ಗಳಷ್ಟು ಆಫ‌ರ್‌ ಕೊಡುತ್ತಿದ್ದಾರೆ. ಮುಂದಿನ ತಿಂಗಳ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಇಂಥ ಡಿಸ್ಕೌಂಟ್‌ ಸೇಲ್‌ ಮಾಡುತ್ತಿದ್ದಿರಾ ಎಂಬ ಪ್ರಶ್ನೆಗೆ ಮಳಿಗೆಯ ಜಾಣತನದಿಂದ ಉತ್ತರಿಸಿದ ಮಳಿಗೆಯ ಅಧಿಕಾರಿ, ನವದೆಹಲಿ. ಮುಂಬೈ, ಗುರುಗಾಂವ್‌ನಲ್ಲಿಯೂ ಇದೇ ಮಾದರಿ ಆಫ‌ರ್‌ ಇದೆ ಎಂದು ಹೇಳಿದ್ದಾರೆ.ಆದರೆ ನವದೆಹಲಿ, ಮುಂಬೈನಲ್ಲಿರುವ ಜನಪ್ರಿಯ ಬ್ರಾಂಡ್‌ಗಳಾಗಿರುವ ನೈಕ್‌, ಲಿವೈಸ್‌, ಅಡಿಡಾಸ್‌, ಪೂಮಾ, ಆ್ಯರೋ ಗಳ ಪ್ರಧಾನ ಕಚೇರಿಗಳಿಂದಲೇ ಭಾರಿ ಪ್ರಮಾಣದ ಡಿಸ್ಕೌಂಟ್‌ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ತಿಂಗಳಿನಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶೇ.80ರ ವರೆಗೆ ಡಿಸ್ಕೌಂಟ್‌ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿವೆ.

ಜಿಎಸ್‌ಟಿ ಜಾರಿಯಿಂದ ವಸ್ತುಗಳ ದರದಲ್ಲಿ ಏರಿಕೆಯಾಗುತ್ತದೆ ಎಂಬ ಹೆದರಿಕೆ ಬೇಡ. ಅಗತ್ಯ ವಸ್ತುಗಳು, ಅನುಕೂಲಕರ ಮತ್ತು ಐಷಾರಾಮಿ ಎಂದು ವಿಭಾಗಿಸಿದ್ದರಿಂದ ಜನರಿಗೆ ತೊಂದರೆ ಏನೂ ಆಗದು. ಸದ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಡಿಸ್ಕೌಂಟ್‌ ಸೇಲ್‌ ಮುಂದಿನ ವ್ಯವಹಾರಗಳಿಗೆ ಅನುಕೂಲವಾಗಲಿ ಎಂದು ನಡೆಯುತ್ತಿದೆ.
– ರಮೇಶ್‌ ಕಟ್ಟಾ, ಚಾರ್ಟರ್ಡ್‌ ಅಕೌಂಟೆಂಟ್‌

ಸದ್ಯಕ್ಕೆ ಜಿಎಸ್‌ಟಿಯಿಂದ ದರ ಏರಿಕೆಯಾಗಲಾರದು ಎಂದು ಮೇಲ್ನೋಟಕ್ಕೆ ಕಂಡರೂ ವಸ್ತು ಸ್ಥಿತಿ ಹಾಗೆ ಇರದು. ನಿಜಕ್ಕೂ ಹೇಳುವುದಾದರೆ, ಹೊಸ ತೆರಿಗೆ ಪದ್ಧತಿ ಜಾರಿಗೆ ಪೂರ್ಣ ಪ್ರಮಾಣದ ಸಿದ್ಧತೆಯೇ ನಡೆದಿಲ್ಲ ಎಂದು ಕಾಣುತ್ತದೆ.
– ಕೆ.ಈಶ್ವರ ಭಟ್‌, ಷೇರುಪೇಟೆ ತಜ್ಞ.

– ಸದಾಶಿವ ಖಂಡಿಗೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.